ಹೆಲ್ಮೆಟ್ ಧರಿಸದಿದ್ದರೆ 3 ತಿಂಗಳ ಕಾಲ ಲೈಸೆನ್ಸ್ ರದ್ದು; ತಕ್ಷಣದಿಂದ ಜಾರಿ

ಬೆಂಗಳೂರು, ಅಕ್ಟೋಬರ್ 19 : ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದರೆ ಇಷ್ಟು ದಿನ ದಂಡ ಕಟ್ಟಬೇಕಿತ್ತು. ಇನ್ನು ಮುಂದೆ ಮೂರು ತಿಂಗಳ ಅವಧಿಗೆ ಲೈಸೆನ್ಸ್ ಕ್ಯಾನ್ಸಲ್ ಆಗಲಿದೆ. ಬೆಂಗಳೂರು ನಗರದಲ್ಲಿ ಈ ನಿಯಮ ಜಾರಿಗೆ ಬರುತ್ತಿದೆ.

ಸಾರಿಗೆ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಪ್ರಕಾರ ಬೈಕ್ ಓಡಿಸುವವರು, ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಆದರೆ, ಈ ನಿಯಮವನ್ನು ಜನರು ಉಲ್ಲಂಘನೆ ಮಾಡುತ್ತಿದ್ದಾರೆ.

ಇನ್ನು ಮುಂದೆ ಹೆಲ್ಮೆಟ್ ಧರಿಸದಿದ್ದರೆ ದಂಡ ಹಾಕುವುದು ಮಾತ್ರವಲ್ಲ, ಲೈಸೆನ್ಸ್‌ ಅನ್ನು 3 ತಿಂಗಳ ಕಾಲ ರದ್ದುಗೊಳಿಸಿ ಎಂದು ಎಲ್ಲಾ ಆರ್‌ಟಿಓ ಕಚೇರಿಗಳಿಗೆ ಸಾರಿಗೆ ಇಲಾಖೆ ಸೂಚನೆ ನೀಡಿದೆ, ಈ ಕುರಿತು ಪತ್ರ ಬರೆದಿದೆ.

DL Suspend For Three Months If Ride The Bike Without Wearing Helmet

ಆದೇಶದಲ್ಲಿ ಏನಿದೆ? : ಇನ್ನು ಮುಂದೆ ಹೆಲ್ಮೆಟ್ ಧರಿಸದೇ ಸಂಚರಿಸುವ ಎಲ್ಲಾ ವಾಹನ ಸವಾರರ ವಿರುದ್ಧ ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 194-ಡಿ ಅನ್ವಯ ಸರ್ಕಾರದ ಅಧಿಸೂಚನೆ ಸಂಖ್ಯೆ ಟಿಡಿ 250, ಟಿಡಿಓ 2019, ದಿನಾಂಕ 21/9/2020ರಲ್ಲಿ ಸೂಚಿಸಲಾಗಿದೆ.

ದಂಡ ವಸೂಲಾತಿಯೊಂದಿಗೆ ವಾಹನ ಸವಾರರ ಚಾಲನಾ ಪರವಾನಿಗೆಯನ್ನು ಕನಿಷ್ಠ ಮೂರು ತಿಂಗಳ ಅವಧಿಗೆ ಅಮಾನತ್ತುಗೊಳಿಸುವ ಪ್ರಕ್ರಿಯೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ/ಸಹಾಯಕ ಪ್ರಾದೇಶಿಕ ಅಧಿಕಾರಿಗಳಿಗೆ/ಪ್ರವರ್ತನ ಅಧಿಕಾರಿಗಳಿಗೆ & ಸಿಬ್ಬಂದಿಗೆ ಸೂಚಿಸಿದೆ.

ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದರೆ ದಂಡ ಕಟ್ಟಬೇಕು. ಆದರೆ, ಈ ನಿಯಮವನ್ನು ಹಲವು ಜನರು ಪಾಲನೆ ಮಾಡುವುದಿಲ್ಲ. ಅಪಘಾತ ನಡೆದರೆ ಜೀವವನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ, ಈ ತೀರ್ಮಾನ ಕೈಗೊಳ್ಳಲಾಗಿದೆ.

ಸುಪ್ರೀಂಕೋರ್ಟ್‌ನ ರಸ್ತೆ ಸುರಕ್ಷತಾ ಸಮಿತಿಯೊಂದಿಗೆ 5/10/2020ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಿದ್ದರು. ಆಗ ಲೈಸೆನ್ಸ್ ರದ್ದುಗೊಳಿಸುವ ಕುರಿತು ಸೂಚನೆಗಳನ್ನು ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+