‘ಬೊಮ್ಮಾಯಿ ಅವರೇ ನಿಮ್ಮ ಮನೆಗೂ ಕರೆಂಟ್ ಫ್ರೀ’ ಎಂದ ಕಾಂಗ್ರೆಸ್!
ಬೆಂಗಳೂರು: ಕಾಂಗ್ರೆಸ್ ಉಚಿತ ಉಡುಗೊರೆಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿಗೆ ಈಗ ಪರಿಸ್ಥಿತಿ ಉಲ್ಟಾ ಹೊಡೆದಿದೆ. ಮಹಿಳೆಯರಿಗೆ ಉಚಿತ ಬಸ್, ಉಚಿತ ವಿದ್ಯುತ್ ಸೇರಿ 5 ಗ್ಯಾರಂಟಿಗಳನ್ನ ಸಿದ್ದರಾಮಯ್ಯ ಸರ್ಕಾರ ಅಧಿಕೃತವಾಗಿ ಜಾರಿಗೆ ತಂದಿದೆ. ಈ ಬಗ್ಗೆ ಟ್ವೀಟ್ ಮಾಡಿ ಬಿಜೆಪಿ ನಾಯಕರನ್ನ ಕೆಣಕಿ ನಿಮಗೂ ಕರೆಂಟ್ ಫ್ರೀ ಎಂದಿದೆ ಕಾಂಗ್ರೆಸ್!
ಹೌದು, ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಕೇವಲ 66 ಸ್ಥಾನ ಪಡೆದು ಹೀನಾಯ ಸೋಲು ಕಂಡಿತ್ತು. ಕಾಂಗ್ರೆಸ್ ಬರೋಬ್ಬರಿ 135 ಸ್ಥಾನ ಪಡೆದಿದೆ. ಈ ಮೂಲಕ ಭರ್ಜರಿ ಬಹುಮತದ ಸರ್ಕಾರ ರಚಿಸಿದೆ. ಆದರೆ ಕಾಂಗ್ರೆಸ್ ಇಂತಹ ದೊಡ್ಡ ಗೆಲುವು ಸಾಧಿಸಲು ಉಚಿತ ಉಡುಗೊರೆಯ ವಾಗ್ದಾನ ಕೂಡ ಸಿಕ್ಕಾಪಟ್ಟೆ ಕೆಲಸ ಮಾಡಿತ್ತು. ಇಷ್ಟಾದರೂ ಉಚಿತ ಉಡುಗೊರೆ ಜಾರಿಯಾಗಿಲ್ಲ ಅಂತಾ ಬಿಜೆಪಿ & ವಿಪಕ್ಷ ನಾಯಕರು ಲೇವಡಿ ಮಾಡಿದ್ದರು. ಆದರೆ ಇಂದು ಅದಕ್ಕೆ ಕೊನೆ ಮೊಳೆ ಬಿದ್ದಿದೆ.

'ಬೊಮ್ಮಾಯಿ ಅವರೇ ನಿಮ್ಮ ಮನೆಗೂ ಕರೆಂಟ್ ಫ್ರೀ'
ಸಿಎಂ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು, 5 ಗ್ಯಾರಂಟಿ ಜಾರಿಗೆ ಇಂದು ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿ, '@nalinkateel ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ @BSBommai ಅವರೇ, ನಿಮ್ಮ ಮನೆಗೂ ಫ್ರೀ! @ShobhaBJP ಅವರೇ, ನಿಮಗೂ ಪ್ರಯಾಣ ಫ್ರೀ!, @CTRavi_BJP ಅವರೇ, ನಿಮ್ಮ ಮನೆಯವರಿಗೂ ₹2000 ಫ್ರೀ!, ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ.' ಎಂದಿದೆ.
,@nalinkateel ಅವರೇ,
— Karnataka Congress (@INCKarnataka) June 2, 2023
ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ!@BSBommai ಅವರೇ, ನಿಮ್ಮ ಮನೆಗೂ ಫ್ರೀ!@ShobhaBJP ಅವರೇ, ನಿಮಗೂ ಪ್ರಯಾಣ ಫ್ರೀ!@CTRavi_BJP ಅವರೇ, ನಿಮ್ಮ ಮನೆಯವರಿಗೂ ₹2000 ಫ್ರೀ!
ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)!
ಇದು ನಮ್ಮ ಗ್ಯಾರಂಟಿ.
ಬಿಜೆಪಿ ನಾಯಕರು ಈಗ ಏನ್ ಹೇಳಬಹುದು?
ಕಾಂಗ್ರೆಸ್ ತನ್ನ ಟ್ವೀಟ್ ಮೂಲಕ ಬಿಜೆಪಿ ನಾಯಕರಾದ ನಳಿನ್ ಕುಮಾರ್ ಕಟೀಲ್ ಸೇರಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಹಾಗೂ ಸಿಟಿ ರವಿ ಅವರನ್ನ ಕೆಣಕಿದೆ. ಬಿಜೆಪಿಯ ಈ ನಾಯಕರು ಇಷ್ಟುದಿನ ಕಾಲ ಕಾಂಗ್ರೆಸ್ ಗ್ಯಾರಂಟಿಗಳು ಜಾರಿ ಆಗಲ್ಲ, ಕಾಂಗ್ರೆಸ್ ಹೇಳೋದೆಲ್ಲಾ ಸುಳ್ಳು ಅಂತಿದ್ರು. ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಐದೂ ಗ್ಯಾರಂಟಿ ಜಾರಿಗೆ ತಂದಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಈಗ ಏನ್ ಹೇಳಬಹುದು? ಅಂತಾ ಕಾಂಗ್ರೆಸ್ ನಾಯಕರು ಕಾಲು ಎಳೆಯುತ್ತಿದ್ದಾರೆ.

