ಕೊಡಗು ಪ್ರವಾಹದ ವಿಷಮ ವೇಳೆಯಲ್ಲಿ ಕುಮಾರಸ್ವಾಮಿ ಟೆಂಪಲ್ ರನ್
ಬೆಂಗಳೂರು, ಆಗಸ್ಟ್ 23: ಕೊಡಗಿನ ಜನ ಪ್ರವಾಹದಿಂದ ತತ್ತರಿಸಿ ತಮಗೊಂದು ಸೂರು ಸಿಕ್ಕರೆ ಸಾಕೆಂದು ಆಕಾಶ ನೋಡುತ್ತಿರುವ ಈ ಹೊತ್ತಿನಲ್ಲಿ ಸೂರಿ ಒದಗಿಸಬೇಕಾದ ರಾಜ್ಯದ ಮುಖ್ಯಮಂತ್ರಿ ದೇವಾಲಯಗಳ ಸುತ್ತಾಟ ನಡೆಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಇಂದು ರಾಜಸ್ಥಾನದ ಅಜ್ಮೇರ್‌ನ ಗರೀಬ್ ನವಾಬ್ ದರ್ಗಾಕ್ಕೆ ತೆರಳಿದ್ದಾರೆ. ದರ್ಗಾ ಭೇಟಿ ನಂತರ ಪುಷ್ಕರ್ ಬ್ರಹ್ಮಾ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.
ಕೊಡಗು ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಸಮಯದಲ್ಲಿ ಮುಖ್ಯಮಂತ್ರಿ ಅವರು ದೇವಾಲಯಗಳನ್ನು ಸುತ್ತಿರುವಕ್ಕೆ ಭೇಟಿ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸೇರಿದಂತೆ ಸಾರ್ವಜನಿಕರಿಂದಲೂ ವಿರೋಧ ವ್ಯಕ್ತವಾಗಿದೆ.

ಜನರ ಕಣ್ಣೀರು ಒರೆಸಬೇಕಿರುವ ಮುಖ್ಯಮಂತ್ರಿಗಳೇ ಹೀಗೆ ದೇವಸ್ಥಾನ ಸುತ್ತಲು ಹೊರೆಟರೆ ಹೇಗೆ ಎಂಬ ಮಾತುಗಳು ಕೇಳಿಬರುತ್ತಿದೆ. ಮುಖ್ಯಮಂತ್ರಿ ಅವರು ಇಂದು ಸಂಜೆ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ.












Click it and Unblock the Notifications