• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗ್ರಾಮ ಪಂಚಾಯತಿ ಸದಸ್ಯರೂ ಅಲ್ಲದ ಸಿಎಂ ಪುತ್ರ ವಿಜಯೇಂದ್ರಗೆ ಸರಕಾರದಲ್ಲಿ ಏನು ಕೆಲಸ?

|

ಬೆಂಗಳೂರು, ಸೆ 16: ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಸರಕಾರದ ದೈನಂದಿನ ಆಗುಹೋಗುಗಳಲ್ಲಿ ತಲೆ ಹಾಕುತ್ತಿದ್ದಾರೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್, ಸಿಎಂ ಪುತ್ರನನ್ನು ತರಾಟೆಗೆ ತೆಗೆದುಕೊಂಡಿದೆ.

ಕೊರೊನಾ ಹಾವಳಿಯ ಈ ಸಮಯದಲ್ಲಿ ವಿಜಯೇಂದ್ರ, ವೈದ್ಯಾಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದು, ಕಾಂಗ್ರೆಸ್ ಕೆಂಗಣ್ಣಿಗೆ ಕಾರಣವಾಗಿದೆ. ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇರದ ವಿಜಯೇಂದ್ರ, ಅಧಿಕಾರಿಗಳ ಸಭೆಯನ್ನು ಹೇಗೆ ನಡೆಸಿದರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

"ವರುಣಾ ಕ್ಷೇತ್ರಕ್ಕೆ ಐದು ಬಾರಿ ಭೇಟಿ ನೀಡಿದ್ದೇನೆ ಅಂದಮೇಲೆ ನೀವೇ ಅರ್ಥ ಮಾಡಿಕೊಳ್ಳಿ''

ಕಾಂಗ್ರೆಸ್ ಮಾಡಿರುವ ಟ್ವೀಟ್ ಹೀಗಿದೆ, " @BYVijayendra ತಾವು ಮುಖ್ಯಮಂತ್ರಿ ಅಲ್ಲ, ಮಂತ್ರಿಯಲ್ಲ, ಸಂಸದರಲ್ಲ, ಶಾಸಕರಲ್ಲ, ಗ್ರಾಮಪಂಚಾಯ್ತಿ ಸದಸ್ಯ ಕೂಡ ಅಲ್ಲ, ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿರದ ತಾವು ಸರ್ಕಾರಿ ವೈದ್ಯಾಧಿಕಾರಿಗಳ ಸಭೆ ನಡೆಸಿದ್ದೇಕೆ".

"ಆ ಅಧಿಕಾರ ಕೊಟ್ಟವರಾರು? ಆಡಳಿತ ಯಂತ್ರದಲ್ಲಿ ಮೂಗು ತೂರಿಸಿದ ಈ "ದಲ್ಲಾಳಿತನ" ಪ್ರಜಾಪ್ರಭುತ್ವದ ಪವಿತ್ರತೆಗೆ ಧಕ್ಕೆ ತಂದಿದೆ"ಎಂದು ಕಾಂಗ್ರೆಸ್, ಟ್ವೀಟ್ ಮೂಲಕ ಆಕ್ರೋಶ ವ್ಯಕ್ತ ಪಡಿಸಿದೆ.

ಈ ಹಿಂದೆ ಕೂಡಾ, ಹಲವು ಸರಕಾರೀ ಮಟ್ಟದ ಸಭೆಗಳಲ್ಲಿ ಸಚಿವರುಗಳ ಜೊತೆ ವಿಜಯೇಂದ್ರ ಭಾಗವಹಿಸಿದ್ದರು. ಇದಕ್ಕೆ, ಬಿಜೆಪಿಯಲ್ಲೂ ಆಕ್ಷೇಪ ವ್ಯಕ್ತವಾಗಿತ್ತು. ಈ ವಿಚಾರ ದೆಹಲಿ ವರಿಷ್ಠರ ಬಾಗಿಲನ್ನೂ ತಟ್ಟಿತ್ತು.

   Pakistan, OIC ,Turkeyನ ತರಾಟೆಗೆ ತಗೊಂಡ India | Oneindia Kannada

   ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ವಿಚಾರವನ್ನು ಬಿ.ವೈ.ವಿಜಯೇಂದ್ರ ನಿರಾಕರಿಸುತ್ತಲೇ ಬಂದಿದ್ದಾರೆ. ಈಗ ವೈದ್ಯರ ಜೊತೆಗಿನ ಫೋಟೋ ಮಾಧ್ಯಮಗಳಲ್ಲಿ ಸುದ್ದಿಯಾದ ಬೆನ್ನಲ್ಲೇ, ಕಾಂಗ್ರೆಸ್, ಸಿಎಂ ಪುತ್ರನ ವಿರುದ್ದ ಕಿಡಿಕಾರಿದೆ.

   English summary
   CM Yediyurappa Son BY Vijayendra Meeting With Doctors INC Karnataka Tweet,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X