'ಯೋಗಿ' ದೇಶದ ಮುಂದಿನ ಪ್ರಧಾನಿ ಆಗ್ತಾರಾ? ದೇವರಗುಡ್ಡದ ನವರಾತ್ರಿ ಕಾರ್ಣಿಕದ ಬಗ್ಗೆ ಭಾರೀ ವಿಶ್ಲೇಷಣೆ

ಹಾವೇರಿ: ಜಿಲ್ಲೆಯ ಸುಪ್ರಸಿದ್ಧ ದೇವರಗುಡ್ಡದಲ್ಲಿ ನವರಾತ್ರಿ ಕಾರ್ಣಿಕೋತ್ಸವ ಸಂಭ್ರಮದಿಂದ ಜರುಗಿತು. ಇಲ್ಲಿನ ಮಾಲತೇಶ ಸ್ವಾಮಿಯ ಸನ್ನಿಧಿಯಲ್ಲಿ ಈ ವರ್ಷ ಗೊರವಯ್ಯನಿಂದ (ಗುಡ್ಡದಯ್ಯ) ನುಡಿದ ಕಾಣೀಕವು ರಾಜಕೀಯ ಮಹಾ ತಿರುವನ್ನು ಸೂಚಿಸಿದೆ. ರೈತರಿಗೂ ಶುಭ ಸುದ್ದಿ ಸಿಕ್ಕಿದೆ. 'ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್' ಎಂಬ ಕಾರ್ಣಿಕ ನುಡಿಯು ದೇಶದ ಆಡಳಿತ ಚುಕ್ಕಾಣಿ 'ಯೋಗಿ-ಸಾಧು ಸಂತರ' ಕೈಗೆ ಸಿಗಲಿದೆ! ಎಂಬ ಮಹತ್ವದ ಸುಳಿವು ನೀಡಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಪ್ರತಿ ಹುಣ್ಣಿಮೆಗೆ, ಪ್ರಸಿದ್ಧ ಮೈಲಾರ ಲಿಂಗೇಶ್ವರನ ಜಾತ್ರೆಯ ವೇಳೆ ಹಾಗೂ ನವರಾತ್ರಿ ಸಂದರ್ಭದಲ್ಲಿ ದೇವರಗುಡ್ಡ ಮಾಲತೇಶ ಸ್ವಾಮೀಜಿ ದೇಗುಲಕ್ಕೆ ಅಪಾರ ಭಕ್ತರು ಹರಿದು ಬರುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವು ನವರಾತ್ರಿಯಂದು ಗೊರವಯ್ಯ ನಾಗಪ್ಪ ಅಜ್ಜ ಉರ್ಮಿ ಅವರು 15 ಅಡಿ ಎತ್ತರದ ಬಿಲ್ಲನ್ನೇರಿ ದೈವವಾಣಿ ನುಡಿದರು. ನೆರೆದಿದ್ದ ಭಕ್ತರು 'ಏಳು ಕೋಟಿ ಏಳು ಕೋಟಿಗೋ' ಎಂಬ ಹರ್ಷೋದ್ಘಾರ ಮೊಳಗಿಸಿದರು.

Devaragudda Karnika Prediction 2026

ಕಾರ್ಣಿಕ ನುಡಿಯುವ ಗೊರವಯ್ಯನವರು ಒಂಬತ್ತು ದಿನಗಳ ಕಾಲ ಉಪವಾಸ ಇರುತ್ತಾರೆ. ಕಠಿಣ ವ್ರತ ಆಚರಿಸಿಕೊಂಡು ಬಂದು, ಕಾರ್ಣೀಕದ ದಿವಸ ಬಿಲ್ಲನ್ನೇರಿ ಮೊದಲು 'ಸದ್ದಲೇ' ಎಂದು 'ದೈವವಾಣಿ (ಕಾರ್ಣಿಕ)' ನುಡಿಯುತ್ತಾರೆ. ಕಾರ್ಣಿಕದ ಆಧಾರದಲ್ಲಿ ಆ ವರ್ಷದ ಮಳೆ, ಬೆಳೆ, ರಾಜಕೀಯ, ಭವಿಷ್ಯದ ಕುರಿತು ನಿರ್ಧಾರ ಮಾಡಲಾಗುತ್ತಿದೆ. ಶತಮಾನಗಳಿಂದ ಭಕ್ತರ ದೈವವಾಣಿ ನಂಬಿಕೊಂಡು ಬಂದಿದ್ದಾರೆ. ಇದನ್ನು ಅದೆಷ್ಟೋ ರಾಜಕಾರಣಿಗಳು ನಂಬುತ್ತಾರೆ.

