ಕಾಂಗ್ರೆಸ್ ಬಂದಿದೆ ಆದರೆ ಜನರಿಗೆ ಮಾತ್ರ ಏನೂ ಬರುತ್ತಿಲ್ಲ, ಸಿಗುತ್ತಿಲ್ಲ!
ಬೆಂಗಳೂರು, ಅಕ್ಟೋಬರ್ 21: ಕಾಂಗ್ರೆಸ್ ಬಂದಿದೆ ಆದರೆ ಜನರಿಗೆ ಮಾತ್ರ ಏನೂ ಬರುತ್ತಿಲ್ಲ, ಸಿಗುತ್ತಿಲ್ಲ, ಕೊಡುತ್ತಿಲ್ಲ, ತಲುಪುತ್ತಲೂ ಇಲ್ಲ. ಕಾಂಗ್ರೆಸ್ ಬಂದಿದೆ ಕನ್ನಡಿಗರ ಕಿವಿ ಮೇಲೆ ಲಾಲ್ ಬಾಗ್ ಅನ್ನೇ ಇಟ್ಟಿದೆ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಗೃಹ ಜ್ಯೋತಿ ಬರಲಿದೆ ಅಂದರು, ಈಗ ವಿದ್ಯುತ್ತೇ ಕೊಡುತ್ತಿಲ್ಲ. ಗೃಹ ಲಕ್ಷ್ಮಿ ಅಂದರು, ಎರಡನೇ ತಿಂಗಳಿಂದ ಹಣವನ್ನೇ ಹಾಕಿಲ್ಲ. ಅನ್ನಭಾಗ್ಯ ಅಂದರು, ಮೋದಿ ಸರ್ಕಾರದ ಅಕ್ಕಿನೂ ಕಾಂಗ್ರೆಸ್ಸಿಗರೇ ತಿಂದರು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಉಚಿತ ಬಸ್, ಶಕ್ತಿ ಯೋಜನೆ ಅಂದರು, ಈಗ ಬಸ್‌ಗಳನ್ನೇ ಬಿಡುತ್ತಿಲ್ಲ. ಯುವ ನಿಧಿ ಅಂದರು, ಅದು ಜಾರಿಗೆ ಬರಲೇ ಇಲ್ಲ, ಅಂಗನವಾಡಿ ಕಾರ್ಯಕರ್ತೆಯರಿಗೆ ₹10 ಸಾವಿರ ಅಂದರು, ಈಗ ಸಂಬಳವನ್ನೇ ಕೊಡುತ್ತಿಲ್ಲ. ಇಂದಿರಾ ಕ್ಯಾಂಟೀನ್ ಸಂಖ್ಯೆ ಹೆಚ್ಚಳ ಅಂದರು, ಈಗ ಇದ್ದವೂ ಬಂದ್ ಆಗುತ್ತಿವೆ, ಅಕ್ಕಿ ಇಲ್ಲ ಜನರಿಗೆ ದುಡ್ಡು ತಿನ್ನಿ ಅಂದರು, ಈಗ ದುಡ್ಡನ್ನೂ ಕೊಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಬಂದಿದೆ ಆದರೆ ಜನರಿಗೆ ಮಾತ್ರ ಏನೂ ಬರುತ್ತಿಲ್ಲ, ಸಿಗುತ್ತಿಲ್ಲ, ಕೊಡುತ್ತಿಲ್ಲ, ತಲುಪುತ್ತಲೂ ಇಲ್ಲ...!
— BJP Karnataka (@BJP4Karnataka) October 21, 2023
▪️ಗೃಹ ಜ್ಯೋತಿ ಬರಲಿದೆ ಅಂದರು, ಈಗ ವಿದ್ಯುತ್ತೇ ಕೊಡುತ್ತಿಲ್ಲ..!
▪️ಗೃಹ ಲಕ್ಷ್ಮಿ ಅಂದರು, ಎರಡನೇ ತಿಂಗಳಿಂದ ಹಣವನ್ನೇ ಹಾಕಿಲ್ಲ..!
▪️ಅನ್ನಭಾಗ್ಯ ಅಂದರು, ಮೋದಿ ಸರ್ಕಾರದ ಅಕ್ಕಿನೂ ಕಾಂಗ್ರೆಸ್ಸಿಗರೇ ತಿಂದರು..!
