ಬೆಂಗಳೂರು ತಲುಪಿದ ಎತ್ತಿನಹೊಳೆ ವಿರೋಧಿ ಹೋರಾಟ

ಮಂಗಳೂರು, ಜ.23 : ಎತ್ತಿನಹೊಳೆ ಯೋಜನೆ ಜಾರಿಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಜ.28ರಂದು ಯೋಜನೆ ವಿರೋಧಿಸಿ ಬೆಂಗಳೂರಿನಲ್ಲಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಜ.31ರಂದು ಯೋಜನೆಗೆ ಶಿಲಾನ್ಯಾಸ ಮಾಡುವುದಾಗಿ ಹೇಳಿರುವ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಜ.28ರಂದು ಮಂಗಳೂರಿನ ನಾಗರಿಕರು, ಶಾಸಕರು, ಸಚಿವರರೊಂದಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎತ್ತಿನಹೊಳೆ ಯೋಜನೆ ವಿರೋಧಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗಡೆ ಹೇಳಿದ್ದಾರೆ. ಪರಿಸರ ಒಕ್ಕೂಟ, ನೇತ್ರಾವತಿ ಉಳಿಸಿ ಅಭಿಯಾನ ಮುಂತಾದ ಸಂಘಟನೆಗಳು ಈ ಪ್ರತಿಭಟನೆಗೆ ಕೈ ಜೋಡಿಸಿವೆ ಎಂದು ಹೆಗಡೆ ಹೇಳಿದರು.

ಜ.31ರಂದು ಎತ್ತಿನಹೊಳೆ ಯೋಜನೆಗೆ ಶಿಲಾನ್ಯಾಸ ಮಾಡುವುದಾಗಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳಿರುವುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ. ಮೊಯ್ಲಿ ರಾಜಕೀಯ ದಾರಿ ತೋರಿಸಿದ ತವರು ಜಿಲ್ಲೆಗೆ ಅವಮಾನ ಮಾಡಿದ್ದಾರೆ. ಈ ವಿಚಾರದಲ್ಲಿ ವಿತಂಡ ಹೇಳಿಕೆ ನೀಡುತ್ತಿರುವ ಮೊಯ್ಲಿ ಬಹಿರಂಗವಾಗಿ ಜಿಲ್ಲೆಯ ಜನತೆಯ ಕ್ಷಮೆ ಕೋರುವಂತೆ ಹೆಗಡೆ ಆಗ್ರಹಿಸಿದ್ದಾರೆ.

ಈ ಯೋಜನೆಯ ಸಾಧಕ ಬಾಧಕ ಬಗ್ಗೆ ಜಿಲ್ಲೆಯ ಜನರಿಗೆ ವೀರಪ್ಪ ಮೊಯ್ಲಿ ಪಾರದರ್ಶಕ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಜಿಲ್ಲೆಗೆ ಆಗಮಿಸುವ ವೇಳೆ ಮೊಯ್ಲಿ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಅವರು ಹೇಳಿದರು. ಎತ್ತಿನಹೊಳೆ ಯೋಜನೆ ಪರವಾಗಿ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಸದಾನಂದ ಗೌಡರ ವಿರುದ್ಧವೂ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಕರ್ನಾಟಕರ ಇತರ ಜಿಲ್ಲಾ ಸುದ್ದಿಗಳು]

ಬೆಂಗಳೂರಿಗೆ ಬಂತು ಎತ್ತಿನಹೊಳೆ ಹೋರಾಟ

ಬೆಂಗಳೂರಿಗೆ ಬಂತು ಎತ್ತಿನಹೊಳೆ ಹೋರಾಟ

ಎತ್ತಿನಹೊಳೆ ಯೋಜನೆ ಜಾರಿಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ಜ.28ರಂದು ಯೋಜನೆ ವಿರೋಧಿಸಿ ಬೆಂಗಳೂರಿನಲ್ಲಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಜ.31ರಂದು ಯೋಜನೆಗೆ ಶಿಲಾನ್ಯಾಸ ಮಾಡುವುದಾಗಿ ಹೇಳಿರುವ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ. ಜ.28ರಂದು ಮಂಗಳೂರಿನ ನಾಗರಿಕರು, ಶಾಸಕರು, ಸಚಿವರರೊಂದಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎತ್ತಿನಹೊಳೆ ಯೋಜನೆ ವಿರೋಧಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗಡೆ ಹೇಳಿದ್ದಾರೆ.