ಗ್ಯಾರಂಟಿ ಬಂದರೂ ₹15 ಲಕ್ಷ ಬರಲಿಲ್ಲ!
ಕಾಂಗ್ರೆಸ್ ನಾಯಕರು ಕರ್ನಾಟಕದಲ್ಲಿ ತಾವು ಹೇಳಿದಂತೆ 5 ಗ್ಯಾರಂಟಿ ಯೋಜನೆ ಜಾರಿಗೆ ತಂದು ಮಾತಿನಂತೆ ನಡೆದುಕೊಂಡಿದ್ದಾರೆ. ಆದರೆ ಕೇಂದ್ರ ಸರ್ಕಾರದಲ್ಲಿ ಮೋದಿ ಅವರು ಹೇಳಿದ್ದ ₹15 ಲಕ್ಷ ರೂಪಾಯಿ ಮಾತ್ರ ಇನ್ನೂ ಅಕೌಂಟ್‌ಗೆ ಬಂದಿಲ್ಲ ಏಕೆ? ಅನ್ನೋ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಜನ ಕೇಳ್ತಿದ್ದಾರೆ. ಹಾಗೇ ಚಿನ್ನದ ರಸ್ತೆ ಬಗ್ಗೆಯೂ ಚರ್ಚೆ ಶುರುವಾಗಿದ್ದು, ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.
ನಾವು ನುಡಿದಂತೆ ನಡೆಯುವವರು, ನಾವು ಮಾತು ಉಳಿಸಿಕೊಳ್ಳುವವರು.
— Karnataka Congress (@INCKarnataka) June 2, 2023
ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ಇತಿಹಾಸ ಸೃಷ್ಟಿಸಿದ್ದೇವೆ.
ಇದು ನಮ್ಮ ಬದ್ಧತೆ,
'ನಾವು ನುಡಿದಂತೆ ನಡೆಯುವವರು'
ಹಾಗೇ ಮತ್ತೊಂದ್ಕಡೆ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ಇನ್ನೊಂದು ಟ್ವೀಟ್ ಮಾಡಿದ್ದು, 'ನಾವು ನುಡಿದಂತೆ ನಡೆಯುವವರು, ನಾವು ಮಾತು ಉಳಿಸಿಕೊಳ್ಳುವವರು. ಐದೂ ಗ್ಯಾರಂಟಿ ಜಾರಿಗೊಳಿಸಿ ಇತಿಹಾಸ ಸೃಷ್ಟಿಸಿದ್ದೇವೆ. ಇದು ನಮ್ಮ ಬದ್ಧತೆ,' ಎನ್ನುವ ಮೂಲಕ ಬಿಜೆಪಿ & ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದೆ. ಇನ್ನು ಈ ಬಗ್ಗೆ ಪರ ವಿರೋಧದ ಚರ್ಚೆ ಆರಂಭವಾಗಿದ್ದು, ಫೈಟಿಂಗ್ ಮಾತ್ರ ಭರ್ಜರಿಯಾಗಿ ನಡೆಯುತ್ತಿದೆ.
ಒಟ್ನಲ್ಲಿ ಕಾಂಗ್ರೆಸ್ ತಾನು ವಿಧಾನಸಭೆ ಚುನಾವಣೆಗೆ ಮೊದಲು ಮಾತು ಕೊಟ್ಟಂತೆ ತನ್ನ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಈ ಮೂಲಕ ಬಿಜೆಪಿ ಮಾಡುತ್ತಿದ್ದ ಆರೋಪಗಳಿಗೆ ಉತ್ತರ ನೀಡಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಇದೀಗ ಮತ್ತೆ ಯಾವ ಕಿರಿಕ್ ಹೊತ್ತು ತರಲಿವೆ ಅನ್ನೋದನ್ನ ಕಾದು ನೋಡಬೇಕು ಅಷ್ಟೇ.












Click it and Unblock the Notifications