ಮಂಗಳವಾರ ಸಂಜೆ 6 ಗಂಟೆಗೆ ವಿಶ್ವಾಸಮತಕ್ಕೆ ಮುಹೂರ್ತ ಫಿಕ್ಸ್
Recommended Video
ಬೆಂಗಳೂರು, ಜುಲೈ 22: ಗುರುವಾರ (ಜುಲೈ 18) ರಿಂದಲೂ ನಡೆಯುತ್ತಿರುವ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಇಂದೂ ಸಹ ಮುಗಿಯಲಿಲ್ಲ.
ಕಲಾಪದಲ್ಲಿ ಗದ್ದಲ, ಚರ್ಚೆ, ಸಿಟ್ಟು, ನಗು ಹಲವು ಭಾವ ಚಿತ್ರಗಳಲ್ಲಿ
ಇಂದು ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಮುಗಿಸಲೇ ಬೇಕು ಎಂದು ರಾತ್ರಿ 11:45 ನಿಮಿಷದವರೆಗೆ ಕಲಾಪ ನಡೆಸಲಾಯಿತು. ಆದರೂ ಸಹ ವಿಶ್ವಾಸಮತ ಯಾಚನೆ ಚರ್ಚೆ ಮುಗಿಯಲೇ ಇಲ್ಲ.
ಸಮಯ ಸರಿಯುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು ಕಲಾಪವನ್ನು ನಾಳೆಗೆ ಮುಂದೂಡುವಂತೆ ಗದ್ದಲ ಮಾಡಿದರು. ಕೊನೆಗೆ ರೋಸಿಹೋದ ಸ್ಪೀಕರ್ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರ ಸಲಹೆ ಕೇಳಿದರು.

ಸಿದ್ದರಾಮಯ್ಯ ಅವರು ಸಲಹೆ ನೀಡಿ, ನಾಳೆ (ಮಂಗಳವಾರ) ಜುಲೈ 23 ರ ಸಂಜೆ 4 ಗಂಟೆಗೆ ಚರ್ಚೆ ಮುಗಿಸುತ್ತೀವಿ, ಸಿಎಂ ಅವರು ಉತ್ತರ ನೀಡಲಿ ನಂತರ 6 ಗಂಟೆಗೆ ಮತಕ್ಕೆ ಹಾಕಿ ಎಂದು ಹೇಳಿದರು.
ಅದರಂತೆ ಸ್ಪೀಕರ್ ರಮೇಶ್ ಕುಮಾರ್ ಸಿದ್ದರಾಮಯ್ಯ ಅವರ ಸಲಹೆಯಂತೆ ಸಂಜೆ 6 ಗಂಟೆಗೆ ವಿಶ್ವಾಸಮತಕ್ಕೆ ಹಾಕುತ್ತೀವಿ ಎಂದು ಸ್ಪೀಕರ್ ಹೇಳಿದರು. ಇದಕ್ಕೆ ಒಪ್ಪುವುದಿಲ್ಲ ಎಂದು ಬಿಜೆಪಿ ಸದಸ್ಯರು ಹೇಳುತ್ತಿದ್ದರೂ ಸಹ, ನಾಳೆ ಬೆಳಿಗ್ಗೆ 10 ಗಂಟೆಗೆ ಕಲಾಪವನ್ನು ಮುಂದೂಡಿ ಸ್ಪೀಕರ್ ಅವರು ಹೊರಟರು.












Click it and Unblock the Notifications