ಕಾಂಗ್ರೆಸ್ ಸರಕಾರ ನೂರಕ್ಕೆ ನೂರು ಭ್ರಷ್ಟ, ಕಮಿಷನ್ ಸರಕಾರ: ಎನ್.ರವಿಕುಮಾರ್

ಬೆಂಗಳೂರು, ಆಗಸ್ಟ್‌ 14: ರಾಜ್ಯದ ಕಾಂಗ್ರೆಸ್ ಸರಕಾರ ನೂರಕ್ಕೆ ನೂರು ಭ್ರಷ್ಟ, ಕಮಿಷನ್ ಸರಕಾರ. ಸರಕಾರದ ವಿರುದ್ಧ ಪೋಸ್ಟರ್ ಅಭಿಯಾನ, ಶಾಸಕರು, ಸಂಸದರು, ಜನಪ್ರತಿನಿಧಿಗಳಿಂದ ಬಹಳ ದೊಡ್ಡ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಕಿಡಿಕಾರಿದ್ದಾರೆ.

ಈ ಕುರಿತು ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು 4 ವರ್ಷ ಅಧಿಕಾರದಿಂದ ದೂರ ಇದ್ದು ಒಂದು ರೀತಿ ಹಸಿದ ಹುಲಿಗಳಾಗಿದ್ದಾರೆ. ಎಲ್ಲರೂ ಹಣ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

bjp-leader-n-ravi-kumar

ಗುತ್ತಿಗೆದಾರರು ಯೂ ಟರ್ನ್ ಹೊಡೆದರೆ ಯಾರು ನಂಬುತ್ತಾರೆ? ಅವರು ಕೇಳಿದ್ದು ಸತ್ಯ ಎಂದ ಅವರು, ಈ ಸರಕಾರ ನೂರಕ್ಕೆ ನೂರು ಭ್ರಷ್ಟಾಚಾರದ ಸರಕಾರ ಎಂಬುದು ಎಂಎಲ್‍ಎಗಳಿಗೆ, ಜನರಿಗೆ ಗೊತ್ತಿದೆ. ಸರಕಾರ ಎರಡು ತಿಂಗಳಾಗುವಾಗಲೇ ಹೀಗಾಗಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಾರೆ. ಮುಖ್ಯಮಂತ್ರಿಗಳು ತಮ್ಮ ಆಪ್ತರ ಬಳಿ ಎರಡೇ ತಿಂಗಳಲ್ಲಿ ನಮ್ಮ ಸರಕಾರದ ಹೆಸರು ಖರಾಬಾಗುತ್ತಿದೆ ಎಂದಿರುವುದು ಗೊತ್ತಾಗಿದೆ ಎಂದು ತಿಳಿಸಿದರು.

ರಾಜ್ಯದ ಕಾಂಗ್ರೆಸ್ ಸರಕಾರ ನೂರಕ್ಕೆ ನೂರು ಭ್ರಷ್ಟ, ಕಮಿಷನ್ ಸರಕಾರ ಎಂದು ಅವರು ಟೀಕಿಸಿದರು. ಸರಕಾರದ ವಿರುದ್ಧ ಪೋಸ್ಟರ್ ಅಭಿಯಾನ, ಶಾಸಕರು, ಸಂಸದರು, ಜನಪ್ರತಿನಿಧಿಗಳಿಂದ ಬಹಳ ದೊಡ್ಡ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.

ಬಹಳಷ್ಟು ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಜನ ಇವರಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ ಎಂದು ವಿಶ್ವಾಸದಿಂದ ನುಡಿದರು. ಇದೇ 16ರ ಬಳಿಕ ರಾಜ್ಯದ ಭ್ರಷ್ಟ, ಕಮಿಷನ್ ಸರಕಾರದ ವಿರುದ್ಧ ರಾಜ್ಯದಾದ್ಯಂತ ಭಾರಿ ದೊಡ್ಡ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಚಲುವರಾಯಸ್ವಾಮಿ ಅವರು ಅಧಿಕಾರಿಗಳ ಬಳಿ ಆರರಿಂದ 8 ಲಕ್ಷ ಕಲೆಕ್ಷನ್ ಮಾಡಲು ಸೂಚಿಸಿದ್ದು ಸುಳ್ಳೇ? ರಾಜ್ಯಪಾಲರಿಗೆ ದೂರು ಕೊಟ್ಟಿದ್ದು ಸುಳ್ಳೇ? ಇವರು ಆವೇಶದಿಂದ ಮಾತನಾಡಿದರೆ ಯಾರು ನಂಬುತ್ತಾರೆ ಎಂದು ಕೇಳಿದರು. ಇದು ಹಣ ಮಾಡಿಕೊಳ್ಳಲು ಬಂದ ಸರಕಾರ. ಇದು ಅಭಿವೃದ್ಧಿಗೆ ಮಾರಕ ಎಂದು ಆಕ್ಷೇಪಿಸಿದರು.

ಭ್ರಷ್ಟಾಚಾರ ವಿಚಾರದಲ್ಲಿ ಶೂನ್ಯ ಸಹಿಷ್ಣು ಎಂದಿದ್ದ ರಾಹುಲ್ ಗಾಂಧಿ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಗುತ್ತಿಗೆದಾರರ ಕೆಲಸ ಆದುದಕ್ಕೆ ಹಣ ಬಿಡುಗಡೆ ಮಾಡಬೇಕಲ್ಲವೇ? ಎಂದು ಕೇಳಿದರು. ಗುತ್ತಿಗೆದಾರರು ಒತ್ತಡಕ್ಕೆ ಮಣಿದು ಕಮಿಷನ್ ಹಣ ಕೇಳಿಲ್ಲ ಎಂದಿರುವ ಸಾಧ್ಯತೆ ಇದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+