ಮಂಡ್ಯದ ಜನರಿಗೆ, ಉತ್ತರ ಕರ್ನಾಟಕ ಶಾಸಕರಿಗೆ "ಡಿ.ಕೆ ಶಿವಕುಮಾರ್" ಅವಮಾನ, ವಿಡಿಯೋ ವೈರಲ್!
ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಂಡ್ಯದ ಜನರ ಬಗ್ಗೆ ನೀಡಿರುವ ಹೇಳಿಕೆಯು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ಅವರ ನಡುವೆ ವಾಕ್ಸಮರ ನಡೆಯುತ್ತಿರುವಾಗಲೇ ಮಂಡ್ಯ ವಿಚಾರ ಮುನ್ನೆಲೆಗೆ ಬಂದಿದೆ. ಮಂಡ್ಯದ ಜನರನ್ನು ಡಿ.ಕೆ ಶಿವಕುಮಾರ್ ಅವರು ಹೀಯಾಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು ಸೋಷಿಯಲ್ ಮೀಡಿಯಾದಲ್ಲಿ ಜನ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಷ್ಟೇ ಅಲ್ಲ ಇದು ರಾಜಕೀಯವಾಗಿಯೂ ವಿರೋಧಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಅವರು ಉತ್ತರ ಕರ್ನಾಟಕದ ಶಾಸಕರಿಗೆ ವೇದಿಕೆಯ ಮೇಲೆ ಅವಮಾನ ಮಾಡಿರುವ ವಿಡಿಯೋ ಸಹ ವೈರಲ್ ಆಗುತ್ತಿದೆ. ಇಷ್ಟಕ್ಕೂ ಡಿ.ಕೆ ಶಿವಕುಮಾರ್ ಅವರು ಮಂಡ್ಯ ಜನರನ್ನು ಉದ್ದೇಶಿಸಿ ಮಾತನಾಡಿದ್ದು ಏನು ಮತ್ತು ಉತ್ತರ ಕರ್ನಾಟಕದ ಶಾಸಕರಿಗೆ ಏನೆಂದು ಅವಮಾನ ಮಾಡಿದರು ಎನ್ನುವ ವಿವರ ಇಲ್ಲಿದೆ.

ಡಿ.ಕೆ ಶಿವಕುಮಾರ್ ಅವರಿಗೆ ಏಕಕಾಲಕ್ಕೆ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಿಂದ ವಿರೋಧ ವ್ಯಕ್ತವಾಗುತ್ತಿದೆ. ಡಿ.ಕೆ ಶಿವಕುಮಾರ್ ಅವರು ಮಂಡ್ಯದ ಜನರಿಗೆ ಅವಮಾನ ಮಾಡಿದ್ದಾರೆ. ಜನರ ಭಿಕ್ಷೆಯಿಂದಲೇ ಅವರಿಗೆ ಅಧಿಕಾರ ಸಿಕ್ಕಿದೆ. ಈ ಕ್ಷೇತ್ರದಿಂದ 5 ಜನ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡುವ ಮೂಲಕ ಜನ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಡಿ.ಕೆ ಶಿವಕುಮಾರ್ ಅವರು ಮಂಡ್ಯದ ಜನರನ್ನು ಬಹಿರಂಗವಾಗಿಯೇ ಹೀಯಾಳಿಸಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನು ಇದಕ್ಕೆ ಜೆಡಿಎಸ್ ಆಕ್ರೋಶ ಹೊರ ಹಾಕಿದೆ. ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಮಂಡ್ಯದ ಜನರು. ಅಧಿಕಾರಕ್ಕೆ ಬರಲು ಮಂಡ್ಯದ ಜನರ ಬಳಿ ಬಂದು ಪೆನ್ನು ಪೇಪರ್ ಕೊಡಿ ಎಂದು ಅಂಗಲಾಚಿ ಬೇಡಿದ್ದ DKShivakumar ಅವರ ಮಾತು ನಂಬಿ ಹಿಂದೆ ಮುಂದೆ ನೋಡದೆ 6 ಎಂಎಲ್ಎ ಗಳನ್ನು ಗೆಲ್ಲಿಸಿ ಕಳಿಸಿದರು. ಆದರೆ, ಇದಕ್ಕೆ ಪ್ರತೀಕಾರವಾಗಿ ಮಂಡ್ಯ ಜನೆತೆಗೆ ಸಿಕ್ಕ ಕೊಡುಗೆ ಏನೆಂದರೆ ಮಂಡ್ಯ ಜನರು "ಛತ್ರಿಗಳು" ಎಂಬ ಬಿರುದು ಅಧಿಕಾರದ ಮದ ನಾನು ನಾನು ಎಂಬ ಅಹಂ ಇದ್ದರೆ ಅಧಿಕಾರ ಕೊಟ್ಟ ಜನರು ಕಾಣಿಸುವುದಿಲ್ಲ ಎಂದು ಜೆಡಿಎಸ್ ಕಿಡಿಕಾರಿದೆ.

