ಬಸವರಾಜ ಬೊಮ್ಮಾಯಿ ಕಾಮನ್ ಸೆನ್ಸ್ ಇಲ್ಲದ ಸಿಎಂ: ವಿಡಿಯೋ ಹಂಚಿಕೊಂಡು ಕಾಂಗ್ರೆಸ್‌ ಕಿಡಿ

ಮುಖ್ಯಮಂತ್ರಿ ಹುದ್ದೆ ಎಂದರೆ ದರ್ಪ, ದೌಲತ್ತು, ಅಹಂಕಾರ ಪ್ರದರ್ಶಿಸುವ ಹುದ್ದೆಯಲ್ಲ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ಬೆಂಗಳೂರು, ಮಾರ್ಚ್‌ 17: ಅದೃಷ್ಟದ ಮುಖ್ಯಮಂತ್ರಿ, ಕಮಾನ್‌ ಮ್ಯಾನ್‌ ಮುಖ್ಯಮಂತ್ರಿ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಕರೆಯಲಾಗಿತ್ತು. ಇನ್ನೂ ಜನಪ್ರತಿನಿಧಿಗಳು ಹಾಗೂ ಸಚಿವರು, ಮುಖ್ಯಮಂತ್ರಿಗಳು ಅಂತ ರಾಜ್ಯದ ಜನರು ತಮ್ಮ ಸಮಸ್ಯೆಗಳನ್ನ ಹೇಳಿಕೊಂಡು ಬರುತ್ತಾರೆ.

ಆದರೆ ಶುಕ್ರವಾರ ಆರ್‌ ಟಿ ನಗರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್‌ ಟಿ ನಗರದಲ್ಲಿರುವ ಖಾಸಗಿ ನಿವಾಸದ ಬಳಿ ದೂರದ ಊರಿನಿಂದ ಬಂದ ಮಹಿಳೆ ತಮ್ಮ ಸಮಸ್ಯೆಯನ್ನ ಹೇಳಿಕೊಳ್ಳುತ್ತಾ ಕಣ್ಣಿರಿಟ್ಟಿದ್ದು, ಈ ವಿಡಿಯೋವನ್ನ ಕಾಂಗ್ರೆಸ್‌ ಟ್ವೀಟರ್‌ ನಲ್ಲಿ ಹಂಚಿಕೊಂಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದೆ.

Congress Slams Chief Minister Basavaraj Bommai

ಮುಖ್ಯಮಂತ್ರಿ ಹುದ್ದೆ ಎಂದರೆ ದರ್ಪ, ದೌಲತ್ತು, ಅಹಂಕಾರ ಪ್ರದರ್ಶಿಸುವ ಹುದ್ದೆಯಲ್ಲ. ಜನರ ನೋವು ಆಲಿಸಿ, ಪರಿಹರಿಸುವ ಜನಸೇವೆಯ ಶ್ರೇಷ್ಠ ಸ್ಥಾನ. ಮಹಿಳೆಯೊಬ್ಬರ ಅಳುವಿನ ಅಳಲು ಕೇಳಿಸಿದರೂ ಕೇಳಿಸದಂತೆ ನಿರ್ಲಕ್ಷಿ ಹೋದ ಬಸವರಾಜ ಬೊಮ್ಮಾಯಿ ಅವರು ಕಾಮನ್ ಮ್ಯಾನ್ ಸಿಎಂ ಎಂದು ಕರೆದುಕೊಳ್ಳುವುದಕ್ಕಿಂತ ಕಾಮನ್ ಸೆನ್ಸ್ ಇಲ್ಲದ ಸಿಎಂ ಎಂದರೆ ಸೂಕ್ತ ಎಂದು ಕಿಡಿಕಾರಿದೆ.

ಇನ್ನೂ ಇನ್ನೊಂದು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಲಿಂಗಾಯತ ವಿರೋಧಿ ಬಿಜೆಪಿ ಎಂದು ಹ್ಯಾಶ್‌ ಟ್ಯಾಗ್‌ ಬಳಸಿ ಕಿಡಿಕಾರಿದ್ದು, ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಹತ್ತಿಕ್ಕುವ, ಲಿಂಗಾಯತ ಸಮುದಾಯವನ್ನ ನಿರ್ಲಕ್ಷಿಸುವ ಗುಪ್ತ ಅಜೆಂಡಾ ರೂಪುಗೊಂಡಿದೆಯೇ? ಬಿಜೆಪಿ ಶಾಸಕ ಶರಣು ಸಲಾಗರರಿಗೆ ಲಿಂಗಾಯತರಿಗೆ ಸಹಾಯ ಮಾಡುವುದೇ ಸಮಸ್ಯೆಯಂತೆ, ಲಿಂಗಾಯತರಿಗೆ ನೆರವಾಗಬಾರದು ಎಂದು ಬಿಜೆಪಿ ಕಚೇರಿಯಿಂದ ಸೂಚನೆ ಬಂದಿದೆಯೇ? ಹಾಗಾಗಿ ಈ ಅಸಹಾಯಕತೆಯೇ? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಕಳೆದ ಚುನಾವಣೆಯ ವೇಳೆ ಬಿಜೆಪಿ ನೀಡಿದ್ದ 600 ಕ್ಕೂ ಹೆಚ್ಚಿನ ಭರವಸೆಗಳಲ್ಲಿ ಶೇಕಡಾ 90 ರಷ್ಟು ಭರವಸೆಗಳು ಚರ್ಚೆಗೂ ಬರದೇ ಈಗಾಗಲೇ ಸಮಾಧಿ ಸೇರಿವೆ. ಬಿಜೆಪಿಯ ಸುಳ್ಳಿನ ಭರವಸೆಗಳ ಆತ್ಮಕ್ಕೆ ಎಂದೂ ಶಾಂತಿ ಸಿಗದಿರಲಿ. ಬಿಜೆಪಿಗರ ವಚನ ವಂಚನೆ ಅವರನ್ನು ಕಾಡುತ್ತಲೇ ಇರಲಿ ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಹೇಳಿದೆ.

Congress Slams Chief Minister Basavaraj Bommai

ವಿಜಯ ಸಂಕಲ್ಪ ಯಾತ್ರೆ ಮಾಡುತ್ತೇವೆ ಎಂದು ಹೋಗುವ ಬಿಜೆಪಿಗರು ಹಲವಾರು ಕಡೆ "U ಟರ್ನ್ ಯಾತ್ರೆ" ಮಾಡಿದ್ದಾರೆ. ಯಾತ್ರೆಗೆಂದು ಹೋದ ಸಿಟಿ ರವಿ, ಯಡಿಯೂರಪ್ಪ ಅವರಿಗೆ ಕಾರ್ಯಕರ್ತರ ಪ್ರತಿಭಟನೆಯ ಬಿಸಿ ತಟ್ಟಿ ವಾಪಾಸಾದ ಘಟನೆ ಬಿಜೆಪಿಯ ಅವನತಿಗೆ ಸಾಕ್ಷಿ ಹೇಳುತ್ತಿತ್ತು.
ಇದಲ್ಲವೇ ಅಮೃತಕಾಲ, ಇದಲ್ಲವೇ ಅಚ್ಛೆ ದಿನ್ ಬಿಜೆಪಿ ಎಂದು ಪ್ರಶ್ನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+