ಸ್ವಾತಂತ್ರ್ಯೋತ್ಸವದಂದು ಕುಮಾರಸ್ವಾಮಿ ಹೇಳಿದ ಚಂದದ ಕತೆ

Recommended Video

      ಒಗ್ಗಟ್ಟಿನ ಬಗ್ಗೆ ಕಥೆ ಹೇಳಿದ ಕುಮಾರಸ್ವಾಮಿ..! | Oneindia Kannada

      ಬೆಂಗಳೂರು, ಆಗಸ್ಟ್ 15: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮಾಣಿಕ್ ಷಾ ಪೆರೆಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಯೋಜನೆಗಳ ಬಗ್ಗೆ ಭಾಷಣ ಮಾಡಿದರು.

      ರಾಜ್ಯದ ಎಲ್ಲ ಕ್ಷೇತ್ರಗಳ, ಎಲ್ಲ ಜಿಲ್ಲೆಗಳ, ಎಲ್ಲ ವರ್ಗದ ಜನರ, ಮಹಿಳೆಯರ, ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು ತಮ್ಮ ಭಾಷಣದ ಕೊನೆಯಲ್ಲಿ ಸಣ್ಣ ಕತೆಯೊಂದನ್ನು ಹೇಳಿದರು.

      ಆಫ್ರಿಕಾದ ಆ ಕತೆಯಲ್ಲಿ ಉತ್ತಮ ಮೌಲ್ಯಗಳ ಜೊತೆಗೆ ಕುಮಾರಸ್ವಾಮಿ ಅವರು, ರಾಜ್ಯದ ಜನರಿಗೆ ನೀಡಿದ ಸಂದೇಶ ಜೊತೆಗೆ ತಮ್ಮ ಮಿತ್ರ ಪಕ್ಷಕ್ಕೆ ನೀಡಿದ ಸಂದೇಶವೂ ಅಡಕವಾಗಿತ್ತು. ಕುಮಾರಸ್ವಾಮಿ ಹೇಳಿದ ಕತೆ ಹೀಗಿದೆ.

      CM Kumaraswamy told a beautiful story in his independence day speech

      ಆಫ್ರಿಕಾದ ಒಂದು ಕಡೆ ಪಾದ್ರಿಯೊಬ್ಬ, ಕೆಲವು ಮಕ್ಕಳಿಗೆ ಒಂದು ಆಟ ಆಡಿಸುತ್ತಾನೆ. ಮಕ್ಕಳನ್ನೆಲ್ಲಾ ಸಾಲಾಗಿ ನಿಲ್ಲಿಸಿ ಕೆಲವು ದೂರದಲ್ಲಿ ಸಿಹಿ ತಿಂಡಿ ತುಂಬಿದ ಬುಟ್ಟಿ ಇಡುತ್ತಾನೆ. ವೇಗವಾಗಿ ಓಡಿ ಬುಟ್ಟಿಯನ್ನು ತಲುಪಿದ ಮೊದಲಿಗನಿಗೆ ಬುಟ್ಟಿಯಲ್ಲಿದ್ದ ಸಿಹಿತಿಂಡಿ ಸೇರುತ್ತದೆ.

      ಮಕ್ಕಳು ತಯಾರಾಗುತ್ತಾರೆ, ಪಾದ್ರಿ ಸೀಟಿ ಊದುತ್ತಾನೆ, ಮಕ್ಕಳು ಓಡಲು ಪ್ರಾರಂಭಿಸುತ್ತಾರೆ ಆದರೆ ಒಬ್ಬೊಬ್ಬರಾಗಿ ಅಲ್ಲ, ಪರಸ್ಪರರ ಕೈ-ಕೈ ಹಿಡಿದು ಜಂಟಿಯಾಗಿ ಓಟ ಪ್ರಾರಂಭಸುತ್ತಾರೆ. ಎಲ್ಲ ಮಕ್ಕಳು ಏಕಕಾಲಕ್ಕೆ ಬುಟ್ಟಿ ತಲುಪುತ್ತಾರೆ. ಬುಟ್ಟಿಯಲ್ಲಿನ ಸಿಹಿಯನ್ನು ಎಲ್ಲರೂ ಒಟ್ಟಾಗಿ ಹಂಚಿ ತಿನ್ನುತ್ತಾರೆ.

      ಪಾದ್ರಿಗೆ ಆಶ್ಚರ್ಯವಾಗುತ್ತದೆ. ಆತ ಮಕ್ಕಳನ್ನು ಕಾರಣ ಕೇಳುತ್ತಾನೆ. ಮಕ್ಕಳು ಹೇಳುತ್ತಾರೆ 'ಉಬುಂಟು' ಎಂದು. ಹೀಗೆಂದರೆ ಒಗ್ಗಟ್ಟು ಎಂದರ್ಥ. 'ನೀವು ಇಲ್ಲದಿದ್ದರೆ ನಾನು ಪದಕ್ಕೆ ಅರ್ಥವೇನು'. ಸಮೂಹ ಇದ್ದರಷ್ಟೆ ವ್ಯಕ್ತಿಗೆ ಬೆಲೆ. ಒಟ್ಟಾಗಿ ಹೋದ್ದರಿಂದ ಎಲ್ಲರಿಗೂ ಸಿಹಿ ಸಿಕ್ಕಿತು. ಒಬ್ಬರ ಮೇಲೊಬ್ಬರು ಸ್ಪರ್ಧಿಸಿದ್ದರೆ ಸಿಹಿ ಯಾರದ್ದೋ ಪಾಲಾಗುತ್ತಿತ್ತು.

      ಈ ಕತೆ ಹೇಳಿದ ಕುಮಾರಸ್ವಾಮಿ, ಸರ್ಕಾರ ಮಾತ್ರದಿಂದಲೇ ಅಭಿವೃದ್ಧಿ ಸಾಧ್ಯವಾಗದು ಅಭಿವೃದ್ಧಿ ಸಾಧ್ಯವಾಗಲು ಜನ ಸರ್ಕಾರ ಕೈ ಹಿಡಿಯಬೇಕೆಂಬ ಸಂದೇಶ ನೀಡಿದರು. ಅಷ್ಟೆ ಅಲ್ಲ ತಮ್ಮ ಮಿತ್ರ ಪಕ್ಷಕ್ಕೂ ಸಂದೇಶ ರವಾನಿಸಿದ ಅವರು, ಅಭಿವೃದ್ಧಿಗೆ ಪರಸ್ಪರರು ಕೈ-ಕೈ ಹಿಡಿದರೆ ಮಾತ್ರವೇ ಸಾಧ್ಯ ಎಂಬುದನ್ನೂ ಸೂಚ್ಯವಾಗಿ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+