ಡಿಪೋ ಮ್ಯಾನೇಜರ್ ಕಿರುಕುಳ : ಬಸ್ಸಿನಲ್ಲಿಯೇ ಕಂಡಕ್ಟರ್ ಆತ್ಮಹತ್ಯೆ
ಬೆಂಗಳೂರು, ಮಾರ್ಚ್ 25 : ಡ್ರೈವರ್ ಕಮ್ ಕಂಡಕ್ಟರ್ ಬಸ್ಸಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಶಿವರಾಜ್ ಮುಧೋಳ (38) ಎಂದು ಗುರುತಿಸಲಾಗಿದೆ. ಸುಮಾರು 15 ವರ್ಷದಿಂದ ಡ್ರೈವರ್ ಕಮ್ ಕಂಡಕ್ಟರ್ ಆಗಿದ್ದ ಶಿವರಾಜ್ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಸವಕಲ್ಯಾಣ-ಹೈದರಾಬಾದ್ ಸಂಖ್ಯೆ ಕೆಎ 38, ಎಫ್ 1015 ಬಸ್ಸಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸವಕಲ್ಯಾಣ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸವಕಲ್ಯಾಣ ಡಿಪೋದಿಂದ ಔರಾದ್ ಡಿಪೋಗೆ ವರ್ಗಾವಣೆ ಮಾಡುವಂತೆ ಶಿವರಾಜ್ ಮುಧೋಳ ಮನವಿ ಮಾಡಿದ್ದರು. ಆದರೆ, ಡಿಪೋ ಮ್ಯಾನೇಜರ್ 5 ಸಾವಿರ ರೂ. ಲಂಚ ಕೇಳಿದ್ದರು ಎಂದು ಆರೋಪಿಸಲಾಗಿದೆ.
ಇದರಿಂದ ಮನನೊಂದ ಶಿವರಾಜ್ ಮುಧೋಳ ಬಸ್ಸಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಪೋ ಮ್ಯಾಜೇಜರ್ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಡಿಪೋದ ನೌಕರರು ದೂರಿದ್ದಾರೆ.












Click it and Unblock the Notifications