KCET Result 2022: ಇಂಜಿನಿಯರಿಂಗ್‌ನಲ್ಲಿ ಅಪೂರ್ವ ತಂದೋನ್ ಮೊದಲ ರ್‍ಯಾಂಕ್

2022ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2022ರ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇಂದು ಬಿಡುಗಡೆ ಮಾಡಿದೆ. ಜೊತೆಗೆ ಟಾಪರ್ಸ್ ಪಟ್ಟಿ ಕೆಸಿಇಟಿ 2022ರ ಟಾಪರ್ಸ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ 98.61 ಪಡೆಯೋ ಮೂಲಕ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲಹಂಕ ವಿದ್ಯಾರ್ಥಿನಿ ಅಪೂರ್ವ ತಂದೋನ್ ಮೊದಲ ರ್‍ಯಾಂಕ್ ಪಡೆದಿದ್ದಾರೆ. ಮಾರತಳ್ಳಿಯ ಶ್ರೀ ಚೇತನ್ಯ ಟೆಕ್ನೋ ಸ್ಕೂಲ್ ನ ವಿದ್ಯಾರ್ಥಿ ಸಿದ್ದಾರ್ಥ್ ಸಿಂಗ್ ಸೆಕೆಂಡ್ ರ್‍ಯಾಂಕ್ ಪಡೆದರೆ, ಆತ್ಮ ಕೂರಿ ವೆಂಕತಮಾಧ ಮೂರನೇ ರ್‍ಯಾಂಕ್ ಪಡೆದಿದ್ದಾರೆ.

ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ ಎಚ್ಎಎಲ್ ಪಬ್ಲಿಕ್ ಸ್ಕೂಲ್ ನ ಅರ್ಜುನ್ ರವಿಶಂಕರ್ ಮೊದಲ ರ್‍ಯಾಂಕ್ ಪಡೆದಿದ್ದಾರೆ. ಸುಮಿತ್ ಪಾಟೀಲ್ ಎರಡನೇ ರ್‍ಯಾಂಕ್, ಸುದೀಪ್ ವೈಯಂ ಮೂರನೇ ರ್‍ಯಾಂಕ್ ಪಡೆದಿದ್ದಾರೆ.

ವೆಟರ್ನರಿ ಸೈನ್ಸ್ ವಿಭಾಗದಲ್ಲಿ ಹರಿಷಿಕೇಶನಾಗಭೂಷಣ್ ಫಸ್ಟ್ ರ್‍ಯಾಂಕ್, ಮನೀಶ್ ಎಸ್ಎ ಸೆಕೆಂಡ್ ರ್‍ಯಾಂಕ್ ಹಾಗೂ ಶುಭ ಕೌಶಿಕ 3ನೇ ರ್‍ಯಾಂಕ್ ಪಡೆದಿದ್ದಾರೆ. ಬಿ ಫಾರ್ಮಾ ವಿಭಾಗದಲ್ಲಿ ಶಶಿರ್ ಆರ್ ಕೆ ಫಸ್ಟ್ ರ್‍ಯಾಂಕ್, ಹರಿಷಿಕೇಶನಾಗಭೂಷಣ್ ಸೆಕೆಂಡ್ ರ್‍ಯಾಂಕ್, ಅಪೂರ್ವ ತಂದೊನ್ ಮೂರನೇ ರ್‍ಯಾಂಕ್ ಪಡೆದಿದ್ದಾರೆ.

Karnataka Common Entrance Test (KCET) 2022: Complete list of toppers

ಪರೀಕ್ಷೆ ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ kea.kar.nic.in ಅಥವಾ https://cetonline.karnataka.gov.in/kea/ಗೆ ಭೇಟಿ ನೀಡಿ ಫಲಿತಾಂಶವನ್ನು ಪಡೆಯಬಹುದು. ಫಲಿತಾಂಶವನ್ನು ನೋಡಲು ಅಭ್ಯರ್ಥಿಗಳು ರೋಲ್‌ ನಂಬರ್, ಜನ್ಮ ದಿನಾಂಕ, ಪಾಸ್‌ವರ್ಡ್‌ ನಮೂದಿಸಿ ಲಾಗಿನ್‌ ಆಗುವ ಮೂಲಕ ಫಲಿತಾಂಶವನ್ನು ಚೆಕ್‌ ಮಾಡಬಹುದಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಪ್ರವೇಶ ಪರೀಕ್ಷೆಯನ್ನು, ಇಂಜಿನಿಯರಿಂಗ್, ಆಯುರ್ವೇದ, ಫಾರ್ಮಸಿ, ಹೋಮಿಯೋಪತಿ, ಆರ್ಕಿಟಕ್ಚರ್‌, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಜೂನ್ 16,17,18 ರಂದು ಕೆಇಎ ಕಾಮನ್‌ ಎಂಟ್ರ್ಯಾನ್ಸ್ ಟೆಸ್ಟ್ ಅನ್ನು ನಡೆಸಿತ್ತು.

