Congress Manifesto 2023: ಕಾಂಗ್ರೆಸ್ ನ ಗ್ಯಾರಂಟಿ ಪ್ರಣಾಳಿಕೆ ಬಿಡುಗಡೆ; ಕರ್ನಾಟಕಕ್ಕೆ ಕೈ ಪಡೆಯಿಂದ ಏನೆಲ್ಲಾ ಭರವಸೆ?
ಬೆಂಗಳೂರು,ಮೇ2: 2023 ರ ವಿಧಾನಸಭಾ ಚುನಾವಣೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ಈಗಾಗಲೇ ಹಲವು ಗ್ಯಾರಂಟಿ ಘೋಷಣೆಯ ಮೂಲಕ ಹಲವು ಭರವಸೆಯನ್ನ ನಾಡಿನ ಜನರಿಗೆ ನೀಡಿದ್ದು, ರಾಜ್ಯ ಚುನಾವಣಾ ಪ್ರಣಾಳಿಕೆಯನ್ನ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬಿಡುಗಡೆ ಮಾಡಿದ್ದಾರೆ.
Congress Manifesto 2023: ಕಾಂಗ್ರೆಸ್ನ ಗ್ಯಾರಂಟಿ ಪ್ರಣಾಳಿಕೆ ಬಿಡುಗಡೆ.. #congressmanifesto #congressmanifesto2023 #karnatakaelections2023 #congress pic.twitter.com/A5691uRhVt
— oneindiakannada (@OneindiaKannada) May 2, 2023
ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ (ಶಾಂಗ್ರಿಲಾ) ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಪಕ್ಷ ಈಗಾಗಲೇ ಮಹಿಳೆಯರಿಗೆ, ಯುವಕರ ಹಾಗೂ ರೈತರ ಸಮುದಾಯಕ್ಕೆ ಗ್ಯಾರಂಟಿ ಘೋಷಣೆ ಮಾಡಿದ್ದು, ಇದೀಗ ಬಿಜೆಪಿಗೆ ಠಕ್ಕರ್ ಕೊಡಲು ಮತಾರರ ಓಲೈಸಲು ಭರಪೂರ ಯೋಜನೆಗಳನ್ನು ಘೋಷಿಸಿದೆ.

ಸರ್ವ ಜನಾಂಗದ ಶಾಂತಿಯ ತೋಟ,ಇದುವೆ ಕಾಂಗ್ರೆಸ್ ಬದ್ದತೆ ಹೆಸರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ ಎಂದು ಘೋಷ ವಾಕ್ಯವನ್ನ ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ಕಾಂಗ್ರೆಸ್ ಪ್ರಣಾಳಿಕೆಯ ಮುಖ್ಯ ಅಂಶಗಳು ಇಲ್ಲಿವೆ?
BPL ಕುಟುಂಬಕ್ಕೆ ಪ್ರತಿ ತಿಂಗಳು 10 ಕೆ ಜಿ ಅಕ್ಕಿ ಉಚಿತ
ಗೃಹ ಜ್ಯೋತಿ ಯೋಜನೆಯಡಿ 200 ಯುನಿಟ್ ವಿದ್ಯುತ್
ನಿರುದ್ಯೋಗ ಯುವಕರಿಗೆ 3 ಸಾವಿರ ಸಹಾಯನ
ಗೃಹಲಕ್ಷೀ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ
ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ
ಯುವನಿಧಿ ಯೋಜನೆಯಡಿ ನಿರುದ್ಯೋಗ ಯುವಕರಿಗೆ ನೆರವು