▪️ಉಚಿತ…
ಕಮಿಷನ್ ಕೊಡದಿದ್ದರೆ ಕಾಂಗ್ರೆಸ್ ಸರ್ಕಾರದಲ್ಲಿ ವೇತನವೂ ಸಿಗುವುದಿಲ್ಲ. ಪಂಚರಾಜ್ಯ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ಮತದಾರರಿಗೆ ಹಂಚಲು #ATMSarkara ಕರ್ನಾಟಕದ ಹಗಲು ದರೋಡೆಗಿಳಿದಿದೆ. ಗುತ್ತಿಗೆ ಆಧಾರದಲ್ಲಿರುವ ಬಿಬಿಎಂಪಿ ನೌಕರರು ಕಮಿಷನ್ ಕೊಡದ ಕಾರಣ ಐದು ತಿಂಗಳುಗಳಿಂದ ವೇತನ ನೀಡದೆ ಸಿದ್ದರಾಮಯ್ಯ ಅವರ ಸರ್ಕಾರ ಸತಾಯಿಸುತ್ತಿರುವುದು ಅಕ್ಷಮ್ಯ ಎಂದು ಸರ್ಕಾರದ ವಿರುದ್ದ ಬಿಜೆಪಿ ಕುಟುಕಿದೆ.

ದಕ್ಷಿಣ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಕಾಂಗ್ರೆಸ್ ಸರ್ಕಾರದ ನಾಲ್ಕು ತಿಂಗಳ ಆಡಳಿತ ಮರಣಶಾಸನವಾಗಿದೆ. ಕೈ ಸರ್ಕಾರ ಹೇರುತ್ತಿರುವ ನಿರಂತರ ಲೋಡ್ ಶೆಡ್ಡಿಂಗ್ ಹಾಗೂ ಅವೈಜ್ಞಾನಿಕ ದರ ಏರಿಕೆಯಿಂದ ಪೀಣ್ಯ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ಶೇ.30ಕ್ಕಿಂತಲೂ ಅಧಿಕ ನಷ್ಟವಾಗುತ್ತಿದ್ದು, ವಿಪರೀತ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು ಮಾತ್ರವಲ್ಲದೆ, ರಾಜ್ಯದಿಂದಲೇ ವಲಸೆ ಹೋಗುವತ್ತ ಚಿಂತಿಸಿವೆ. ಬಡವರ ಬದುಕನ್ನು ಬಂಗಾರಗೊಳಿಸುತ್ತೇನೆಂದು ಸುಳ್ಳು ಹೇಳಿ ಅಧಿಕಾರಕ್ಕೇರಿದ ಕಾಂಗ್ರೆಸ್, ಬಡವರ ಬದುಕನ್ನು ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದ್ದೇ ಕಾಂಗ್ರೆಸ್‌ನ ಸಾಧನೆ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.
ರಾಜ್ಯದ ಕಾಂಗ್ರೆಸ್ ನ ಶಾಸಕರ ಪರಿಸ್ಥಿತಿ ಮನೆಯೊಂದು ನೂರು ಬಾಗಿಲಿನಂತೆ. ತಮ್ಮ ಸರ್ಕಾರದ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ, ಅನುದಾನ ಪಡೆಯುವಂತಹ ದೈನೇಸಿ ಪರಿಸ್ಥಿತಿ ಕಾಂಗ್ರೆಸ್ ಶಾಸಕರದ್ದು! ಈಗ ಚುನಾವಣೆ ನಡೆದರೆ, ಗೆದ್ದಿರುವ 135 "ಕೈ" ಶಾಸಕರಲ್ಲಿ, 100 ಶಾಸಕರು ಕಾಂಗ್ರೆಸ್‌ಗೆ ಮತ ನೀಡುವುದು ಸಹ ಅನುಮಾನ..ಈ ಪರಿ ಕೆಟ್ಟ ಆಡಳಿತ ನೀಡಿದ ಸಂಪೂರ್ಣ ಶ್ರೇಯ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.












Click it and Unblock the Notifications