'ಯೋಗಿ' ಕೈಲಿ ದೇಶದ ಆಡಳಿತ ಚುಕ್ಕಾಣಿ: ಕಾರ್ಣಿಕದ ಅರ್ಥ..

ರಾಜ್ಯ ರಾಜಕಾರಣ, ದೇಶದ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ಮುಂದಿನ ನಾಯಕ ಯಾರು? ಎಂಬ ಪ್ರಶ್ನೆ ನಮ್ಮ ಮುಂದಿರುವಾಗಲೇ ದೇವರಗುಡ್ಡದ ಕಾರ್ಣಿಕೋತ್ಸವವು ರಾಜಕೀಯ ದಿಕ್ಕನ್ನು ಸೂಚಿಸಿದೆ ಎನ್ನಲಾಗಿದೆ. ಕಾರ್ಣಿಕದ ಪ್ರಕಾರ 'ದೇಶದ ಭವಿಷ್ಯ, ಆಡಳಿತವು ಸ್ವಾಮೀಜಿ, ಸಾಧು-ಸಂತರ ಪಾಲಾಗಲಿದೆ. 'ಯೋಗಿ'ಯೊಬ್ಬರು ದೇಶವನ್ನು ಮುನ್ನಡೆಸುತ್ತಾರೆ. ಅವರು ಪ್ರಧಾನಿಯಾಗಿ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಲಿದ್ದಾರೆ. ಅಂಥದ್ದೊಂದು ಕಾಲವನ್ನು ದೇಶದ ಜನ ನೋಡಬಹುದು. ಆ ಕಾಲ ಸನ್ನಿಹಿತವಾಗಲಿದೆ ಎಂಬುದರ ಸುಳಿವು ಈ ಕಾರ್ಣಿಕ ಹಿಂದೆ ಅಡಗಿದೆ ಎಂದು ವಿಶ್ಲೇಷಿಸಲಾಗಿದೆ.

2028-29 ಲೋಕಸಭಾ ಚುನಾವಣೆಗೆ ಹೊತ್ತಿಗೆ ಪ್ರಧಾನಿ ಮೋದಿಯವರ ಪೂರ್ಣಾವಧಿ ಆಡಳಿತ ಕೊನೆಗೊಳ್ಳಲಿದೆ. ಆಗ ಪ್ರಧಾನಿ ಮೋದಿಯವರೇ ಮತ್ತೆ ದೇಶ ಮುನ್ನಡೆಸುತ್ತಾರಾ? ಎಂಬ ಕುತೂಹಲವು ಮನೆ ಮಾಡಿದೆ. ಪ್ರಧಾನಿ ಮೋದಿ ನಂತರ ಉತ್ತರ ಪ್ರದೇಶದ 'ಯೋಗಿ' ಅದಿತ್ಯಾನಾಥ್, ಅಮಿತ್ ಶಾ ಸೇರಿದಂತೆ ದಿಗ್ಗಜರು ಹೆಸರುಗಳು ಕೇಳಿ ಬರುತ್ತಿವೆ. ಹೀಗಾಗಿ ಇಂದಿನ ದೇವರಗುಡ್ಡದ ಕಾರ್ಣಿಕವು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ರೈತರಿಗೆ ಸಿಹಿ ಸುದ್ದಿ

ಮುಂಗಾರು ಮಳೆ ಕೊರತೆ, ಬರಗಾಲಕ್ಕೆ ತುತ್ತಾಗಿದ್ದ ರೈತರು ಆರ್ಥಿಕ ಸಂಕಷ್ಟ ಅನುಭವಿಸಿದ್ದಾರೆ. ಇತ್ತೀಚೆಗೆ 'ರಾಜ್ಯದಲ್ಲಿ ಉತ್ತಮ ಹಿಂಗಾರು ಮಳೆ ಆಗಲಿದೆ' ಎಂದು ಶ್ರೀ ಕೋಡಿಮಠದ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರು. ಇದೀಗ ಕಾರ್ಣಿಕದಲ್ಲೂ ರೈತರಿಗೆ ಶುಭ ಸುದ್ದಿ ಸಿಕ್ಕಿದೆ. ಈ ದೈವವಾಣಿಯ ಪ್ರಕಾರ, ಹಿಂಗಾರು ನಿರೀಕ್ಷೆಯಂತೆ ಆಗಿ, ರೈತರ ಮೊಗದಲ್ಲಿ ಮಂದಹಾಸ ಮೂಡಲಿದೆ. ಉತ್ತಮ ಮಳೆ, ಬೆಳೆಗೆ ನಾಡು ಸಮೃದ್ಧವಾಗಲಿದೆ ಅಂತಲೂ ಅರ್ಥೈಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+