ಬೆಳಗಾವಿಯಲ್ಲಿ ಬೀದಿಗಳಿದ ಶಿಕ್ಷಕರು

ಬೆಳಗಾವಿಯಲ್ಲಿ ಬೀದಿಗಳಿದ ಶಿಕ್ಷಕರು

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಕಾಲೇಜಿನ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. 10-12 ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಉಪನ್ಯಾಸಕರ ಹುದ್ದೆಗೆ ಎಲ್ಲ ಅರ್ಹತೆ ಹೊಂದಿದ್ದೇವೆ. ಆದರೆ, ಕಡಿಮೆ ವೇತನ ನೀಡಲಾಗುತ್ತಿದ್ದು, ಅದನ್ನೂ ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸರ್ಕಾರ ಸಮಸ್ಯೆ ಬಗೆಹರಿಸುವ ತನಕ ಹೋರಾಟ ಮುಂದುವರೆಸುವುದಾಗಿ ಘೋಷಿಸಿದ್ದಾರೆ.

ದಾವಣಗೆರೆ ಜಿಲ್ಲಾ ಪಂಚಾಯಿತಿ `ಕೈ`ವಶ

ದಾವಣಗೆರೆ ಜಿಲ್ಲಾ ಪಂಚಾಯಿತಿ `ಕೈ`ವಶ

ದಾವಣರೆಗೆ ಜಿಲ್ಲಾ ಪಂಚಾಯಿತಿ ಸತತ ಎರಡನೇ ಬಾರಿಗೆ ಕಾಂಗ್ರೆಸ್ ವಶವಾಗಿದೆ. ನೂತನ ಉಪಾಧ್ಯಕ್ಷರಾಗಿ ಚನ್ನಗಿರಿ ತಾ. ತ್ಯಾವಣಿಗೆ ಕ್ಷೇತ್ರದ ಸರ್ವತ್ ಫಾತಿಮಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಆಯುಕ್ತ, ಚುನಾವಣಾಧಿಕಾರಿ ಗೌರವ್ ಗುಪ್ತಾ ನೇತೃತ್ವದಲ್ಲಿ ನಡೆದ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಸಿಎಂ(ಎ) ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ಸರ್ವತ್ ಫಾತಿಮಾ ಹೊರತುಪಡಿಸಿ, ಆಡಳಿತ ಪಕ್ಷ ಬಿಜೆಪಿಯಿಂದ ಯಾರೊಬ್ಬರೂ ಅಭ್ಯರ್ಥಿಗಳೇ ಇಲ್ಲದ್ದರಿಂದ ಚುನಾವಣಾಧಿಕಾರಿ ನೂತನ ಉಪಾಧ್ಯಕ್ಷರಾಗಿ ಸರ್ವತ್ ಫಾತಿಮಾ ಆಯ್ಕೆಯಾಗಿದ್ದಾರೆಎಂದು ಘೋಷಿಸಿದರು.

ಗನ್ ಲೈಸೆನ್ಸ್ ಪಡೆಯಲು ಪೈಪೋಟಿ

ಗನ್ ಲೈಸೆನ್ಸ್ ಪಡೆಯಲು ಪೈಪೋಟಿ

ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಇದರಿಂದ ರಕ್ಷಣೆ ಪಡೆದುಕೊಳ್ಳುವುದಕ್ಕೆ ಈ ಭಾಗದ ಜನರು ಗನ್ ಲೈಸೆನ್ಸ್ ಪಡೆಯಲು ಮುಗಿ ಬಿದ್ದಿದ್ದಾರೆ. ಹಾಸನ ಜಿಲ್ಲೆಯ ಕೆಲವು ಭಾಗಗಳ ಜನರಿಗೆ ಪ್ರಾಣಿಗಳ ಉಪಟಳದಿಂದ ತಪ್ಪಿಸಿಕೊಳ್ಳಲು ಗನ್ ಅನಿವಾರ್ಯವಾಗಿ ಬಿಟ್ಟಿದೆ. ಆದ್ದರಿಂದ ಪರವಾನಗಿ ಪಡೆಯಲು ಜಿಲ್ಲಾಧಿಕಾರಿ ಎದುರು ಕ್ಯೂ ನಿಂತಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 1600 ಮಂದಿ ಗನ್ ಹೊಂದಿದ್ದರೆ, ಹೊಸದಾಗಿ ಗನ್ ಪಡೆಯಲು 500ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಗನ್ ಅನಿವಾರ್ಯತೆ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ ಲೈಸೆನ್ಸ್ ನೀಡಲಾಗುತ್ತಿದೆ. ಹಿಂದೆ ಗನ್ ಲೈಸೆನ್ಸ್ ನೀಡಿ ಅದು ದುರುಪಯೋಗವಾಗಿ ಜಿಲ್ಲೆಯಲ್ಲಿ ದೊಡ್ಡ ಜಟಾಪಟಿ ನಡೆದು ಹೋಗಿತ್ತು.

