Get Updates
Get notified of breaking news, exclusive insights, and must-see stories!

"ಸರ್ವರ ಒಳಿತಿಗಾಗಿ ಕಾಂಗ್ರೆಸ್ ಗೆ ಪ್ರತಿರೋಧದ ಸಿದ್ಧಾಂತ ಕೊಟ್ಟವರು ದೀನದಯಾಳ್ ಉಪಾಧ್ಯಾಯ''

ಬೆಂಗಳೂರು, ಸೆಪ್ಟಂಬರ್ 25: ಪಂಡಿತ ದೀನ್ ದಯಾಳ್ ಉಪಾಧ್ಯಾಯ ಅವರು ಒಬ್ಬ ಮಾನವತಾವಾದಿ, ದೇಶದ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಮೂಲಕ ಅವರ ಅಂತ್ಯೋದಯದ ವಿಚಾರಗಳನ್ನು ಕಾರ್ಯರೂಪಕ್ಕೆ ತಂದಿರುವ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಚಿಕ್ಕಮಗಳೂರು ಜಿಲ್ಲಾ ಕಡೂರು ಮಂಡಲ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದಕ್ಕು ಮೊದಲು ಅವರು ಪಂಡಿತ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪಂಡಿತ ದೀನ್ ದಯಾಳ್ ಉಪಾಧ್ಯಾಯ ಅವರು ಒಬ್ಬ ಮಾನವತಾವಾದಿ. ಅವರು ಬಿಜೆಪಿಗೆ ಒಂದು ಸಿದ್ದಾಂತವನ್ನು ವೈಚಾರಿಕತೆಯನ್ನು ಕೊಟ್ಟಿರುವ ಮಹಾನ್ ವ್ಯಕ್ತಿ ಎಂದರು.

Deendayal Upadhyaya Gave Congress Opposition Ideology Basavaraj Bommai

ಏಕಾತ್ಮ ವಿಕಾಸ ಎಂದು ಅವರು ಏನು ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯ ವಿಕಾಸದ ಜೊತೆಗೆ ಸಮಾಜ ಮತ್ತು ದೇಶದ ವಿಕಾಸ ಆಗಬೇಕು. ಸರ್ವೋದಯವನ್ನು ಸಾಧಿಸಲು ಅಂತ್ಯೋದಯ ಅನ್ನುವಂತಹ ಕಲ್ಪನೆ ಕೊಟ್ಟರು. ಸಮಾಜದ ಅಭಿವೃದ್ಧಿ ಅತ್ಯಂತ ಕೆಳಹಂತ ತುಳಿತಕ್ಕೊಳಗಾದ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲಕ್ಕೆತ್ತುವ ಮೂಲಕ ಇಡೀ ದೇಶದ ಸಮುದಾಯ, ಸಮಾಜವನ್ನು ಉದ್ದಾರ ಮಾಡಿ ದೇಶಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ದೀನದಯಾಳ ಉಪಾಧ್ಯಾಯ ಅವರು 1950 ರ ದಶಕದಲ್ಲಿ ಆಶಯ ಹೊಂದಿದ್ದರು.

