Police Body Camera: ಖಾಕಿ ಜೊತೆ ಕಿರಿಕ್ ಮಾಡಂಗಿಲ್ಲ ಎಚ್ಚರ.. ಎಚ್ಚರ..!

ಬೆಂಗಳೂರು: ಈಗ ಎಲ್ಲವೂ ಹೈಟೆಕ್, ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಗಾಡಿಯಿಂದ ಹಿಡಿದು ಗನ್ ತನಕ ಎಲ್ಲಕ್ಕೂ ಹೊಸ ರೂಪ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡಲು ಪೊಲೀಸ್ ಪಡೆ ಬಾಡಿ ವೋರ್ನ್ ಕ್ಯಾಮೆರಾ ಧರಿಸಲು, ಬೆಂಗಳೂರಿನ ಪೊಲೀಸ್​ ಕಮಿಷನರ್​ ಬಿ.ದಯಾನಂದ್ ಖಡಕ್ ಆದೇಶ ನೀಡಿದ್ದಾರೆ. ಹಾಗಾದರೆ ಪೊಲೀಸರ ಬಾಡಿ ಕ್ಯಾಮೆರಾ ಇತಿಹಾಸ ನಿಮಗೆ ಗೊತ್ತೆ? ಅದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ಪೊಲೀಸರು ಬಾಡಿ ಕ್ಯಾಮೆರಾ ಧರಿಸುವುದು ಇತ್ತೀಚೆಗೆ ಕಡ್ಡಾಯವಾಗಿದೆ. ಅದರಲ್ಲೂ ಹೀಗೆ ಬಾಡಿ ಕ್ಯಾಮೆರಾ ರೂಲ್ಸ್ ಮುಂದುವರಿದ ದೇಶಗಳಲ್ಲಿ ಹಲವು ವರ್ಷಗಳ ಹಿಂದೆಯೇ ಜಾರಿ ಆಗಿತ್ತು. ಮೊದಲ ಬಾರಿ ಪೊಲೀಸರಿಗೆ ಬಾಡಿ ಕ್ಯಾಮೆರಾ ಕಡ್ಡಾಯ ಮಾಡಿದ್ದ ದೇಶವೆಂದರೆ ಯುಕೆ ಅಂದರೆ ಯುನೈಟೆಡ್ ಕಿಂಗ್‌ಡಂ. 2005ರಲ್ಲಿ ಮೊಟ್ಟಮೊದಲ ಬಾರಿಗೆ ಖಾಕಿ ಪಡೆಗೆ ಬಾಡಿ ಕ್ಯಾಮೆರಾ ಪರಿಚಯಿಸಿತ್ತು ಬ್ರಿಟನ್. ಹೀಗೆ ಬ್ರಿಟನ್ ಹೊಸ ಯುಗಕ್ಕೆ ನಾಂದಿ ಹಾಡಿ ಜಗತ್ತಿನಾದ್ಯಂತ ಪೊಲೀಸ್ ಇಲಾಖೆಯಲ್ಲಿ ವಿನೂತನ ಬದಲಾವಣೆಗೆ ಕಾರಣವಾಗಿತ್ತು. ಆದ್ರೆ ಈ ಬಾಡಿ ಕ್ಯಾಮೆರಾಗಳ ಅಗತ್ಯತೆ ಏನಿರಬಹುದು? ಬನ್ನಿ ತಿಳಿಯೋಣ.

Discover the Police Body Camera history

ಪೊಲೀಸರಿಗೆ ಬಾಡಿ ಕ್ಯಾಮೆರಾ ಏಕೆ ಬೇಕು?

ಅಷ್ಟಕ್ಕೂ ಪೊಲೀಸರು ಬಾಡಿ ಕ್ಯಾಮೆರಾ ಧರಿಸಿದರೆ ಹಲವು ಪ್ರಯೋಜನ ಇದೆ. ಪ್ರಮುಖ ಉಪಯೋಗ ಎಂದರೆ, ವಸ್ತುನಿಷ್ಠವಾಗಿ ತನಿಖೆ ನಡೆಸಲು ಇದರಿಂದ ಸುಲಭವಾಗಲಿದೆ. ಈ ಪೈಕಿ ಗಲಭೆಗಳು ಅಥವಾ ಹಿಂಸಾಚಾರ ನಡೆದ ಸಂದರ್ಭ ಪೊಲೀಸರ ವಿರುದ್ಧವೇ ಸಾಕಷ್ಟು ಆರೋಪ ಕೇಳಿಬರುತ್ತವೆ. ಅಂತಹ ಸಮಯದಲ್ಲಿ ಪೊಲೀಸರು ಸಮರ್ಥನೆ ನೀಡಲು ಸಾಕ್ಷ್ಯ ಸಿಗಲ್ಲ. ಪರಿಸ್ಥಿತಿ ಹೀಗಿದ್ದಾಗ ಬಾಡಿ ಕ್ಯಾಮೆರಾ ಸತ್ಯ ತೋರಿಸಲು ಸಹಾಯ ಮಾಡುತ್ತದೆ. ಪೊಲೀಸರ ಸಮವಸ್ತ್ರದ ಮೇಲೆ ಸುಲಭವಾಗಿ ಈ ಬಾಡಿ ಕ್ಯಾಮೆರಾಗಳನ್ನು ಧರಿಸಬಹುದು. ಹೀಗೆ ಬಾಡಿ ಕ್ಯಾಮೆರಾ ಧರಿಸಿದರೆ ವಿಡಿಯೋ ಹಾಗೂ ಆಡಿಯೋ ಜೊತೆ ಫೋಟೋ ಕೂಡ ತೆಗೆದುಕೊಳ್ಳಬಹುದು.