ಡಿ.ಕೆ ಶಿವಕುಮಾರ್ ಅವರು ಹೇಳಿದ್ದೇನು ?
ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಡಿ.ಕೆ ಶಿವಕುಮಾರ್ ಅವರು ಮಂಡ್ಯದವರು ಛತ್ರಿಗಳು, ನಿಮ್ಮ ಆಟವೆಲ್ಲ ನನಗೆ ಗೊತ್ತಿದೆ ಸುಮ್ಮನೆ ಕುಳಿತುಕೊಳ್ಳಿ ಎಂದಿದ್ದರು. ಜನ ಫಲಕ ಹಾಗೂ ಬಾವುಟಗಳನ್ನು ಪ್ರದರ್ಶಿಸಿದ್ದರು. ಇದನ್ನು ನೋಡಿ ಸಿಟ್ಟಾಗಿದ್ದ ಡಿ.ಕೆ ಶಿವಕುಮಾರ್ ಅವರು ಇದೆಲ್ಲಾ ಕೆಳಗೆ ಇಳಿಸಿ ನಿಮ್ಮ ಮಂಡ್ಯದವರ ಛತ್ರಿಗಳ ಆಟವನ್ನ ನಿಲ್ಲಿಸಿ ಎಂದು ಗದರಿದ್ದರು. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.
ಸ್ವಾಭಿಮಾನಕ್ಕೆ ಮತ್ತೊಂದು ಹೆಸರೆ ಮಂಡ್ಯ ಜನರು.
— Janata Dal Secular (@JanataDal_S) March 18, 2025
ಅಧಿಕಾರಕ್ಕೆ ಬರಲು ಮಂಡ್ಯದ ಜನರ ಬಳಿ ಬಂದು ಪೆನ್ನು ಪೇಪರ್ ಕೊಡಿ ಎಂದು ಅಂಗಲಾಚಿ ಬೇಡಿದ್ದ @DKShivakumar ಅವರ ಮಾತು ನಂಬಿ ಹಿಂದೆ ಮುಂದೆ ನೋಡದೆ 6 ಎಂಎಲ್ಎ ಗಳನ್ನು ಗೆಲ್ಲಿಸಿ ಕಳಿಸಿದರು.
