ಧರ್ಮಸ್ಥಳ ಸೌಜನ್ಯ ಕೇಸ್ ಬಗ್ಗೆ ಬರಲಿದೆ ಧ್ರುವ್ ರಾಠಿ ವಿಡಿಯೋ... Sowjanya Case
ಧರ್ಮಸ್ಥಳದ ಸೌಜನ್ಯ ವಿಚಾರ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಧರ್ಮಸ್ಥಳ ಸೌಜನ್ಯ ರೇಪ್ & ಮರ್ಡರ್ ಕೇಸ್ ಕುರಿತು ಕನ್ನಡದ ಯುಟ್ಯೂಬರ್ ವಿಡಿಯೋ ಮಾಡಿದ್ದೇ ತಡ ಈ ಬಗ್ಗೆ ಕೋಲಾಹಲವೇ ಸೃಷ್ಟಿಯಾಗಿದ್ದು, ಸಿದ್ದರಾಮಯ್ಯ ಸರ್ಕಾರ ಸೇರಿದಂತೆ ಪೊಲೀಸ್ ಇಲಾಖೆ ವಿರುದ್ಧ ಜನರು ಸೋಷಿಯಲ್ ಮೀಡಿಯಾದಲ್ಲಿ ರೊಚ್ಚಿಗೆದ್ದಿದ್ದಾರೆ. ಅಲ್ಲದೆ ಇದೇ ವಿಚಾರವಾಗಿ ಕರ್ನಾಟಕದಲ್ಲಿ ದೊಡ್ಡ ಹೋರಾಟ ಶುರುವಾಗುವ ಭಯ ಆವರಿಸಿದೆ. ಇಂತಹ ಪರಿಸ್ಥಿತಿಯಲ್ಲೇ, ಮತ್ತೊಂದು ಸ್ಫೋಟಕ ತಿರುವು ಪಡೆಯುತ್ತಿದೆ ಧರ್ಮಸ್ಥಳದ ಸೌಜನ್ಯ ಕೇಸ್!
ಸೌಜನ್ಯ... ಸೌಜನ್ಯ... ಸೌಜನ್ಯ... ಹೀಗೆ ಎಲ್ಲೆಲ್ಲೂ ಸೌಜನ್ಯ ಪ್ರಕರಣ ಕಿಚ್ಚು ಹೊತ್ತಿಸಿದೆ. ಹೌದು, ಧರ್ಮಸ್ಥಳದ ಸೌಜನ್ಯ ರೇಪ್ & ಮರ್ಡರ್ ಕೇಸ್ ಕನ್ನಡ ನಾಡಿನಲ್ಲಿ ನಡೆದಿರುವ ಅತಿ ದೊಡ್ಡ ದುರಂತಗಳ ಪೈಕಿ ಒಂದಾಗಿದೆ. ಹೀಗಿದ್ದಾಗ ಸೌಜನ್ಯ ರೇಪ್ & ಮರ್ಡರ್ ಕೇಸ್ ಬಗ್ಗೆ ದೊಡ್ಡ ಹೋರಾಟಗಳು ಇಡೀ ಕರ್ನಾಟದಲ್ಲಿ ನಡೆದಿವೆ.

ಇಂತಹ ಸಮಯದಲ್ಲೇ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರು ಧರ್ಮಸ್ಥಳದ ಸೌಜನ್ಯ ಕೇಸ್‌ನಲ್ಲಿ ತಳುಕು ಹಾಕಿಕೊಂಡ ಕಾರಣಕ್ಕೆ, ಸಮೀರ್ ಎಂಬ ಯುಟ್ಯೂಬರ್ ಈ ಬಗ್ಗೆ ತನಿಖಾ ವಿಡಿಯೋ ಅಪ್ಲೋಡ್ ಮಾಡಿದ್ದರು. ಆ ವಿಡಿಯೋ ವೈರಲ್ ಆದ ನಂತರ ಬೆದರಿಕೆ ಹಾಕುತ್ತಾ ಸಮೀರ್‌ನ ಹೆದರಿಸಿರುವ ಆರೋಪ ಕೂಡ ಕೇಳಿಬಂದಿದೆ. ಹೀಗಿದ್ದಾಗಲೇ, ಧರ್ಮಸ್ಥಳ ಸೌಜನ್ಯರ ಕೇಸ್ ಬಗ್ಗೆ ಬರಲಿದೆ ಧ್ರುವ್ ರಾಠಿ ವಿಡಿಯೋ...
ಧರ್ಮಸ್ಥಳ ಸೌಜನ್ಯ ರೇಪ್ & ಮರ್ಡರ್ ಕೇಸ್...