ವಿಡಿಯೋ ರೆಕಾರ್ಡ್ ನಂತರ ಮುಂದೇನು?

ಪೊಲೀಸರು ಧರಿಸುವ ಬಾಡಿ ಕ್ಯಾಮೆರಾ ಮೂಲಕ ರೆಕಾರ್ಡ್ ಆಗುವ ವಿಡಿಯೋ ಅಥವಾ ಆಡಿಯೋ ದತ್ತಾಂಶ ಇಲ್ಲವೇ ಡಾಟಾ ಕ್ಲೌಡ್ ಸ್ಟೋರೇಜ್‌ ಮೂಲಕ ಸಂಗ್ರಹ ಮಾಡುತ್ತಾರೆ. ಇದನ್ನ ಅಗತ್ಯ ಇದ್ದಾಗ ಬಳಕೆ ಮಾಡಲಾಗುತ್ತದೆ. ಪ್ರಮುಖವಾಗಿ ಪ್ರಕರಣಗಳ ತನಿಖೆಗಾಗಿ ನ್ಯಾಯಾಲಯ ಮತ್ತು ತನಿಖೆ ನಡೆಸುವ ಅಧಿಕಾರಿಗಳಿಗೆ ಈ ವಿಡಿಯೋ ಫುಟೇಜ್ ಸಾಕಷ್ಟು ಸಹಾಯ ಮಾಡುತ್ತದೆ. ಹೀಗಾಗಿಯೇ ಬೆಂಗಳೂರಿನಲ್ಲೂ ಬಾಡಿ ಕ್ಯಾಮೆರಾಗೆ ಒತ್ತು ನೀಡಿ ಹೊಸ ಆದೇಶ ಹೊರಡಿಸಲಾಗಿದೆ.

Discover the Police Body Camera history

ಬೆಂಗಳೂರಿನಲ್ಲಿ ಯಾವ ರೂಲ್ಸ್?

ಅಂದಹಾಗೆ ಇದೀಗ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಅವರ ಸೂಚನೆಯ ಮೇರೆಗೆ ಗಸ್ತು ತಿರುಗುವಾಗ ಪೊಲೀಸ್ ಸಿಬ್ಬಂದಿ ಬಾಡಿ ವೋರ್ನ್ ಕ್ಯಾಮೆರಾ ಧರಿಸಬೇಕಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಮ್ಮ 112ರ ಗಸ್ತು ಅಧಿಕಾರಿಗಳು ದೇಹಕ್ಕೆ ಧರಿಸಿರುವ ಕ್ಯಾಮೆರಾಗಳನ್ನ (ಬಿಡಬ್ಲ್ಯೂಸಿ) ಧರಿಸಲಿದ್ದಾರೆ. ಅವರ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆ ಮತ್ತು ಅವರು ತೆಗೆದುಕೊಳ್ಳುವ ಕ್ರಮಗಳು ಈ ಕ್ಯಾಮೆರಾದಲ್ಲಿ ದಾಖಲಾಗಲಿವೆ ಎಂದಿದ್ದಾರೆ. ಇದು ತಂತ್ರಜ್ಞಾನದ ಜೊತೆಗೆ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಬಾಂಧವ್ಯವನ್ನ ಮತ್ತಷ್ಟು ಹೆಚ್ಚಿಸಲಿದೆ.

ಗಲಭೆ, ಪ್ರತಿಭಟನೆ, ಬಂದೋಬಸ್ತ್ ಸೇರಿ ಸಾರ್ವಜನಿಕ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಈ ಕ್ಯಾಮೆರಾಗಳನ್ನ ಕಡ್ಡಾಯವಾಗಿ ಧರಿಸಬೇಕು ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗಿರುವವರನ್ನು ಪೊಲೀಸರು ಬಂಧಿಸುವಾಗಲೂ ಮತ್ತು ವಿಚಾರಣೆ ವೇಳೆ ಕಡ್ಡಾಯವಾಗಿ ಕ್ಯಾಮರಾ ಧರಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರಂತೆ. ಈ ಮೂಲಕ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳಿಗೆ ಬ್ರೇಕ್ ಹಾಕಲು ಹೊಸ ವಿಧಾನ ಕಂಡುಕೊಳ್ಳಲಾಗಿದೆ. ಅಲ್ಲದೆ ಕೆಲವು ಪ್ರಕರಣಗಳಲ್ಲಿ ಖಾಕಿ ಪಡೆಯ ಬಗ್ಗೆ ಕೇಳಿಬರುತ್ತಿದ್ದ ದೂರುಗಳಿಗೂ ಉತ್ತರ ಸಿಗಲಿದೆ. ಇದರ ಜೊತೆಗೆ ಪೊಲೀಸ್ ಇಲಾಖೆಯಲ್ಲಿ ಮತ್ತಷ್ಟು ಶಿಸ್ತು ಮೂಡುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+