ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆ : 10 ಪ್ರಮುಖ ಬೆಳವಣಿಗೆಗಳು

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 12: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಹಾಗೂ ಆದೇಶ ಬಂದ ನಂತರದ ಪರಿಸ್ಥಿತಿಯ ಅವಲೋಕನ ಇಲ್ಲಿದೆ.

1.ಕರ್ನಾಟಕ ಸೆಪ್ಟೆಂಬರ್ 20ರ ವರೆಗೆ ಪ್ರತಿ ದಿನ ಹನ್ನೆರಡು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು. ಕಳೆದ ವಾರ ನೀಡಿದ್ದ ಆದೇಶಕ್ಕಿಂತ ಮೂರು ಸಾವಿರ ಕ್ಯೂಸೆಕ್ ಕಡಿಮೆ.

2 ಈ ಆದೇಶದಿಂದ ಮೂರು ದಿನ ಹೆಚ್ಚುವರಿಯಾಗಿ ನೀರು ಬಿಡುಗಡೆ ಮಾಡಬೇಕಾಗುತ್ತದೆ. ಈಗ ಮುಂಚಿನ ಆದೇಶಕ್ಕಿಂತ ಹೆಚ್ಚು ನೀರು ತಮಿಳುನಾಡಿಗೆ ದೊರೆಯುತ್ತದೆ. ಈ ಹಿಂದಿನ ಆದೇಶವನ್ನು ಮರುಪರಿಶಿಳಿಸುವಂತೆ ಸುಪ್ರೀಂ ಕೋರ್ಟ್ ಗೆ ಮಾಡಿದ ಮನವಿ ತಿರಸ್ಕೃತವಾಗಿದೆ.

Developments after supreme court decision

3 ಕರ್ನಾಟಕ ರಾಜ್ಯವು 15 ಸಾವಿರ ಕ್ಯೂಸೆಕ್, ಹತ್ತು ದಿನ ನೀರು ಬಿಡುವ ಆದೇಶ ರದ್ದು ಮಾಡುವಂತೆ ಮನವಿ ಮಾಡಿತ್ತು. ತಮಿಳುನಾಡು ಹೇಳಿಕೊಳ್ಳುವಂತೆ ಅಲ್ಲಿ ಸ್ಥಿತಿ ಇಲ್ಲ. ಸರಿಯಾಗಿ ಮಳೆಯಾಗದೆ ಕೃಷಿಗೆ, ಕುಡಿಯುವುದಕ್ಕೆ ನೀರಿಲ್ಲ ಎಂದು ಮನವಿ ಮಾಡಿತ್ತು.

4 ಜನರ ಪ್ರತಿಭಟನೆ ವಿಚಾರವನ್ನು ವಾದದ ಸಂದರ್ಭದಲ್ಲಿ ತಂದಿದ್ದಕ್ಕೆ ಸುಪ್ರೀಂ ಕೋರ್ಟ್ ಕಟುಶಬ್ದಗಳಿಂದ ಕರ್ನಾಟಕವನ್ನು ತರಾಟೆಗೆ ತೆಗೆದುಕೊಂಡಿದೆ. ಸಾರ್ವಜನಿಕರೇ ಕಾನೂನು ಆಗುವುದಕ್ಕೆ ಸಾಧ್ಯವಿಲ್ಲ. ಕೋರ್ಟ್ ಆದೇಶ ಹೊರಡಿಸಿದ ಮೇಲೆ ಅದನ್ನು ಪಾಲಿಸಬೇಕು. ಅಧಿಕಾರಿಗಳು ಮರ್ಯಾದೆ ನೀಡಿ, ಆದೇಶ ಪಾಲನೆ ಆಗುವಂತೆ ಮಾಡಬೇಕು ಎಂದಿದೆ,

5 ಕಾವೇರಿ ವಿವಾದದ ಕಾರಣಕ್ಕೆ ಎರಡೂ ರಾಜ್ಯಗಳಲ್ಲಿ ಉದ್ರಿಕ್ತ ಪರಿಸ್ಥಿತಿ ಇದೆ. ಸೋಮವಾರ ಕರ್ನಾಟಕ ಮೂಲದವರು ಚೆನ್ನೈನಲ್ಲಿ ನಡೆಸುವ ವುಡ್ ಲ್ಯಾಂಡ್ ಹೋಟೆಲ್ ಮೇಲೆ ತಮಿಳು ಸಂಘಟನೆಗಳು ದಾಳಿ ನಡೆಸಿವೆ. ಗಾಜುಗಳನ್ನು ಪುಡಿ ಮಾಡಿವೆ. ಕರ್ನಾಟಕದಲ್ಲಿ ತಮಿಳು ಭಾಷಿಕರ ಮೇಲೆ ದಾಳಿಗಳಾಗಬಾರದು ಎಂದು ಪಾಂಪ್ಲೆಟ್ ಎಸೆದು ಹೋಗಿದ್ದಾರೆ.

6 ತಮಿಳುನಾಡಿನ ರಾಮೇಶ್ವರದಲ್ಲಿ ಕರ್ನಾಟಕ ನೋಂದಣಿ ಸಂಖ್ಯೆಯ ಎರಡು ಬಸ್ ಸೇರಿದಂತೆ ಐದು ವಾಹನಗಳ ಮೇಲೆ ದಾಳಿ ನಡೆಸಲಾಗಿದೆ.

7 ಕನ್ನದ ನಟರು, ಕಾವೇರಿ ವಿವಾದದ ಬಗ್ಗೆ ಅವಮಾನ ಆಗುವಂತೆ ಮಾತನಾಡಿದ ತಮಿಳು ಭಾಷಿಕ ಎಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆಸಿದ ವಿಡಿಯೋ ಆನ್ ಲೈನ್ ನಲ್ಲಿ ಬಿಡುಗಡೆ ಆದ ಮೇಲೆ ದಾಳಿಗಳಾಗಿವೆ.

8 ವಿಡಿಯೋ ಆನ್ ಲೈನ್ ನಲ್ಲಿ ವೈರಲ್ ಆದ ನಂತರ ದಾಳಿಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಯುವಕ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ. ಅತ ಕ್ಷಮೆ ಕೇಳಿದ ನಂತರ ಬಿಟ್ಟು ಕಳಿಸಿದ್ದಾರೆ.

9 ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿನ ಪರಿಸ್ಥಿತಿ ಬಗ್ಗೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

10 ಕಳೆದ ಶುಕ್ರವಾರ ಕರ್ನಾಟಕ ಬಂದ್ ಮಾಡಲಾಗಿತ್ತು. ಬೆಂಗಳೂರಿನ ಶಾಲೆ-ಕಾಲೇಜುಗಳು ಹಾಗೂ ಪ್ರಮುಖ ಸಾಫ್ಟ್ ವೇರ್ ಕಂಪೆನಿಗಳಿಗೆ ರಜೆ ಘೋಷಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
10 Major developments in Karnataka and Tamilnadu after supreme court decision about cauvery water release.
Please Wait while comments are loading...