ಅಷ್ಟಕ್ಕೂ ಧರ್ಮಸ್ಥಳ ಸೌಜನ್ಯ ರೇಪ್ & ಮರ್ಡರ್ ಕೇಸ್ ಬಗ್ಗೆ ಮತ್ತೆ ಕಿಚ್ಚು ಹೊತ್ತಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎದ್ದಿದೆ. ಹೀಗಿದ್ದಾಗ ರಾಷ್ಟ್ರೀಯ ಮಟ್ಟದಲ್ಲೂ ಈ ವಿಚಾರದ ಬಗ್ಗೆ ದೊಡ್ಡ ಚರ್ಚೆ ಆರಂಭವಾಗಿದ್ದು, ಸೌಜನ್ಯ ರೇಪ್ & ಮರ್ಡರ್ ಕೇಸ್ ಕುರಿತು ಮಾತನಾಡಿದ್ದ ಕನ್ನಡದ ಖ್ಯಾತ ಯುಟ್ಯೂಬರ್‌ಗೆ ಜೀವ ಭಯ ಕಾಡುತ್ತಿದೆ ಎನ್ನುವ ಭಾರಿ ಗಂಭೀರ ಆರೋಪ ಕೇಳಿ ಬಂದಿದೆ. ಇಷ್ಟೆಲ್ಲಾ ಘಟನೆಗಳ ನಡುವೆಯೇ ಮತ್ತೊಬ್ಬ ಖ್ಯಾತ ಯುಟ್ಯೂಬರ್ ಧರ್ಮಸ್ಥಳ ಸೌಜನ್ಯ ರೇಪ್ & ಮರ್ಡರ್ ಕೇಸ್ ವಿಡಿಯೋ ಮಾಡಲು....
ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ತಿರುವು?
ಹೌದು, ಧರ್ಮಸ್ಥಳ ಸೌಜನ್ಯ ರೇಪ್ & ಮರ್ಡರ್ ಕೇಸ್ ಬಗ್ಗೆ ಸಮೀರ್ ವಿಡಿಯೋ ಮಾಡಿದ ನಂತರ ಸಮೀರ್ ಮನೆ ವಿಳಾಸ & ಸಮೀರ್ ಮೊಬೈಲ್ ನಂಬರ್ ಕೂಡ ಲೀಕ್ ಆಗಿದೆಯಂತೆ. ಅಲ್ಲದೆ ಸಮೀರ್‌ಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೂಡ ಕೇಳಿ ಬಂದ ಬೆನ್ನಲ್ಲೇ ಘಟನೆ ಬಗ್ಗೆ ದೊಡ್ಡ ಕಿಚ್ಚು ಹೊತ್ತಿಕೊಂಡು, ರಾಷ್ಟ್ರೀಯ ಮಟ್ಟದಲ್ಲಿ ಕ್ಯಾಂಪೇನ್ ಶುರುವಾಗಿದೆ. ಹೀಗಾಗಿ ಮತ್ತೊಬ್ಬ ಖ್ಯಾತ ಯುಟ್ಯೂಬರ್ ಧ್ರುವ್ ರಾಠಿ ಕೂಡ ಧರ್ಮಸ್ಥಳ ಸೌಜನ್ಯ ರೇಪ್ & ಮರ್ಡರ್ ಕೇಸ್ ಬಗ್ಗೆ ವಿಡಿಯೋ ಮಾಡಲಿ ಅಂತಾ ಕ್ಯಾಂಪೇನ್ ಶುರುವಾಗಿದೆ.
ಧ್ರುವ್ ರಾಠಿ ಬಳಿ ಕೂಡ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮನವಿಯ ಮಾಡುತ್ತಿದ್ದಾರೆ. ಅಲ್ಲದೆ ಧ್ರುವ್ ರಾಠಿ ಕೂಡ ಈ ಬಗ್ಗೆ ಇನ್ನೇನು ಕೆಲವೇ ದಿನಗಳಲ್ಲಿ ಒಂದು ತನಿಖಾ ವಿಡಿಯೋ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿದ್ದು, ಸಂಚಲನವೇ ಈಗ ಸೃಷ್ಟಿಯಾಗಿದೆ. ಆದರೆ ಈ ವಿಡಿಯೋಗೆ ಕೂಡ ತಡೆಯು ಬೀಳುತ್ತಾ? ಅನ್ನೋದನ್ನು ಕಾದು ನೋಡಬೇಕು.












Click it and Unblock the Notifications