ಸಿಎಂ ಸಿದ್ದರಾಮಯ್ಯ ಹೋಲುವ ರೈತನ ಡ್ಯಾನ್ಸ್ ಫುಲ್ ವೈರಲ್

Posted By:
Subscribe to Oneindia Kannada
   ಸಿದ್ದರಾಮಯ್ಯರನನ್ನ ಹೋಲುವ ರೈತನ ಡಾನ್ಸ್ ವಿಡಿಯೋ ವೈರಲ್ | Oneindia Kannada

   ಚೌಕ ಚಿತ್ರದ ಬಹು ಜನಪ್ರಿಯ ಹಾಡು ಜೀವನ ಟಾನಿಕ್ ಬಾಟ್ಲಿ... ಕುಡಿಯೋ ಮುಂಚೆ ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು' ಎಂಬ ಹಾಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡ್ಯಾನ್ಸ್ ಮಾಡುತ್ತಿದ್ದಾರೆ ನೋಡಿ ಎಂಬ ಅಡಿಬರಹವುಳ್ಳ ವಿಡಿಯೋ ಫೇಸ್ ಬುಕ್ ನಲ್ಲಿ ಸಕತ್ ವೈರಲ್ ಆಗುತ್ತಿದೆ.

   ಬಿಜೆಪಿ ಬೆಂಬಲಿಗರು ಈ ವಿಡಿಯೋ ಸತ್ಯಾಸತ್ಯತೆ ಬಗ್ಗೆ ತಲೆಕೆಡಿಸಿಕೊಳ್ಳದೆ, ಹೆಚ್ಚೆಚ್ಚು ಬಾರಿ ಹಂಚಿಕೊಂಡಿದ್ದಾರೆ. ಈ ಮೂಲಕ ಈ ಹಾಡಿನಲ್ಲಿ ನರ್ತಿಸಿರುವ ರೈತನೊಬ್ಬನಿಗೆ ಅವಮಾನ ಮಾಡಿದ್ದಾರೆ ಎಂದು ಈ ವಿಡಿಯೋವನ್ನು ಲೈವ್ ಮಾಡಿದ್ದ ಅಣೆಕಟ್ಟೆ ವಿಶ್ವನಾಥ್ ಅವರು ಹೇಳಿದ್ದಾರೆ.

   ಸಣ್ಣ ಹುಡುಗನ ಸೆಲ್ಯೂಟ್‌ಗೆ ಗೌರವ ಸಲ್ಲಿಸಿದ ಪೊಲೀಸ್ ಕಮಿಷನರ್

   CM Siddaramaiah look alike Farmers Dance goes viral on Social Media

   ಈ ವಿಡಿಯೋವನ್ನು ಚಿತ್ರೀಕರಿಸಿದ್ದ ಅಣೆಕಟ್ಟೆ ವಿಶ್ವನಾಥ್ ಅವರು ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

   ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

   ಬಿಜೆಪಿ ಭಕ್ತರಿಂದ ರೈತರಿಗೆ ಅವಮಾನ. ಈ ಬಿಜೆಪಿ ಭಕ್ತರು ಹೇಳುವ ಹಸಿ ಸುಳ್ಳಿಗೆ ಇದೊಂದು ಸ್ಪಷ್ಟ ಉದಾಹರಣೆ. ನಾನು ಭಾಗವಹಿಸಿದ್ದ ಸಿರಿಧಾನ್ಯ ಕುರಿತಾದ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೋಲುವ ರೈತರೊಬ್ಬರು ನೃತ್ಯಮಾಡಿದ್ದರು. ನಾನದನ್ನ ಲೈವ್ ಮಾಡಿದ್ದೆ. ಇದನ್ನು ಕದ್ದು ಶಿರಸಿ ಅನಂತನ ಭಕ್ತರು ತಮ್ಮ ಪೇಜ್ ನಲ್ಲಿ ಸಿದ್ಧ ರಾಮಯ್ಯನವರು ನೃತ್ಯ ಮಾಡಿದ್ದಾರೆ ಎಂದು ಅಪ ಪ್ರಚಾರ ಮಾಡಿದ್ದಾರೆ. ಆ ರೈತರ ಜೀವನೋತ್ಸಾಹ ನೋಡಿ ನಾನು ಇದಕ್ಕೆ ಕುಣಿದಿದ್ದೆ. ಬಿಜೆಪಿ ಅಂದರೆ ಸುಳ್ಳು ಎಂದು ಮತ್ತೊಮ್ಮೆ ಸಾಬೀತಾಗಿದೆ.- ಎಂದು ಬರೆದುಕೊಂಡಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   CM Siddaramaiah look alike Farmers Dance goes viral on Social Media. Right wing groups are purposefully making it viral and in a way they are insulting a farmer alleged man who shoot this video.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