ಆದರೆ ಇದಕ್ಕೆ ಪ್ರತೀಕಾರವಾಗಿ ಮಂಡ್ಯ ಜನೆತೆಗೆ ಸಿಕ್ಕ ಕೊಡುಗೆ ಏನೆಂದರೆ ಮಂಡ್ಯ… pic.twitter.com/FU8IOjxZ73
ಉತ್ತರ ಕರ್ನಾಟಕದ ಶಾಸಕರಿಗೂ ಅವಮಾನ
ಇನ್ನು ಡಿ.ಕೆ ಶಿವಕುಮಾರ್ ಅವರು ಉತ್ತರ ಕರ್ನಾಟಕದ ಶಾಸಕರಿಗೂ ಅವಮಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ನವಲಗುಂದ ಶಾಸಕರಿಗೆ ಗದರಿರುವ ವಿಡಿಯೋ ಸಹ ವೈರಲ್ ಆಗಿದೆ. ಉತ್ತರ ಕರ್ನಾಟಕದ ನವಲಗುಂದ ಶಾಸಕರಿಗೆ ಅವಮಾನ. ಕಳಸಾ ಬಂಡೂರಿ ಯೋಜನೆ ಹೋರಾಟದಲ್ಲಿ ಪ್ರಮುಖ ರೈತರ ಊರಿನಿಂದ ಆಯ್ಕೆಯಾದ ಶಾಸಕರು 🥹 Uk ಶಾಸಕರೇ ಸ್ವಲ್ಪ ಖಡಕ್ ಆಗ್ರಿ ಯೋಜನೆಗಳನ್ನ ಕೇಳೊದರಲ್ಲಿ ಹಾಗೆ ಯೋಜನೆಗಳನ್ನ ನೀಡೋ ಸ್ಥಾನಗಳಲ್ಲಿ ಬರಲು ನೀವೂ ಅರ್ಹರು. ಅವಕಾಶಗಳು ಸಿಕ್ಕಾಗ ಕೆಲಸ ಮಾಡಿ 🤐 #VoiceforuttaraKarnataka ಎಂದು ಈ ವಿಡಿಯೋ ಸಹ ವೈರಲ್ ಆಗುತ್ತಿದೆ.
ಉತ್ತರ ಕರ್ನಾಟಕದ ನವಲಗುಂದ ಶಾಸಕರಿಗೆ ಅವಮಾನ....
— Tweet ಕರ್ನಾಟಕ (@TweetKarnataka) March 19, 2025
ಕಳಸಾ ಬಂಡೂರಿ ಯೋಜನೆ ಹೋರಾಟದಲ್ಲಿ ಪ್ರಮುಖ ರೈತರ ಊರಿನಿಂದ ಆಯ್ಕೆಯಾದ ಶಾಸಕರು 🥹
Uk ಶಾಸಕರೇ ಸ್ವಲ್ಪ ಖಡಕ್ ಆಗ್ರಿ ಯೋಜನೆಗಳನ್ನ ಕೇಳೊದರಲ್ಲಿ ಹಾಗೆ ಯೋಜನೆಗಳನ್ನ ನೀಡೋ ಸ್ಥಾನಗಳಲ್ಲಿ ಬರಲು ನೀವೂ ಅರ್ಹರು.
ಅವಕಾಶಗಳು ಸಿಕ್ಕಾಗ ಕೆಲಸ ಮಾಡಿ 🤐#VoiceforuttaraKarnataka pic.twitter.com/vQRsBCC9Zs
ಒಟ್ಟಾರೆ ಏಕಕಾಲಕ್ಕೆ ಎರಡು ವಿಡಿಯೋಗಳು ವೈರಲ್ ಆಗಿದ್ದು ಡಿ.ಕೆ ಶಿವಕುಮಾರ್ ಅವರು ತೀವ್ರ ವಿರೋಧವನ್ನು ಎದುರಿಸುತ್ತಿದ್ದಾರೆ.
ಅಡ್ರೆಸ್ ಇಲ್ಲದಂತಾಗುತ್ತೀರಿ ಎಂದ ಆರ್. ಅಶೋಕ್!
ಇನ್ನು ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಅಧಿಕಾರಕೋಸ್ಕರ ಹೈಕಮಾಂಡ್ ನಾಯಕರ ಬಳಿ ಚಮಚಾಗಿರಿ, ಗುಲಾಮಗಿರಿ ಮಾಡುತ್ತಿರುವವರಿಗೆ ಸ್ವಾಭಿಮಾನಿ ಮಂಡ್ಯದ ಜನರ ಬಗ್ಗೆ ಮಾತನಾಡುವ ಯೋಗ್ಯತೆಯೂ ಇಲ್ಲ, ಅರ್ಹತೆಯೂ ಇಲ್ಲ ಎಂದಿದ್ದಾರೆ.