Karnataka Common Entrance Test (KCET) 2022: Complete list of toppers

ಫಲಿತಾಂಶವನ್ನು ಚೆಕ್‌ ಮಾಡಲು ಅಭ್ಯರ್ಥಿಗಳಿಗೆ ರೋಲ್‌ ನಂಬರ್ ಬಹು ಮುಖ್ಯವಾಗಿದೆ. ಒಂದು ವೇಳೆ ಅಭ್ಯರ್ಥಿಗಳು ರೋಲ್‌ ನಂಬರ್‌ ಮರೆತುಹೊಗಿದ್ದರೆ, ಅಥವಾ ಪ್ರವೇಶ ಪತ್ರವನ್ನು ಕಳೆದುಕೊಂಡಿದ್ದರೇ ಆತಂಕ ಪಡುವ ಅವಶ್ಯಕತೆ ಇಲ್ಲ. ಅಭ್ಯರ್ಥಿಗಳು ಕೆಇಎ ಎಕ್ಸಿಕ್ಯೂಟಿವ್ ಡೈರಕ್ಟರ್ ಅವರ ಸಂಪರ್ಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ಅಪ್ಲಿಕೇಶನ್ ನಂಬರ್/ ರೋಲ್‌ ನಂಬರ್ ಪಡೆಯಬಹುದಾಗಿದೆ. ಟೆಲಿಫೋನ್ : 080-23460460, ವಾಟ್ಸಾಪ್ ನಂಬರ್ : 9741388123, ಇ-ಮೇಲ್ ವಿಳಾಸ : [email protected].

ಕೆಸಿಇಟಿ 2022 ಫಲಿತಾಂಶ ಚೆಕ್ ಮಾಡುವ ವಿಧಾನ ಇಲ್ಲಿದೆ-

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ವೆಬ್‌ಸೈಟ್‌ kea.kar.nic.in, ಭೇಟಿ ನೀಡ ಅಥವಾ https://cetonline.karnataka.gov.in/kea/ ಗೆ ಭೇಟಿ ನೀಡಿ.

Karnataka Common Entrance Test (KCET) 2022: Complete list of toppers

ಪೇಜ್‌ ಓಪನ್‌ ಆದ ಬಳಿಕ "KCET 2022 Result" ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ನಿಮಗೆ ಕೆಇಎ ಹೊಸ ಪೇಜ್‌ ಓಪನ್‌ ಆಗುತ್ತದೆ.

ಓಪನ್‌ ಆದ ಪೇಜ್‌ ನಲ್ಲಿ ಅಭ್ಯರ್ಥಿಗಳು ನೋಂದಣಿ ಸಂಖ್ಯೆ, ಜನ್ಮ ದಿನಾಂಕ, ಪಾಸ್‌ವರ್ಡ್‌, ಮಾಹಿತಿ ನೀಡಿ 'Submit' ಎಂಬಲ್ಲಿ ಕ್ಲಿಕ್ ಮಾಡಿ.

Karnataka Common Entrance Test (KCET) 2022: Complete list of toppers

ನಂತರ ನಿಮ್ಮ ಫಲಿತಾಂಶ ಪರದೆಯ ಮೇಲೆ ಪ್ರದರ್ಶನವಾಗುತ್ತದೆ.

ಅದನ್ನು ಮುಂದಿನ ರೆಫ್ರನ್ಸ್‌ಗಾಗಿ ಡೌನ್‌ಲೋಡ್‌ ಮಾಡಿಕೊಂಡು ಪ್ರಿಂಟ್‌ ತೆಗೆದುಕೊಳ್ಳಿ.

Recommended Video

      Commonwealth 2022 ಮೊದಲ ದಿನ ಭಾರತದ ಪ್ರದರ್ಶನ ಹೇಗಿತ್ತು | *Sports | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+