ಡಿಸಿಎಂ ಜೊತೆ ದಿಢೀರ್ ಸಭೆ ನಡೆಸಿದ ಸಚಿವ ಜಮೀರ್, ಕುತೂಹಲ ಕೆರಳಿಸಿದ ನಡೆ... Karnataka Government

ಕರ್ನಾಟಕ ರಾಜಕೀಯದಲ್ಲಿ ಇದೀಗ ದೊಡ್ಡ ಬಿರುಗಾಳಿ ಸೃಷ್ಟಿಯಾಗಿದ್ದು, ಯಾವುದೇ ಕ್ಷಣದಲ್ಲಿ ಸಿಎಂ ಬದಲಾವಣೆ ಗ್ಯಾರಂಟಿ ಅನ್ನೋ ಚರ್ಚೆ ಜೋರಾಗಿದೆ. ಇಷ್ಟೆಲ್ಲದರ ನಡುವೆ ದೆಹಲಿ ಮತ್ತು ಕರ್ನಾಟಕ ನಾಯಕರ ನಡುವೆ ಮಹತ್ವದ ಮಾತುಕತೆ ಆರಂಭವಾಗಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಗೊಂದಲ ಕೂಡ ಹೆಚ್ಚಾಗಿದೆ. ಒಂದು ಕಡೆ ಡಿಸಿಎಂ ಡಿ.ಕೆ. ಶಿವಕುಮಾರ್ ಬಣ ದೆಹಲಿಗೆ ಓಡಾಡುತ್ತಾ, ಸಿಎಂ ಸ್ಥಾನ ಬದಲಾಗಬೇಕು ಎಂದು ಹೇಳುತ್ತಿದ್ದಾರೆ. ಇನ್ನೊಂದು ಕಡೆ ಹಾಲಿ ಸಿಎಂ ಸಿದ್ದರಾಮಯ್ಯ ಅವರ ಬಣ ಕೂಡ ಹಠ ಹಿಡಿದು ಕೂತಿದೆ. ಇಷ್ಟೆಲ್ಲದರ ನಡುವೆ ಡಿಸಿಎಂ ಜೊತೆ ದಿಢೀರ್ ಸಭೆ ನಡೆಸಿದ ಸಚಿವ ಜಮೀರ್ ಅವರು ಗಮನ ಸೆಳೆದಿದ್ದಾರೆ.

ಹೌದು, ಕರ್ನಾಟಕದಲ್ಲಿ ಸಾಕಷ್ಟು ರಾಜಕೀಯದಲ್ಲಿ ಬಿರುಗಾಳಿ ಎದ್ದಿದ್ದು ಸಿಎಂ ಸ್ಥಾನಕ್ಕಾಗಿ ಭಾರಿ ಫೈಟಿಂಗ್ ನಡೆಯುತ್ತಿದೆ. ಹೀಗಿದ್ದಾಗ ದಿಢೀರ್ ಕೇಂದ್ರ ನಾಯಕರ ಭೇಟಿಗೆ ಕಾಂಗ್ರೆಸ್ ಲೀಡರ್ಸ್ & ರಾಜ್ಯ ವರಿಷ್ಠರ ಪಡೆ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ. ಇಷ್ಟೆಲ್ಲಾ ಒತ್ತಡದ ನಡುವೆ ಈಗ ದಿಢೀರ್ ರಾಜ್ಯದ ಘಟಾನುಘಟಿ ನಾಯಕರು ಮಹತ್ವದ ಸಭೆ ಒಂದನ್ನ ಬೆಂಗಳೂರಿನಲ್ಲಿ ನಡೆಸಿ, ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಈ ಸಭೆಯಲ್ಲಿ ಈಗ ಯಾರೆಲ್ಲಾ ಭಾಗಿಯಾಗಿದ್ರು? ಈ ಸಭೆ ಅಷ್ಟೊಂದು ಗಮನ ಸೆಳೆಯುತ್ತಿರುವುದು ಏಕೆ? ಬನ್ನಿ ತಿಳಿಯೋಣ.

DCM DK Shivakumar And Minister Jameer Sudden Meeting At Bengaluru

ಯಾವೆಲ್ಲಾ ನಾಯಕರು ಸಭೆಯಲ್ಲಿ ಭಾಗಿ?

ಅಂದಹಾಗೆ ದಿಢೀರ್ ಬಿಡಿಸಿಸಿ ಬ್ಯಾಂಕ್ ಚುನಾವಣೆ ನೆಪದಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆದಿದೆ. ಬಿಡಿಸಿಸಿ ಬ್ಯಾಂಕ್ ಚುನಾವಣೆಯ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ ಭಾಗಹಿಸಿದ್ದು ವಿಶೇಷವಾಗಿತ್ತು. ಏಕೆಂದರೆ ರಾಹುಲ್ ಗಾಂಧಿ ಭೇಟಿ ಬಳಿಕ ಅವರು ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ, ಶಾಸಕ ಎಸ್.ಟಿ. ಸೋಮಶೇಖರ್ ಹಾಗೇ ಸಿ.ಪಿ. ಯೋಗೇಶ್ವರ್, ಆನೇಕಲ್ ಶಾಸಕ ಶಿವಣ್ಣ, ಶ್ರೀನಿವಾಸ್, ಶರತ್ ಬಚ್ಚೇಗೌಡ ಮತ್ತು ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ಸೇರಿದಂತೆ ಹಲವು ಘಟಾನುಘಟಿ ಕಾಂಗ್ರೆಸ್ ನಾಯಕರ ಜೊತೆಗೆ ಸಭೆ ನಡೆಸಿದ್ದಾರೆ. ಇದೇ ವೇಳೆ ಮತ್ತೊಂದು ವಿಶೇಷ ಕೂಡ ನಡೆದು ಹೋಗಿತ್ತು.

ಡಿಸಿಎಂ ಜೊತೆ ಸಚಿವರ ಮಾತುಕತೆ

ಸಚಿವ ಜಮೀರ್ ಅಹ್ಮದ್ ಖಾನ್ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ, ಈ ವೇಳೆ ಹಲವು ವಿಚಾರಗಳ ಚರ್ಚೆಯಾಗಿದೆ ಎನ್ನಲಾಗಿದೆ. ಈ ಮೂಲಕ ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾಗುತ್ತಾ? ಅನ್ನೋ ಚರ್ಚೆಯ ವೇಳೆ ಈ ಸಭೆ ಸಾಕಷ್ಟು ಮಹತ್ವ ಕೂಡ ಪಡೆದುಕೊಂಡಿದೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೆ? ಎಂಬ ಕುತೂಹಲ ಕೂಡ ಡಬಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+