ಮಂಡ್ಯ ಅಂದರೆ ಇಂಡಿಯಾ ಎನ್ನುವ ಮಾತಿದೆ. ಮಂಡ್ಯದ ಜನತೆಯ ಸ್ವಾಭಿಮಾನಕ್ಕೆ ಧಕ್ಕೆ ತರುವ ಮಾತಾಡಿದರೆ ಅಡ್ರೆಸ್ ಇಲ್ಲದಂತಾಗುತ್ತೀರಿ. ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಬಿ.ವೈ ವಿಜಯೇಂದ್ರ ಹೇಳಿದ್ದೇನು ?
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಸಹ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಗರಂ ಆಗಿದ್ದಾರೆ. ಡಿ.ಕೆ ಶಿವಕುಮಾರ್ ಅವರಿಗೆ ಅಧಿಕಾರದ ಮದವೇರಿದೆ ಹೀಗಾಗಿ ಈ ರೀತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದಿದ್ದಾರೆ. ಮಂಡ್ಯದ ಜನ ಇವರ ಹೇಳಿಕೆಯನ್ನು ಪ್ರಶ್ನೆ ಮಾಡಬೇಕು ಅಂತ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿ.ಕೆ ಶಿವಕುಮಾರ್ ಅವರು ಬಿ.ವೈ ವಿಜಯೇಂದ್ರ ಅವರ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ. ಹೌದ್ರಿ ನಗಗೆ ಮದ, ನನಗೆ ಬೇಕಾದವರನ್ನು ನಾನು ಹೇಗೆ ಬೇಕಾದರೂ ಕರ್ಕೋತೀನಿ ಅವನು ಚೂರು ಕಡಿಮೆ ಮಾಡಿಕೊಳ್ಳಲಿ ಅಂತ ಟಾಂಗ್ ಕೊಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್
ಡಿ.ಕೆ ಶಿವಕುಮಾರ್ ಅವರು ಮಂಡ್ಯದ ಬಗ್ಗೆ ಹಾಗೂ ಉತ್ತರ ಕರ್ನಾಟಕದ ಶಾಸಕರ ಬಗ್ಗೆ ಮಾತನಾಡಿರುವ ವಿಡಿಯೋ ಎರಡೂ ವೈರಲ್ ಆಗುತ್ತಿದ್ದು. ಎರಡೂ ಘಟನೆಗೆ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಈ ವಿಡಿಯೋಗಳನ್ನು ಇರಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಸಹ ಮಾಡಲಾಗುತ್ತಿದೆ.
ರಾಜಕಾರಣಿಗಳು ಅಧಿಕಾರಕ್ಕೆ ಬರುವ ಮುಂಚೆ ಹಾಗೂ ಅಧಿಕಾರಕ್ಕೆ ಬಂದ ಮೇಲೆ ಯಾವ ರೀತಿ ನಡೆದುಕೊಳ್ಳುತ್ತಾರೆ ಇನ್ನುವುದಕ್ಕೆ ಡಿ.ಕೆ ಶಿವಕುಮಾರ್ ಅವರು ಈಗ ನಡೆದುಕೊಳ್ಳುತ್ತಿರುವುದೇ ಸ್ಪಷ್ಟವಾದ ಉದಾಹರಣೆಯಾಗಿದೆ ಎಂದಿದ್ದಾರೆ.
ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಅತ್ಯಂತ ವಿನಯದಿಂದ ಡಿ.ಕೆ ಶಿವಕುಮಾರ್ ಅವರು ನಡೆದುಕೊಳ್ಳುತ್ತಿದ್ದರು. ಆದರೆ ಇದೀಗ ಅವರು ಮಂಡ್ಯ ಹಾಗೂ ಉತ್ತರ ಕರ್ನಾಟಕದ ಜನರಿಗೆ ಅವಮಾನ ಮಾಡಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
-
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ನಾಸೀರ್ ಅಹ್ಮದ್ ವಜಾ; ಪಕ್ಷದಲ್ಲಿ ಶಿಸ್ತಿಲ್ಲದಿದ್ದರೆ ಕ್ರಮ ಎಂದ ಡಿಕೆ ಶಿವಕುಮಾರ್ -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ












Click it and Unblock the Notifications