Shakti Scheme: ಸರ್ಕಾರದಿಂದ ಸಾರಿಗೆ ವ್ಯವಸ್ಥೆ ಮೂರಾಬಟ್ಟೆ, ನೌಕರರಿಗೆ ಸಂಕಷ್ಟ: ಬಿಜೆಪಿ

ಬೆಂಗಳೂರು, ಸೆಪ್ಟಂಬರ್ 21: ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ ಪ್ರಯಾಣ ಒದಗಿಸುವ 'ಶಕ್ತಿ ಯೋಜನೆ' ಜಾರಿಗೆ ಬಂದು 100 ದಿನ ಪೂರೈಸಿದೆ. ಈ ಕುರಿತು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಸಾರಿಗೆ ವ್ಯವಸ್ಥೆಯನ್ನೇ ಸರ್ಕಾರ ಹಾಳು ಮಾಡಿದೆ ಎಂದು ದೂರಿದೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕೇವಲ 100 ದಿನಕ್ಕೆ ಸಾರಿಗೆ ವ್ಯವಸ್ಥೆಯನ್ನೇ ಮೂರಾಬಟ್ಟೆ ಮಾಡಿದೆ. ಈ ಹೆಗ್ಗಳಿಕೆ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಸರ್ಕಾರ ನೀತಿ ನಿಲುವುಗಳಿಂದ ಸಂಬಳವಿಲ್ಲದೆ ರಾಜ್ಯ ಸಾರಿಗೆ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

karnataka-state-transport-system

ಅಷ್ಟೇ ಅಲ್ಲದೇ ಬೀದಿಗೆ ಖಾಸಗಿ ಬಸ್‌, ಆಟೋ, ಟ್ಯಾಕ್ಸಿ ಚಾಲಕರ ಕುಟುಂಬಗಳು ಸಹ ಆರ್ಥಿಕ ತೊಂದರೆ ಅನುಭವಿಸಿವೆ. ಸಾಕಷ್ಟು ತೊಂದರೆ ಅನುಭವಿಸುತ್ತಿವೆ ಎಂದು ಶಕ್ತಿ ಯೋಜನೆ ಅನುಷ್ಠಾನ ಕುರಿತು ಬಿಜೆಪಿ ಟೀಕೆ ಮುಂದುವರಿಸಿದೆ.

4 ಸಾರಿಗೆ ನಿಗಮಗಳು ನಿಶ್ಯಕ್ತವಾಗಿವೆ

ಶಕ್ತಿ ಯೋಜನೆಯಿಂದ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಸರ್ಕಾರಿ ಬಸ್‌ಗಳು ಸಂಚರಿಸುತ್ತಿಲ್ಲ. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ನಿತ್ಯವೂ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಇನ್ನೂ ಅನುದಾನವಿಲ್ಲದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಮತ್ತು ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಗಳು ಅನುದಾನವಿಲ್ಲದೇ ನಿಶ್ಯಕ್ತವಾಗಿವೆ ಎಂದು ಬಿಜೆಪಿ ಆರೋಪಿಸಿದೆ.

ನಾಲ್ಕು ನಿಗಮಗಳ ಪೈಕಿ KSRTC - 541 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. BMTC - 264 ಕೋಟಿ ರೂಪಾಯಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) 368 ಕೋಟಿ ರೂಪಾಯಿ ನಷ್ಟ ಎದುರಿಸಿದೆ. ಅದೇ ರೀತಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಒಟ್ಟು 282 ಕೋಟಿ ರೂಪಾಯಿ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ.

ಈ ಪೈಕಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಹೆಚ್ಚಿನ ಸಂಕಷ್ಟ ಎದುರಿಸುತ್ತಿದೆ. ಈ ಎಲ್ಲ ಸಾರಿಗೆ ನಿಗಮಗಳ ಸಮಸ್ಯೆಗೆ ಕಾಂಗ್ರೆಸ್‌ ಬಂದಿದೆ ದುಸ್ಥಿತಿ ತಂದಿದೆ ಎಂದು ಅವರು ಆರೋಪಿಸಿದೆ.

karnataka-state-transport-system

ಶಕ್ತಿ ಯೋಜನೆ: 100ದಿನ 62ಕೋಟಿ ಮಹಿಳೆಯರ ಪ್ರಯಾಣ

ಇನ್ನೂ ಶಕ್ತಿ ಯೋಜನೆ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಯೋಜನೆಯ ನೂರು ದಿನಗಳನ್ನು ಸ್ಮರಿಸಿದೆ.

ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ನಮ್ಮ ಸರ್ಕಾರದ ಶಕ್ತಿ ಯೋಜನೆಗೆ 100 ದಿನ ಪೂರೈಸಿದೆ. ಒಟ್ಟು ನೂರು ದಿನಗಳಲ್ಲಿ 62 ಕೋಟಿಗೂ ಹೆಚ್ಚು ಬಾರಿ ಮಹಿಳೆಯರು ಉಚಿತವಾಗಿ ಸರ್ಕಾರಿ ಸಾರಿಗೆಯಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಸಾರಿಗೆ ನಿಗಮಗಳಿಗೆ ಹಾಗೂ ಮಹಿಳೆಯರಿಗೆ "ಶಕ್ತಿ" ನೀಡುತ್ತಿದೆ ಈ ಮಹತ್ವದ ಯೋಜನೆ ಇದಾಗಿದೆ. ಮಹಿಳೆಯರಿಗೆ ಸ್ವಾವಲಂಬನೆಯ ದಾರಿ ತೋರುತ್ತಿರುವ ಶಕ್ತಿ ಯೋಜನೆ ಮಹತ್ತರವಾದ ಸಾಮಾಜಿಕ ಬದಲಾವಣೆಗೆ ಕಾರಣವಾಗಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+