ಮಾತನಾಡಬೇಕಿರುವ ಮಹಾಶೂರರು ಮುಂಬೈ ರೆಸಾರ್ಟ್‌ನಲ್ಲಿದ್ದಾರೆ
ಬೆಂಗಳೂರು, ಜುಲೈ 23 : "ಮಾತನಾಡಬೇಕಿದ್ದ ಮಹಾಶೂರರು ವಿಧಾನ ಸಭೆಯಲ್ಲಿ ನಾಪತ್ತೆ" ಕರ್ನಾಟಕ ಬಿಜೆಪಿ ಮಾಡಿರುವ ಈ ಟ್ವೀಟ್‌ಗೆ ಕರ್ನಾಟಕ ಕಾಂಗ್ರೆಸ್ ತಿರುಗೇಟು ನೀಡಿದೆ.
ಮಂಗಳವಾರ ಮುಂಜಾನೆ ವಿಧಾನಸಭೆ ಕಲಾಪ ಆರಂಭವಾದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸದನಕ್ಕೆ ಆಗಮಿಸಿರಲಿಲ್ಲ. ಆಗ ಕರ್ನಾಟಕ ಬಿಜೆಪಿ ಪಕ್ಷದ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿ ಲೇವಡಿ ಮಾಡಿತ್ತು.
ಸದನದಲ್ಲಿ ಇಂದು ಮಾತನಾಡ ಬೇಕಿದ್ದ ಮಹಾಶೂರರು ವಿಧಾನಸಭೆಯಲ್ಲಿ ನಾಪತ್ತೆ ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಶಾಸಕರನ್ನು ವ್ಯಂಗ್ಯವಾಡಲಾಗಿತ್ತು.

ಇದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆಕೊಟ್ಟಿದೆ. ಬಿಜೆಪಿ ಆಪರೇಷನ್ ಕಮಲವನ್ನು ಪಕ್ಷ ಟ್ವೀಟ್ ಮೂಲಕ ತಿಳಿಸಿದೆ.
"ಮಾತನಾಡಬೇಕಿರುವ ಮಹಾಶೂರರು ಮುಂಬೈ ರೆಸಾರ್ಟಲ್ಲಿ ನಿಮ್ಮ ಸುಪರ್ಧಿಯಲ್ಲೇ ಇದ್ದಾರೆ. @BJP4Karnataka, ಆ ಮಹಾಶೂರರನ್ನು ಅಪಹರಿಸಿದೆ. ಮಾತನಾಡದಂತೆ ಹಣ-ಅಧಿಕಾರದ ಆಮಿಷವೊಡ್ಡಿದೆ. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಿರುವ ಶಾಸಕರಿಗೆ ಐಟಿ-ಇಡಿ ದಾಳಿಯ ಬೆದರಿಕೆಯೊಡ್ಡಿ ಬಾಯಿ ಮುಚ್ಚಿಸಲಾಗಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಮಂಗಳವಾರ ಬೆಳಗ್ಗೆಯಿಂದ ಬಿಜೆಪಿಯ ವಿವಿಧ ನಾಯಕರು ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಸಾಲು-ಸಾಲು ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ.













Click it and Unblock the Notifications