ಪ್ರವಾಸೋದ್ಯಮ ದಿನದಂದು ಯಾದಗಿರಿ ಕೋಟೆ ಕಣ್ತುಂಬಿಕೊಂಡ ಡಿಸಿ
ಯಾದಗಿರಿ, ಸೆಪ್ಟೆಂಬರ್ 27 : ಇಂದು (ಸೆಪ್ಟೆಂಬರ್ 27) ವಿಶ್ವ ಪ್ರವಾಸೋದ್ಯಮ ದಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಯಾದಗಿರಿ ಕೋಟೆ ವೀಕ್ಷಣೆ ಮಾಡಿದರು.
ಬೆಳಿಗ್ಗೆ 7 ಗಂಟೆ ಸುಮಾರಿಗೆ ವಿವಿಧ ಇಲಾಖೆಯ ಅಧಿಕಾರಿಗಳ ಜತೆ ಐತಿಹಾಸಿಕ ಯಾದಗಿರಿ ಕೋಟೆಗೆ ಭೇಟಿ ನೀಡಿ, ಕೋಟೆಯ ಮೇಲ್ತುದಿಯಲ್ಲಿರುವ ಹಳೆ ಕಾಲದ ಫಿರಂಗಿಗಳನ್ನು ಹಾಗೂ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. ಕೋಟೆಯ ಆವರಣ, ಕಮಾನುಗಳು, ಕೋಟೆಯ ಮೇಲಿಂದ ಸುತ್ತಲಿನ ಸೌಂದರ್ಯವನ್ನು ಕಣ್ತುಂಬಿಕೊಂಡರು.

ಇದೇ ವೇಳೆ ಮಾತನಾಡಿದ ಡಿಸಿ ಜೆ.ಮಂಜುನಾಥ್, "ಇಂದು ವಿಶ್ವ ಪ್ರವಾಸೋದ್ಯಮ ದಿನ ಈ ಹಿನ್ನೆಲೆಯಲ್ಲಿ ಜನರಲ್ಲಿ ಪ್ರವಾಸಿ ತಾಣಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕೋಟೆ ವೀಕ್ಷಣೆಗೆ ಬಂದಿದ್ದೇನೆ" ಎಂದರು.

ಪ್ರವಾಸಿಗರಿಗೆ ಅನುಕೂಲವವಾಗುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಸಾರ್ವಜನಿಕರು ಕೂಡ ಸ್ವಚ್ಛತೆ ಬಗ್ಗೆ ಗಮನ ಹರಿಸಲು ಪಾರಂಪರಿಕ, ಐತಿಹಾಸಿಕ ಕುರುಹುಗಳನ್ನು ಸರಂಕ್ಷಿಸಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.












Click it and Unblock the Notifications