ಬ್ರಹ್ಮಕಲಶೋತ್ಸವ:ಪಲ್ಲಪೂಜೆ ಮೂಲಕ ಅನ್ನದಾಸೋಹಕ್ಕೆ ಚಾಲನೆ
ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಳದಲ್ಲಿ ಮಾರ್ಚ್ 12 ರಿಂದ 18 ರವರೆಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಅನ್ನಸಂತರ್ಪಣೆಗಾಗಿ ನಿರ್ಮಿಸಿರುವ ಅನ್ನಪೂರ್ಣ ಅನ್ನಛತ್ರದಲ್ಲಿ ಪಲ್ಲಪೂಜೆ ಕಾರ್ಯಕ್ರಮ ಜರುಗಿತು.
ಈ ಸಂಧರ್ಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ ಶ್ರೀ ಕ್ಷೇತ್ರದಲ್ಲಿ ನಡೆಯುವ ವಿಶೇಷವಾದ ಭೋಜನ ವ್ಯವಸ್ಥೆಯು ಶಿಸ್ತಿನಿಂದ ನಡೆಯಬೇಕಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. [ಬ್ರಹ್ಮಕಲಶ ಉತ್ಸವದಿ ಓಂಕಾರ ಶಿವಸಹಸ್ರನಾಮ]
ದೇವಳದ ಪ್ರಧಾನ ಅರ್ಚಕ ವಸಂತ ಶಬರಾಯ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಡಾ. ಹೆಗ್ಗಡೆ ಕುಟುಂಬ, ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ, ವಿವಿಧ ಸಮಿತಿಯ ಮುಖ್ಯಸ್ಥರು ಮತ್ತು ಭಕ್ತಾಧಿಗಳು ಸಾಕ್ಷಿಯಾದರು.
ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಪ್ರತೀ ದಿನ ಸುಮಾರು 30,000ಕ್ಕೂ ಮಿಕ್ಕಿ ಭಕ್ತಾದಿಗಳು ದೇವಾಲಯಕ್ಕೆ ಬರುವ ನಿರೀಕ್ಷೆಯಿದೆ. ಭಕ್ತರಿಗೆ ಬೆಳಿಗ್ಗೆ ಮತ್ತು ಸಂಜೆ ಉಪಹಾರ ಸೇರಿದಂತೆ ಮದ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ. ಪಾಕಶಾಲೆಯಲ್ಲಿ ಸುಮಾರು 400 ಮಂದಿ ಸ್ವಯಂಸೇವಕರು ಮತ್ತು 40 ಮಂದಿ ಅಡುಗೆ ಭಟ್ಟರು ಕೆಲಸ ನಿರ್ವಹಿಸುತ್ತಿದ್ದಾರೆ. [ಗ್ಯಾಲರಿ: ಧರ್ಮಸ್ಥಳದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಸಂಭ್ರಮ]
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಷ್ಟಬಂಧ ಹಾಗೂ ಬ್ರಹ್ಮಕಲಶ ಉತ್ಸವ ಪ್ರತಿ 12ವರ್ಷಕ್ಕೊಮ್ಮೆ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಉತ್ಸವವಾಗಿದೆ. ಈ ಬಾರಿ ಮಾರ್ಚ್ 12 ರಿಂದ 18 ರವರೆಗೆ ಬ್ರಹ್ಮ ಕಲಶ ಉತ್ಸವ ನಡೆಯುತ್ತಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳನ್ನು ಸೆಳೆಯಲಿವೆ. ಚಿತ್ರಗಳು: ಶ್ರೇಯಸ್ ಕೇಶವ್














Click it and Unblock the Notifications