Cauvery Dispute: ನಟ ದರ್ಶನ್ & ಸುದೀಪ್ ಆಯ್ತು ಯಶ್ ಬೆಂಬಲ ಯಾವಾಗ?
ಕನ್ನಡಿಗರು ಕಾವೇರಿ ನೀರಿಗಾಗಿ ತೀವ್ರ ಹೋರಾಟ ನಡೆಸುವ ಪರಿಸ್ಥಿತಿ ಬಂದಿದೆ. ಅದ್ರಲ್ಲೂ ಮಳೆ ಕೊರತೆ & ಬರ ಪರಿಸ್ಥಿತಿ ನಡುವೆಯು ತಮಿಳುನಾಡು ಕಾವೇರಿ ನೀರು ಬೇಕು ಅಂತಾ ಕಿರಿಕ್ ತೆಗೆದಿದೆ. ಈ ಸ್ಥಿತಿ ಕಂಡು ಕರ್ನಾಟಕದ ರೈತರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಆದರೆ ಸಿನಿಮಾ ನಟರು ಹೋರಾಟಕ್ಕೆ ಕೈಜೋಡಿಸಿಲ್ಲ ಎಂಬ ಕೂಗು ಕೇಳಿಬಂದ ಬೆನ್ನಲ್ಲೇ ನಟ ದರ್ಶನ್ & ಸುದೀಪ್ ಮಾತನಾಡಿದ್ದಾರೆ. ಆದರೆ ಯಶ್ ಅವರು ಬೆಂಬಲಿಸುವುದು ಯಾವಾಗ ಅಂತಾ ಚರ್ಚೆ ಶುರುವಾಗಿದೆ.
ಈಗಂತೂ ಸಾಮಾಜಿಕ ಜಾಲತಾಣಗಳ ಜಮಾನ, ಇಲ್ಲಿ ಏನೇ ಹೇಳಬೇಕು ಅಂದರೂ ಜನ ಸೋಷಿಯಲ್ ಮೀಡಿಯಾ ಮೂಲಕ ಮಾತನಾಡ್ತಾರೆ. ಇದೀಗ ಕಾವೇರಿ ವಿವಾದದ ಕಿಚ್ಚು ಕೂಡ ಇದೇ ಸೋಷಿಯಲ್ ಮೀಡಿಯಾ ಮೂಲಕ ಧಗಧಗಿಸುತ್ತಿದೆ. ಅದರಲ್ಲೂ ಸಿನಿಮಾ ನಟ & ನಟಿಯರ ವಿರುದ್ಧ ಕರ್ನಾಟಕದ ರೈತರು ರೊಚ್ಚಿಗೆದ್ದಿದ್ದಾರೆ. ಕಾವೇರಿ ಹೋರಾಟ ನಡೆಯುವಾಗ ಸಿನಿಮಾ ಮಂದಿ ಸುಮ್ಮನೆ ಇರುವುದು ಏಕೆ? ಎಂದು ಪ್ರಶ್ನೆ ಮಾಡುತ್ತಿದ್ದಾರೆ ರಾಜ್ಯದ ರೈತರು ಹಾಗೂ ಹೋರಾಟಗಾರರು.

ರೈತರ ಪರ ಮಾತನಾಡಿದ ದಚ್ಚು & ಕಿಚ್ಚ
ಇನ್ನು ಬೆಳಗ್ಗೆ ಈ ಬಗ್ಗೆ ಟ್ವೀಟ್ ಮಾಡಿದ್ದ ನಟ ದರ್ಶನ್ ಅವರು, ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ ಎಂದಿದ್ದರು.
ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ.
— Darshan Thoogudeepa (@dasadarshan) September 20, 2023
ಯಶ್ ಅವರ ಬೆಂಬಲ ಯಾವಾಗ?
ಹಾಗೇ ನಟ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದು, ಸ್ನೇಹಿತರೆ, ನಮ್ಮ ಕಾವೇರಿ ನಮ್ಮ ಹಕ್ಕು . ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಈಗ ನಟ ಯಶ್ ಅವರು ಯಾವಾಗ ಬೆಂಬಲ ಕೊಡ್ತಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಹಾಗೂ ಚರ್ಚೆ ಜೋರಾಗಿದೆ.

