ಸಿಂಗ್ ಕಳಪೆ ಆಡಳಿತ; ಬೆಂಗಳೂರು ಯುವಕ ಆತ್ಮಹತ್ಯೆ

ಮೂಲತಃ ಸಕಲೇಶಪುರದವನಾದ ಈತ 10 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ ಮಾಡ್ತಿದ್ದ. ಬಾಟಾ ಇಂಡಿಯಾ ಕಂಪನಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡ್ತಿದ್ದ. ಆದರೆ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ವೈಖರಿ ಬಗ್ಗೆ ಬೇಸರ ಹುಟ್ಟಿಸಿದೆ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.
ಗಾಂಧಿ ಜಯಂತಿ ದಿನ ಸಂತೋಷ್ ಆತ್ಮಹತ್ಯೆ:
ಮೊನ್ನೆ ಬುಧವಾರ ಗಾಂಧಿ ಜಯಂತಿ ದಿನ ಸಂತೋಷ್ ಮನೆಯಲ್ಲಿ ವೇಲ್ ನಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಸಾವಿಗೆ ಮುನ್ನ ಸಂತೋಷ್ ಮೂರು ಪುಟಗಳ ಡೆತ್ ನೋಟ್ ಬರೆದಿದ್ದಾನೆ. 'ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಬೆಂಗಳೂರಿಗೆ ಬಂದೆ. ಆದ್ರೆ ಇಲ್ಲಿ ಬಂದ ಮೇಲೆ ಏನೂ ಸಾಧನೆ ಮಾಡಲು ಸಾಧ್ಯವಾಗಲೇ ಇಲ್ಲ. ದೇಶದಲ್ಲಿನ ಬಡವರಿಗೆ ಸಹಾಯ ಮಾಡಬೇಕು ಅಂದುಕೊಂಡಿದ್ದೆ. ಆದ್ರೆ ಬರುವ 10 ಸಾವಿರ ಸಂಬಳದಲ್ಲಿ ಯಾರಿಗೂ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ.'
'ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರದ ಆಡಳಿತ ವೈಖರಿಯಿಂದಾಗಿ ಗಡಿಯಲ್ಲಿ ಅಮಾಯಕ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದಿನಬೆಳಗಾದ್ರೆ ಪಾಕಿಸ್ತಾನದ ಉಗ್ರಗಾಮಿಗಳು ಈ ದೇಶದ ಸೈನಿಕರ ರಕ್ತ ಹೀರುತ್ತಿದ್ದರೂ ಈ ಸರಕಾರಕ್ಕೆ ಪಾಕಿಸ್ತಾನಕ್ಕೆ ಪ್ರತಿರೋಧ ತೋರುವ ಧೈರ್ಯವಿಲ್ಲ. ಮುಂದಿನ ಜನ್ಮ ಅಂತೇನಾದ್ರೂ ಇದ್ರೆ ಇದೇ ದೇಶದಲ್ಲಿ ಸೈನಿಕನಾಗಿ ಹುಟ್ಟಿ ಭಾರತ ಮಾತೆಯ ಸೇವೆ ಮಾಡುತ್ತೇನೆ....' ಹೀಗೆ ಸಾಗುತ್ತದೆ ಸಂತೋಷನ ಡೆತ್ ನೋಟ್.
ಇತ್ತೀಚೆಗೆ ಕಾಶ್ಮೀರದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದ ಸಂತೋಷ್ ಗೆ ಈ ವಿಚಾರದಲ್ಲಿ ಸರ್ಕಾರ ಕೈಕಟ್ಟಿ ಕುಳಿತಿದೆ ಅನ್ನಿಸಿತ್ತು. ಅಂತೂ ಇಂತೂ ಪ್ರಧಾನಿ ಮನಮೋಹನ್ ಸಿಂಗ್ ಅವ್ರ ಆಡಳಿತ ವೈಖರಿ ಯುವಕನೊಬ್ಬನ ಸಾವಿಗೆ ಕಾರಣವಾಗಿದೆ. ರಾಜಕೀಯ ಪಕ್ಷಗಳು ದಿನ ಬೆಳಗಾದ್ರೆ ಕೇಂದ್ರ ಸರಕಾರದ ಆಡಳಿತದ ಬಗ್ಗೆ ಆರೋಪ-ಪ್ರತ್ಯಾರೋಪ ಮಾಡ್ತಾ ಕಾಲ ಕಳೆಯುತ್ತವೆ. ಆದರೆ ಸಂತೋಷ್ ಪಾಲಿಗೆ ಮಾತ್ರ ಇದು ಗಂಭೀರ ವಿಷಯವಾಗಿ ಕಾಡಿದೆ. ಇದರಿಂದ ಬೇಸತ್ತಿದ್ದ ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ವೇಲ್ ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.












Click it and Unblock the Notifications