ಕಾಂಗ್ರೆಸ್ ಗೆ ಪ್ರತಿರೋಧ ಸಿದ್ದಾಂತ ಕೊಟ್ಟರು

ಕಾಂಗ್ರೆಸ್ ಗೆ ಪ್ರತಿರೋಧವಾಗಿರುವ ಸಿದ್ದಾಂತವನ್ನು ಸರ್ವರ ಒಳಿತಿಗಾಗಿ ದೀನದಯಾಳ ಉಪಾಧ್ಯಾಯ ಅವರು ಕೊಟ್ಟಿದ್ದಾರೆ. ಅವರು ಆಕಸ್ಮಿಕವಾಗಿ ನಿಧನ ಹೊಂದಿರುವುದು ಅಗೋಚರವಾಗಿರುತ್ತದೆ. ಆದಾಗ್ಯೂ ಕೂಡ ಅವರು ತಮ್ಮ ವಿಚಾರ ಹಾಗೂ ಸಿದ್ದಾಂತದಲ್ಲಿ ನಮ್ಮ ಮಧ್ಯ ಇದ್ದಾರೆ. ಬಿಜೆಪಿ ಕೇಂದ್ರದಲ್ಲಿ ಮೂರನೇ ಬಾರಿ ಆಯ್ಕೆಯಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ವ ಜನಾಂಗದ ಅಭಿವೃದ್ದಿಗಾಗಿ 25 ಕೋಟಿ ಜನರು ಬಡತನದಿಂದ ಮೇಲೆತ್ತುವ ಮೂಲಕ ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯದ ವಿಚಾರಗಳನ್ನು ಕಾರ್ಯರೂಪಕ್ಕೆ ತಂದಿರುವ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.

ವಿಕಸಿತ ಭಾರತ, ನಂಬರ್ ಒನ್ ಭಾರತ

ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ವಿಕಸಿತಗೊಳಿಸಿದರು ಭಾರತದ ನಾಯಕತ್ವವನ್ನು ವಿಶ್ವದಲ್ಲಿ ಮಾಡಿದ್ದಾರೆ. ನಿಮ್ಮೆಲ್ಲರ ಪಕ್ಷದ ಸಂಘಟನೆ ಮಾಡಿ, ನಾವು ಯಾವ ವಿಚಾರವನ್ನು ನಂಬಿದ್ದೇವೆ ಆ ವಿಚಾರಗಳನ್ನು ಜನರಿಗೆ ತಲುಪಿಸಬೇಕು. ದೇಶ ಸೇವೆಯಲ್ಲಿ ತೊಡಗಿಸಿಕೊಂಡು ದೇಶ ಕಟ್ಟುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೈಜೋಡಿಸಬೇಕು. ಬರುವಂತಹ ಮುಂದಿನ ಹತ್ತು ವರ್ಷ ಬಹಳ ಮುಖ್ಯ. ಈಗ ಹತ್ತು ವರ್ಷದ ಪ್ರಧಾನಿ ದೇಶಕ್ಕೆ ಭದ್ರ ಬುನಾದಿ ಹಾಕಿದ್ದಾರೆ.

2047ಕ್ಕೆ ಭಾರತ ವಿಕಸಿತ ಭಾರತ ಆಗಬೇಕಿದೆ. ಈಗ ಭಾರತ ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿದೆ. ಅಮೇರಿಕಾ, ಚೈನಾ, ಜಪಾನ್ ನಂತರ ಭಾರತ ಇದೆ. ಬರುವಂತಹ ಎರಡು ವರ್ಷಗಳಲ್ಲಿ ಭಾರತ ಮೂರನೇ ಸ್ಥಾನಕ್ಕೆ ಬರಲಿದೆ, 2047ಕ್ಕೆ ಭಾರತ ವಿಶ್ವದ ನಂಬರ್ ದೇಶ ಆಗಬೇಕು ಎಂಬಂತದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸು ಮತ್ತು ಎಲ್ಲ ಭಾರತೀಯರ ಕನಸಾಗಿದೆ. ಅದನ್ನು ನನಸು ಮಾಡಲು ಎಲ್ಲದಕ್ಕೂ ಮೂಲ ಪ್ರೇರಣೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು, ದೀನದಯಾಳ ಉಪಾಧ್ಯಾಯ ಅವರು ಹೇಳಿರುವುದು ಏಕಾತ್ಮ ವಿಕಾಸ ಮತ್ತು ಅಂತ್ಯೋದಯ. ಇವುಗಳನ್ನು ಮುಂದೆ ಹೋಗಬೇಕಾಗಿದೆ. ಅದರ ಮುಖಾಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳಿಗೆ ಬೆಂಬಲಿಸಿ ಭಾರತವನ್ನು ಶ್ರೇಷ್ಠ ಭಾರತ ಮಾಡುವ ಸಂಕಲ್ಪ ಮಾಡೋಣ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+