ಕರ್ನಾಟಕದಲ್ಲಿ ತೀವ್ರ ಹೋರಾಟ ಪಕ್ಕಾ?
ಹೀಗೆ ಕಾವೇರಿ ಕೊಳ್ಳದಲ್ಲಿ ಪರಿಸ್ಥಿತಿ ಭೀಕರವಾಗಿದ್ದು ಮುಂದೆ ದೊಡ್ಡ ಸಮಸ್ಯೆ ಗ್ಯಾರಂಟಿ. ಕಾವೇರಿ ನದಿ ಭಾಗದಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಉಂಟಾಗಿದ್ದು ಕುಡಿಯುವ ನೀರು ಕೂಡ ಸಿಗದ ಪರಿಸ್ಥಿತಿ ಎದುರಾಗಿದೆ. ಮುಂದಿನ ಬೇಸಿಗೆ ಹೊತ್ತಿಗೆ ಕರ್ನಾಟಕದಲ್ಲಿ ಭಾರಿ ನೀರಿನ ಕೊರತೆ ಎದುರಾಗಲಿದೆ. ಆದರೆ ಇದೇ ಸಂದರ್ಭದಲ್ಲಿ ತಮಿಳುನಾಡು ಮಾತ್ರ ಇದೇ ವಿಚಾರ ಮುಂದಿಟ್ಟುಕೊಂಡು, ನೀರು ಬಿಡಿ ಅಂತಾ ಟಾರ್ಚರ್ ಮಾಡುತ್ತಿದೆ. ಹೀಗಾಗಿಯೇ ಬೆಂಗಳೂರಿನಲ್ಲಿ ವಾಸ ಇರುವ ಬೇರೆ ಬೇರೆ ರಾಜ್ಯದವರು ಹಾಗೂ ಸಿನಿಮಾ ಮಂದಿ ಕೂಡ ಹೋರಾಟಕ್ಕೆ ಬರಲಿ ಎಂದು ರೈತರು & ಕನ್ನಡಪರ ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.
ಸ್ನೇಹಿತರೆ
— Kichcha Sudeepa (@KicchaSudeep) September 20, 2023
ನಮ್ಮ ಕಾವೇರಿ ನಮ್ಮ ಹಕ್ಕು . ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ.
ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ.
ಒಟ್ನಲ್ಲಿ ಕಳೆದ ವರ್ಷ 2022ರ ಮಳೆಗಾಲದಲ್ಲಿ ತಮಿಳುನಾಡಿನ ಜಲಾಶಯಕ್ಕೆ ಹರಿದಿದ್ದ 400 ಟಿಎಂಸಿಗೂ ಹೆಚ್ಚು ಕಾವೇರಿ ನದಿ ನೀರು ಸಮುದ್ರ ಸೇರಿದೆ. ಮುಂಗಾರು ಮಳೆ ಅಬ್ಬರ ಕಾರಣ ಮೆಟ್ಟೂರು ಡ್ಯಾಂನಿಂದ 472 ಟಿಎಂಸಿ ಹೆಚ್ಚು ನೀರನ್ನ ಹೊರಬಿಡಲಾಗಿತ್ತು. ಹೀಗೆ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಸೇರಿದೆ. ಇಷ್ಟೊಂದು ನೀರನ್ನ ವ್ಯರ್ಥ ಮಾಡಿದ್ದರೂ ಈ ವರ್ಷ ಮತ್ತೆ ನೀರಿಗೋಸ್ಕರ ತಮಿಳುನಾಡು ಕಿರಿಕ್ ಶುರುಮಾಡಿದೆ. ಈ ಬೆಳವಣಿಗೆ ಬಗ್ಗೆ ಕರ್ನಾಟಕದ ರೈತರು ರೊಚ್ಚಿಗೆದ್ದು ಹೋರಾಟ ಆರಂಭಿಸಿದ್ದು, ಈ ಹೊರಾಟಕ್ಕೆ ಚಿತ್ರರಂಗದ ನಟರು ಸಾಥ್ ಕೊಡ್ತಾರಾ? ಅಂತಾ ಕಾದು ನೋಡಬೇಕು.












Click it and Unblock the Notifications