ಶಾಶ್ವತ ಕುಡಿಯುವ ನೀರಿಗೆ 74 ಕೋಟಿ

ಶಾಶ್ವತ ಕುಡಿಯುವ ನೀರಿಗೆ 74 ಕೋಟಿ

ಹುಮನಾಬಾದ್ ಹಾಗೂ ಚಿಟಗುಪ್ಪಾ ಪಟ್ಟಣಗಳಿಗೆ ಶಾಶ್ವತ ಕುಡಿವ ನೀರಿನ ಯೋಜನೆ ಪೂರೈಸಲು 74 ಕೋಟಿ ಅನುದಾನ ಮಂಜೂರು ಮಾಡಬೇಕೆಂದು ಶಾಸಕ ರಾಜಶೇಖರ ಪಾಟೀಲ್ ಕೇಂದ್ರ ರೇಲ್ವೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು. ಎರಡು ಪಟ್ಟಣಗಳಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಸಲು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಒಟ್ಟು 74 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿದ್ದು, ಆದ್ದರಿಂದ ಯೋಜನೆಗೆ ಕೇಂದ್ರದಿಂದ ಒಪ್ಪಿಗೆ ಪಡೆಯಲು ಬೆಂಬಲ ನಿಡಬೇಕು ಎಂದು ಮನವಿ ಮಾಡಿದರು.

ಬೆಂಗಳೂರು ಒನ್ ಕೇಂದ್ರದಲ್ಲಿ ಪಡಿತರ ಚೀಟಿ

ಬೆಂಗಳೂರು ಒನ್ ಕೇಂದ್ರದಲ್ಲಿ ಪಡಿತರ ಚೀಟಿ

ಬಿಪಿಎಲ್ ಕಾರ್ಡ್ ಪಡೆಯುವ ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಬೆಂಗಳೂರು ಒನ್ ಕೇಂದ್ರದಲ್ಲಿ ಬಿಪಿಎಲ್ ಕಾರ್ಡ್ ಪಡೆಯಬಹುದಾಗಿದೆ ಎಂದು ಆಹಾರ ಮತ್ತು ನಾಗರೀಕ ಖಾತೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ನೀಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ತಿಳಿಸಿದರು.

ಸೌಜನ್ಯ ಮನೆಯಿಂದ ಕದ್ರಿಯವರೆಗೆ ಪಾದಯಾತ್ರೆ

ಸೌಜನ್ಯ ಮನೆಯಿಂದ ಕದ್ರಿಯವರೆಗೆ ಪಾದಯಾತ್ರೆ

ನ್ಯಾಯಪರ ಹೋರಾಟದೊಂದಿಗೆ ಜನಜಾಗೃತಿಯನ್ನು ಮೂಡಿಸಲು ಪ್ರಜಾಪ್ರಭುತ್ವ ವೇದಿಕೆಯ ವತಿಯಿಂದ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಜ. 26ರಂದು ಸೌಜನ್ಯಳ ಪಾಂಗಳದ ಮನೆಯಿಂದ ಕದ್ರಿ ಕ್ಷೇತ್ರದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯನ್ನು ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟಿಸಲಿದ್ದು, ಮಧ್ಯಾಹ್ನ ಒಂದು ಗಂಟೆಗೆ ಸೌಜನ್ಯಳ ಮನೆಯಿಂದ ದೇವರ ನಾಮಸ್ಮರಣೆಯ ಮಾಡುತ್ತಾ ಹೊರಡುವ ಪಾದಯಾತ್ರೆ ತಂಡ ರಾತ್ರಿ ಬಿ.ಸಿ.ರೋಡ್‌ನಲ್ಲಿ ತಂಗಲಿದೆ. ಜ. 27ರಂದು ಮಧ್ಯಾಹ್ನ ಕದ್ರಿ ಕ್ಷೇತ್ರವನ್ನು ತಲುಪಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಸೌಜನ್ಯ ಮನೆಯಿಂದ ಪಾದಯಾತ್ರೆ

ಸೌಜನ್ಯ ಮನೆಯಿಂದ ಪಾದಯಾತ್ರೆ

ನ್ಯಾಯಪರ ಹೋರಾಟದೊಂದಿಗೆ ಜನಜಾಗೃತಿ ಮೂಡಿಸಲು ಪ್ರಜಾಪ್ರಭುತ್ವ ವೇದಿಕೆಯ ವತಿಯಿಂದ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಜ. 26ರಂದು ಸೌಜನ್ಯಳ ಪಾಂಗಳದ ಮನೆಯಿಂದ ಕದ್ರಿ ಕ್ಷೇತ್ರದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯನ್ನು ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ಒಂದು ಗಂಟೆಗೆ ಸೌಜನ್ಯಳ ಮನೆಯಿಂದ ದೇವರ ನಾಮಸ್ಮರಣೆಯ ಮಾಡುತ್ತಾ ಹೊರಡುವ ಪಾದಯಾತ್ರೆ ತಂಡ ರಾತ್ರಿ ಬಿ.ಸಿ.ರೋಡ್‌ನಲ್ಲಿ ತಂಗಲಿದೆ. ಜ. 27ರಂದು ಮಧ್ಯಾಹ್ನ ಕದ್ರಿ ಕ್ಷೇತ್ರವನ್ನು ತಲುಪಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದೆ.