ನೇಕಾರರ ಮಗ್ಗ ಆಧುನಿಕರಣಕ್ಕಾಗಿ ವರ್ಷಕ್ಕೆ 30 ಸಾವಿರ ಅನುದಾನ
ಮಂಗಳಮುಖಿ ಮಂಡಳಿ ಸ್ಥಾಪನೆ ವಾರ್ಷಿಕ 100 ಕೋಟಿ ಅನುದಾನ ಮತ್ತು ಅದರ ಮೂಲಕ ಮೂರು ಲಕ್ಷದವರೆಗೆ ಸ್ವಉದ್ಯೋಗಕ್ಕೆ ಅನುದಾನ
ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಬಾರಿಯ ನೆರವಿನ ರೂಪದಲ್ಲಿ 20,000 ಅನುದಾನ
ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಗೆ 3 ಸಾವಿರ ಕೋಟಿ ಹೂಡಿಕೆ
ಮೈಸೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ರೂ 5 ಸಾವಿರ ಸ್ಫೋಟಗಳ ಹೂಡಿಕೆ
ಮಂಡ್ಯದಲ್ಲಿ ಮೈಶುಗರ್ ಕಾರ್ಖಾನೆ ಮುನಶ್ವೇತನ ಮತ್ತು ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಯೋಜನ ಅನುಷ್ಠಾನ
ಮೈಸೂರಿನಲ್ಲಿ 500 ಕೋಟಿ ಬಜೆಟ್‌ನೊಂದಿಗೆ ವಿಶ್ವದರ್ಜೆಯ ಡಾ. ರಾಜ್ ಕುಮಾರ್ ಫಿಲ್ಮ್ ಸಿಟಿ ನಿರ್ಮಾಣ
ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ವಿಶ್ವವಿದ್ಯಾಲಯ ಮತ್ತು ಕ್ರೀಡಾ ಸಂಕೀರ್ಣ ಸ್ಥಾಪನೆ
ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ರೂ 5 ಸಾವಿರ ಕೋಟಿ ಮೀಸಲು
ಮಹಾರಾಷ್ಟ್ರ ಗಡಿಭಾಗದ ಎಲ್ಲಾ ಕನ್ನಡ ಶಾಲೆಗಳಿಗೆ ಒಂದು ಬಾರಿಯ ಮೂಲಸೌಲಭ್ಯ ದೇಣಿಗೆಯಾಗಿ 1 ಕೋಟ ರೂ ಹಾಗೂ ಮಾಸಿಕ 1 ಲಕ್ಷ ಸಬ್ಸಿಡಿ ಮತ್ತು ಶಿಕ್ಷಕರ ನೇಮಕಾತಿ
ಕಾರವಾರ, ಧಾರವಾಡ, ವಿಜಯಪುರ ಹಾಗೂ ಬಾಗಲಕೋಟೆಗಳಲ್ಲಿ 500 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ
ಪ್ರತಿ ಜಿಲ್ಲೆಯಲ್ಲಿ ಬೇಳೆ/ಕಾಳುಗಳ ದಾಸ್ತಾನು ಕೇಂದ್ರ ಸ್ಥಾಪನೆ
ಪತ್ರಕರ್ತರ ಕಲ್ಯಾಣ ನಿಧಿ ಸ್ಥಾಪನೆಗೆ ರೂ 500 ಕೋಟಿ ಮೀಸಲು
ಅನಿವಾಸಿ ಕನ್ನಡಿಗರ ವ್ಯವಹಾರಕ್ಕಾಗಿ ಪ್ರತ್ಯೇಕ ಸಚಿವಾಲಯ
ಅನಿವಾಸಿ ಕನ್ನಡಿಗರು ರಾಜ್ಯದಲ್ಲಿ ಉದ್ಯಮ ನಡೆಸಲು ಉತ್ತೇಜನ ರೂ 1,000 ಕೋಟಿ ಆವರ್ತನ ನಿಧಿ
ವಿಧವಾ ಪಿಂಚಣಿ 2500 ರೂ ಗೆ ಹೆಚ್ಚಳ
ಮುಂದಿನ ಐದು ವರ್ಷಗಳಲ್ಲಿ ನೀರಾವರಿಗಾಗಿ 1.50 ಲಕ್ಷ ಕೋಟಿ ವಿನಿಯೋಗ
