ಹೆಚ್.ಡಿ.ಕುಮಾರಸ್ವಾಮಿ ಭೇಟಿಯಾದ ಇಸ್ರೇಲ್ ಕಾನ್ಸುಲೇಟ್ ಜನರಲ್: ಚರ್ಚೆಯಾಗಿದ್ದೇನು?

ಬೆಂಗಳೂರು, ನವೆಂಬರ್‌ 09: ದಕ್ಷಿಣ ಭಾರತದ ಇಸ್ರೇಲ್ ಕಾನ್ಸುಲೇಟ್ ಜನರಲ್ ಟಾಮಿ ಬೆನ್ - ಹೈಮ್ ಅವರು ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.

ಬಿಡದಿಯ ತೋಟಕ್ಕೆ ಆಗಮಿಸಿ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರನ್ನ ಭೇಟಿಯಾದ ಹೈಮ್ ಅವರು, ಬಹು ಮುಖ್ಯವಾಗಿ ಕರ್ನಾಟಕ ಮತ್ತು ಇಸ್ರೇಲ್ ನಡುವಿನ ಬಾಂಧವ್ಯದ ಬಗ್ಗೆ ಚರ್ಚಿಸಿದರು. ಹಮಾಸ್ ವಿರುದ್ಧ ನಡೆಸಲಾಗುತ್ತಿರುವ ನಿರ್ಣಾಯಕ ಹೋರಾಟದ ಬಗ್ಗೆಯೂ ಅವರು ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದರಲ್ಲದೆ, ಯುದ್ಧ ಮುಗಿದು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಮೇಲೆ ಕೃಷಿ, ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ, ತಂತ್ರಜ್ಞಾನ ವಿನಿಮಯ, ಸಾಂಸ್ಕೃತಿಕ ಸಂಬಂಧಗಳು ಸೇರಿದಂತೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕದ ಜತೆ ಕೆಲಸ ಮಾಡಲು ಉತ್ಸುಕವಾಗಿರುವುದಾಗಿ ತಿಳಿಸಿದರು.

Consulate General of Israel met HD Kumaraswamy

ಮಾತುಕತೆ ವೇಳೆ ಹಮಾಸ್ ಉಗ್ರರು ಇಸ್ರೇಲ್, ಅಮೆರಿಕ ಸೇರಿ ವಿವಿಧ ದೇಶಗಳ ಮಕ್ಕಳು, ವೃದ್ಧರು, ಮಹಿಳೆಯರನ್ನು ಅಪರಣ ಮಾಡಿರುವ ಅಂಶವನ್ನು ಪ್ರಸ್ತಾಪಿಸಿ ಗದ್ಗದಿತರಾದ ಅವರು, ಇಂಥ ಸಂಕಷ್ಟ ಸಮಯದಲ್ಲಿ ಭಾರತವು ಇಸ್ರೇಲ್ ಪರವಾಗಿ ಬಲ ನಿಂತಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಹಾಗೂ ಕಾಣದ ಕೆಲ ಶಕ್ತಿಗಳು ಹಮಾಸ್ ಗೆ ಆರ್ಥಿಕ, ಶಸ್ತ್ರಾಸ್ತ್ರ ನೆರವು ನೀಡುತ್ತಿರುವ ಬಗ್ಗೆ ಅತೀವ ಕಳವಳ ವ್ಯಕ್ತಪಡಿಸಿದರು.

2018ರಲ್ಲಿ ಅಂದಿನ ರಾಜ್ಯದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಇಸ್ರೇಲ್ ದೇಶಕ್ಕೆ ಕೈಗೊಂಡಿದ್ದ ಅಧ್ಯಯನ ಪ್ರವಾಸವನ್ನು ವಿಶೇಷವಾಗಿ ನೆನಪು ಮಾಡಿಕೊಂಡ ಟಾಮಿ ಬೆನ್ - ಹೈಮ್ ಅವರು, ಕರ್ನಾಟಕ ಮತ್ತು ಇಸ್ರೇಲ್ ಸಂಬಂಧಗಳ ವೃದ್ಧಿಯಲ್ಲಿ ಬಹಳಷ್ಟು ಕೆಲಸ ಮಾಡುವ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರಿಗೆ ವಿವರಗಳನ್ನು ನೀಡಿದರು ಹಾಗೂ ಕುಮಾರಸ್ವಾಮಿ ಅವರ ಸಹಕಾರವನ್ನು ಕೋರಿದರು.

ಭಾರತದಲ್ಲಿರುವ ಇಸ್ರೇಲ್ ದೇಶದ ಕಾನ್ಸುಲೇಟ್ ಜನರಲ್ (ದಕ್ಷಿಣ ಭಾರತ) ಟಾಮಿ ಬೆನ್ - ಹೈಮ್ ಅವರು ಇಂದು ಮಾಜಿ ಮುಖ್ಯ ಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸೌಹಾರ್ಧ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು. ಕರ್ನಾಟಕ ಹಾಗೂ ಇಸ್ರೇಲ್ ನಡುವೆ ಅಭಿವೃದ್ಧಿಯ ಪರಿಕಲ್ಪನೆಗಳ ವಿನಿಮಯ ಹಾಗೂ ಸೌಹಾರ್ಧ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ಅವರು ಮಾತುಕತೆ ನಡೆಸಿದರು.

ಸಮಾನ ಆಸಕ್ತಿ, ದೃಷ್ಟಿಕೋನದಿಂದ ಬೆಳೆಯುತ್ತಿರುವ ಕರ್ನಾಟಕ, ಇಸ್ರೇಲ್ ನಡುವೆ ಸಮಾನ ಹಿತಾಸಕ್ತಿಗಳು ಕೂಡ ಇದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ದೀರ್ಘಕಾಲೀನ ದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಟಾಮಿ ಬೆನ್ - ಹೈಮ್ ಅವರು ಮನವಿ ಮಾಡಿದರು. ಇಸ್ರೇಲ್ ಮತ್ತು ಕರ್ನಾಟಕ ಸಂಬಂಧಗಳನ್ನು ದೀರ್ಘಕಾಲೀನವಾಗಿ, ಬಲವಾಗಿ ಸ್ಥಿರಗೊಳಿಸುವುದು ಹಾಗೂ ಈ ಸಂಬಂಧಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶ ಹೊಂದಿರುವುದಾಗಿ ಅವರು ಕುಮಾರಸ್ವಾಮಿ ಅವರಿಗೆ ತಿಳಿಸಿದರು.

ಯುದ್ಧಪೀಡಿತ ದೇಶದಲ್ಲಿ ಆದಷ್ಟು ಬೇಗ ಶಾಂತಿ ನೆಲೆಸುವಂತೆ ಆಗಲಿ ಎಂದು ಈ ಸಂದರ್ಭದಲ್ಲಿ ಹಾರೈಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹಮಾಸ್ ವಶದಲ್ಲಿರುವ ಎಲ್ಲಾ ಒತ್ತೆಯಾಳುಗಳು ಸುರಕ್ಷಿತವಾಗಿ ಬಿಡುಗಡೆಯಾಗಿ ಬರಲಿ ಎಂದು ಹಾರೈಸಿದರು. ಅಲ್ಲದೆ, ಕೃಷಿ, ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕ ಮತ್ತು ಇಸ್ರೇಲ್ ಒಟ್ಟಿಗೆ ಕೆಲಸ ಮಾಡಬೇಕು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+