ಮಹಾನಗರ ಪಾಲಿಕೆ ಹ್ಯಾಟ್ರಿಕ್ ಸಾಧನೆ

ಮಹಾನಗರ ಪಾಲಿಕೆ ಹ್ಯಾಟ್ರಿಕ್ ಸಾಧನೆ

ಹುಬ್ಬಳ್ಳಿಯ ದೇಶಪಾಂಡೆ ನಗರದ ಕರ್ನಾಟಕ ಜಿಮ್‌ಖಾನ ಕ್ಲಬ್ ನಿರ್ಮಿಸುತ್ತಿರುವ ರಿಕ್ರಿಯೇಶನ್ ಕ್ಲಬ್‌ನ ಕಟ್ಟಡ ಹಾಗೂ ಕಂಪೌಂಡ್‌ಗಳೆರಡರಲ್ಲೂ ನಿಯಮ ಉಲ್ಲಂಘನೆಯಾಗಿದೆ ಎಂದು ಈಗಾಗಲೇ ಜಿಲ್ಲಾಧಿಕಾರಿಗಳು ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದರೂ ಮತ್ತೊಮ್ಮೆ ಕಟ್ಟಡ ಮತ್ತು ಕಂಪೌಂಡ್‌ನ ಅಳತೆ ಮಾಡುವ ಮೂಲಕ ಮಹಾನಗರ ಪಾಲಿಕೆ ಅಧಿಕಾರಿಗಳು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಬುಧವಾರ ಮತ್ತು ಗುರುವಾರ ಪಾಲಿಕೆ ಕಿರಿಯ ಎಂಜಿನಿಯರ್ ಪುಟ್ಟಣ್ಣವರ್ ಕ್ಲಬ್‌ಗೆ ಭೇಟಿ ನೀಡಿ, ಮತ್ತೊಮ್ಮೆ ಕಂಪೌಂಡ್ ಮತ್ತು ಕಟ್ಟಡದ ಪರಿಶೀಲನೆ ನಡೆಸಿದರು. ಸುಮಾರು ಎರಡೂವರೆ ತಾಸುಗಳ ಕಾಲ ಅಳತೆ ಮಾಡಿದ ಅವರು, ಮತ್ತೊಮ್ಮೆ ಹೊಸದಾಗಿ ಪಾಲಿಕೆಗೆ ವರದಿ ನೀಡುವುದಾಗಿ ಹೇಳಿದ್ದಾರೆ. ಮಹಾನಗರ ಪಾಲಿಕೆಯು ಮೂರು ಬಾರಿ ಕ್ಲಬ್ ನಿಯಮ ಉಲ್ಲಂಘನೆ ಆಗಿರುವ ಕುರಿತು ಮೂರು ಬಾರಿ ಅಳತೆ ಮಾಡಿ ವರದಿ ತಯಾರಿಸಿದೆ.

ಶಿವಮೊಗ್ಗಕ್ಕೆ 4 ಇಎಸ್ಐ ಚಿಕಿತ್ಸಾಲಯ

ಶಿವಮೊಗ್ಗಕ್ಕೆ 4 ಇಎಸ್ಐ ಚಿಕಿತ್ಸಾಲಯ

ಶಿವಮೊಗ್ಗ ಜಿಲ್ಲೆಯ ಕಾರ್ಮಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಕಾರ್ಮಿಕ ಇಲಾಖೆಯು ಹೊಸದಾಗಿ 4 ಇಎಸ್‌ಐ ಚಿಕಿತ್ಸಾಲಯಗಳನ್ನು ಮಂಜೂರು ಮಾಡಿದೆ. ಶಿವಮೊಗ್ಗ ಎನ್.ಟಿ.ರಸ್ತೆ, ವಿನೋಬನಗರ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ಭದ್ರಾವತಿಯ ಚನ್ನಗಿರಿ ರಸ್ತೆಗೆ ಇಎಸ್‌ಐ ಚಿಕಿತ್ಸಾಲಯ ಮಂಜೂ ರಾಗಿದೆ. ಚಿಕಿತ್ಸಾಲಯಗಳ ಆರಂಭಕ್ಕೆ ಕಟ್ಟಡ ಗುರುತಿಸುವಂತೆ ಇಲಾಖೆ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+