ಕ್ಷೀರಧಾರೆ: ಪ್ರತಿ ಲೀಟರ್ ಹಾಲಿನ ಸಬ್ಸಿಡಿಯನ್ನು 5 ರಿಂದ 7 ಕ್ಕೆ ಹೆಚ್ಚಳ
ಮಿಷನ್ ಕ್ಷೀರಕ್ರಾಂತಿ- ಪ್ರತಿ ದಿನ 1.5 ಕೋಟಿ ಲೀಟರ್ ಹಾಲು ಉತ್ಪಾದನೆ ಗುರಿ ಸಾಧನೆಗಾಗಿ ಯೋಜನೆ
ಭ್ರಷ್ಟಾಚಾರ ನಿಗ್ರಹಿಸಲು ವಿಶೇಷವಾದ ಕಾನೂನು ರಚನೆ
ಪೊಲೀಸರಲ್ಲಿ ರಾತ್ರಿ ಪಾಳಿ ಸಿಬ್ಬಂದಿಗೆ 5000 ವಿಶೇಷ ಮಾಸಿಕ ಭತ್ಯೆ, ಎಲ್ಲಾ ಪೊಲೀಸರಿಗೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ
ಬಡವರಿಗಾಗಿ ನಿರ್ಮಿಸುವ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ 3.5 ಲಕ್ಷ ರೂ ಸಬ್ಸಿಡಿ ಸಹಕಾರ
ಬಿಎಂಟಿಸಿ ಬಸ್ ಗಳ ಸಂಖ್ಯೆ 10,000 ಕ್ಕೆ ಹೆಚ್ಚಳ
ಕೆಎಸ್ ಆರ್ ಟಿ ಸಿ ಬಸ್ ಗಳ ಸಂಖ್ಯೆ 15,000 ಕ್ಕೆ ಹೆಚ್ಚಳ
ಡಾ. ಪುನೀತ್ ರಾಜಕುಮಾರ್ ಹೃದಯ ಆರೋಗ್ಯ ಯೋಜನೆ - ವೈದ್ಯರು, ಆಸ್ಪತ್ರೆಗಳು,ಡಿಫ್ರಿಬಿಲೇಟರ್ (ಎ.ಇ.ಡಿ) ಗಳನ್ನು ಕೊಂಡುಕೊಳ್ಳಲು ಸಹಾಯ ಧನ ಯೋಜನೆ
ರಾಜ್ಯದಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಯುವಕರಿಗೆ 50 ಟ್ಯಾಕ್ಸಿಗಳಿಗೆ ಪರವಾನಿಗೆ ಮತ್ತು ಶೇಕಡಾ 5 ಬಡ್ಡಿ ರಹಿತ ಸಹಾಯಧನ
ಸ್ಮಾರ್ಟ್ ಆಪ್ ನಿಧಿ- ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಕೋಟಿ ನೀಡಿಕೆ
ದ್ರಾಕ್ಷಿ ಬೆಳೆಗಾರರಿಗೆ ಸಬ್ಸಿಡಿ ಒದಗಿಸಲು 500 ಕೋಟಿ
ಕಾಫಿ ಕರ್ನಾಟಕ ಬ್ರ್ಯಾಂಡ್ ಸೃಷ್ಟಿ
ಕನಕಪುರದಲ್ಲಿ ಅತ್ಯಾಧುನಿಕ ವಿಶ್ವ ದರ್ಜೆಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ
ಅಂಗನವಾಡಿ ಕಾರ್ಯಕರ್ತೆಯರ ವೇತನ 11,500 ರಿಂದ 15 ಸಾವಿರಕ್ಕೆ ಹೆಚ್ಚಳ
ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ 7,500 ರಿಂದ 10,000 ಕ್ಕೆ ಹೆಚ್ಚಳ
ಆಶಾ ಕಾರ್ಯಕರ್ತೆಯರಿಗೆ ಮಾಸಿಕ ನಿಶ್ಚಿತ ಗೌರವ ಧನ 5000 ದಿಂದ 8000 ಕ್ಕೆ ಹೆಚ್ಚಳ
ಬಿಸಿ ಊಟದ ಅಡಿಗೆ ಯವರಿಗೆ ಮಾಸಿಕ ಗೌರವಧನ 3600 ರಿಂದ 6 ಸಾವಿರಕ್ಕೆ ಹೆಚ್ಚಳ
ಮೇಕೆದಾಟು ಯೋಜನೆಗೆ 9000 ಕೋಟಿ ಭರವಸೆ












Click it and Unblock the Notifications