• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖ್ಯಮಂತ್ರಿಗಳ ಭೇಟಿಗೆ ಕೋವಿಡ್ ಪರೀಕ್ಷೆ ಕಡ್ಡಾಯ

|

ಬೆಂಗಳೂರು, ಅಕ್ಟೋಬರ್ 09 : ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರೋಗ್ಯದ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬರುವವರು ಕಡ್ಡಾಯವಾಗಿ ಆಂಟಿಜೆನ್ ಟೆಸ್ಟ್ ಮಾಡಿಸಿಕೊಳ್ಳಬೇಕಿದೆ.

77 ವರ್ಷದ ಬಿ. ಎಸ್. ಯಡಿಯೂರಪ್ಪ ಈಗಾಗಲೇ ಒಮ್ಮೆ ಕೋವಿಡ್ ಸೋಂಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದ್ದರಿಂದ, ಸಿಬ್ಬಂದಿಗಳು ಈ ತೀರ್ಮಾನ ಕೈಗೊಂಡಿದ್ದಾರೆ. ಮುಖ್ಯಮಂತ್ರಿಗಳ ಭೇಟಿಗೆ ಬರುವ ನಿಯೋಗ, ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ.

ಬೆಂಗಳೂರು; ಕೋವಿಡ್ ನಿಯಂತ್ರಣಕ್ಕೆ ಯೋಜನೆ ಸಿದ್ಧ

ಗೃಹ ಕಚೇರಿ ಕೃಷ್ಣಾ ಅಥವ ಕಾವೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬರುವ ಜನರಿಗೆ ಆಂಟಿಜೆನ್ ಟೆಸ್ಟ್ ಮಾಡಲಾಗುತ್ತದೆ. ವರದಿ ನೆಗೆಟಿವ್ ಬಂದರೆ ಮಾತ್ರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ಸಿಗಲಿದೆ.

ಕೋವಿಡ್ ಪರೀಕ್ಷೆ; ಹೊಸ ದಾಖಲೆ ಬರೆದ ಬಿಬಿಎಂಪಿ

ಗುರುವಾರದ ವರದಿಯಂತೆ ಕರ್ನಾಟಕದಲ್ಲಿ 10704 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 6,79,356. ಇದುವರೆಗೂ ರಾಜ್ಯದಲ್ಲಿ 9675 ಜನರು ಮೃತಪಟ್ಟಿದ್ದಾರೆ.

ತಲೆನೋವು ಇದೆಯೇ? ಅದು ಕೋವಿಡ್ ಲಕ್ಷಣವಾಗಿರಬಹುದು: ಹೊಸ ಅಧ್ಯಯನ ವರದಿ

ಸ್ಥಳದಲ್ಲಿಯೇ ಪರೀಕ್ಷೆ

ಸ್ಥಳದಲ್ಲಿಯೇ ಪರೀಕ್ಷೆ

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ ಮತ್ತು ಕಾವೇರಿ ನಿವಾಸದ ಬಳಿ ಆಂಟಿಜೆನ್ ಟೆಸ್ಟ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಟೆಸ್ಟ್‌ನಲ್ಲಿ ಕೋವಿಡ್ ವರದಿ ನೆಗೆಟಿವ್ ಬಂದರೆ ಅವರನ್ನು ಮಾತ್ರ ಮುಖ್ಯಮಂತ್ರಿಗಳ ಭೇಟಿಗೆ ಕಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಿಕಿತ್ಸೆಗೆ ಕಳಿಸಲು ವ್ಯವಸ್ಥೆ

ಚಿಕಿತ್ಸೆಗೆ ಕಳಿಸಲು ವ್ಯವಸ್ಥೆ

ಮುಖ್ಯಮಂತ್ರಿಗಳ ಕಚೇರಿ, ನಿವಾಸದ ಬಳಿ ನಡೆಯುವ ಆಂಟಿಜೆನ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಅವರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತದೆ. ಆ ಪರೀಕ್ಷೆಯಲ್ಲೂ ಪಾಸಿಟಿವ್ ಬಂದರೆ ಅವರನ್ನು ಆಸ್ಪತ್ರೆಗೆ ಕಳಿಸಲು ವ್ಯವಸ್ಥೆ ಮಾಡಲಾಗುತ್ತದೆ.

ಪ್ರತಿದಿನ ಭೇಟಿ ನೀಡುವವರು

ಪ್ರತಿದಿನ ಭೇಟಿ ನೀಡುವವರು

ಮುಖ್ಯಮಂತ್ರಿಗಳ ಕಚೇರಿಗೆ ಪ್ರತಿದಿನ ಕೆಲವು ಅಧಿಕಾರಿಗಳು ಆಗಮಿಸುತ್ತಾರೆ. ಆದರೆ, ಅವರು ಪ್ರತಿದಿನ ಆಂಟಿಜೆನ್ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ವಾರಕ್ಕೊಮ್ಮೆ ಅವರ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಸೋಂಕಿತರು ಇರಬಹುದು

ಸೋಂಕಿತರು ಇರಬಹುದು

ಹಲವಾರು ಜನರು, ನಿಯೋಗ ಪ್ರತಿನಿತ್ಯ ಯಡಿಯೂರಪ್ಪ ಭೇಟಿಗೆ ಬರುತ್ತಾರೆ. ಅವರಲ್ಲಿ ಯಾರಿಗಾದರೂ ಕೋವಿಡ್ ಸೋಂಕು ಇದ್ದರೆ ಅದು ಇತರರಿಗೆ ಹರಡುವ ಸಾಧ್ಯತೆ ಇದೆ. ಆದ್ದರಿಂದ, ಆಂಟಿಜೆಟ್ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದೆ.

   RR Nagar ByElection : ಕುಮಾರಣ್ಣ ಸ್ಪಷ್ಟವಾಗಿ ಹೇಳಿದರು | Oneindia Kannada

   English summary
   COVID 19 antigen test mandatory for the people or the delegation to meet chief minister B. S. Yediyurappa. If they found negative will allow to meet CM.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X