ಕರ್ನಾಟಕದ 21 ಜಿಲ್ಲೆಗಳಲ್ಲಿ ಮಳೆ ಕೊರತೆ, ಬರಗಾಲ: ಈ ಬಗ್ಗೆ ಕಲಾಪದಲ್ಲಿ ಚರ್ಚೆಯೇ ಇಲ್ಲ: ವಿಜಯೇಂದ್ರ
ಚಿತ್ರದುರ್ಗ, ಜುಲೈ 16: ಮುಂಗಾರು ವಿಳಂಬ, ಖಾಲಿ ಇರುವ ಜಲಾಶಯಗಳು, ಬರಗಾಲದ ಕಾರಣಗಳಿಂದ ಉತ್ತರ ಕರ್ನಾಟಕ ರೈತರ ತತ್ತರಿಸಿದ್ದಾರೆ. ಮಲೆನಾಡಿಗೂ ಬರದ ಛಾಯೆ ಆವರಿಸಿತ್ತು, ಇತ್ತೀಚೆಗೆ ಆಡಳಿತಕ್ಕೆ ಬಂದ ಕಾಂಗ್ರೆಸ್ ಈ ಬಗ್ಗೆ ಚರ್ಚಿಸದೇ ಕೆಲಸಕ್ಕೆ ಬಾರದ ವಿಷಯಗಳನ್ನು ಚರ್ಚಿಸುತ್ತಿದೆ ಎಂದು ಶಾಸಕ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತರ ಕರ್ನಾಟಕ, ಮಲೆನಾಡು ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜಲಾಶಯಗಳು ಖಾಲಿ ಯಾಗಿದ್ದು, ಕರ್ನಾಟಕದ ಸುಮಾರು 21 ಜಿಲ್ಲೆಗಳಲ್ಲಿ ಬರಗಾಲದ ಪರಿಸ್ಥಿತಿ ಇದೆ. ರೈತರನ್ನು ಕಾಂಗ್ರೆಸ್ ಮರೆತಿದೆ ಎಂದು ಅವರು ವಿವರಿಸಿದರು.

ಸದಾ ಐದು ಗ್ಯಾರಂಟಿಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ರಾಜ್ಯದ ಕೃಷಿ ಅನುದಾನದಲ್ಲಿ 5,500 ಕೋಟಿ ರೂಪಾಯಿ ಕಡಿತ ಮಾಡಿದ್ದಾರೆ. ಅಧಿಕಾರಕ್ಕೆ ಬಂದಾಗಿನಿಂದ ಅಧಿವೇಶನವರೆಗೂ ಗ್ಯಾರಂಟಿ ಕಾರ್ಡ್ ಬಗ್ಗೆಯೇ ಚರ್ಚೆ ಆಗುತ್ತಿದೆ. ಇದು ರೈತಪರ ಸರ್ಕಾರ ಎಂದು ಹೇಳಲು ಸಾಧ್ಯವಿಲ್ಲ. ಬಡ ಮತ್ತು ರೈತವಿರೋಧಿ ಸರ್ಕಾರವಾಗಿದೆ ಎಂದು ಅವರು ಟೀಕಿಸಿದೆ.
ತೊಗರಿ ಬೆಳೆದ ರೈತರದ್ದ ಹೇಳ ತೀರದ ಸಂಕಷ್ಟ
ಮಳೆ ವಿಳಂಬದಿಂದಾಗಿ ರಾಜ್ಯದ 21 ಜಿಲ್ಲೆಗಳು ಮಳೆ ಕೊರತೆ ಎದುರಿಸಿವೆ. ಇತ್ತ ರೈತರು ಕಂಗಾಲಾಗಿದ್ದಾರೆ. ಉತ್ತರ ಕರ್ನಾಟಕ ಮಾತ್ರವಲ್ಲದೇ ಮಲೆನಾಡಿನಲ್ಲೂ ನೀರಿಗೆ ಹಾಹಾಕಾರ ಎದುರಾಗಿದೆ. ಕಲಬುರಗಿಯಲ್ಲಿ ತೊಗರಿ, ಹೆಸರು ಬೆಳೆದ ರೈತರು ಕಂಗಾಲಾಗಿದ್ದಾರೆ. ಒಂದು ಕಡೆ ಬೆಲೆ ಏರಿಕೆ, ಇನ್ನೊಂದೆಡೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಈ ಬಗ್ಗೆ ಜಂಟಿ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಯೆ ಆಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು.

ಮೂರು-ನಾಲ್ಕು ದಶಕಗಳಿಂದಲು ರಾಷ್ಟ್ರೋತ್ಥಾನ ಪರಿಷತ್ ಅಡಿಯಲ್ಲಿ ಜನಸೇವಾ ವಿದ್ಯಾ ಕೇಂದ್ರವು ಬಡವರಿಗೆ ಶಿಕ್ಷಣ ಒದಗಿಸುತ್ತಿದೆ. ಇದರಿಂದ ಸಾವಿರಾರು ಮಕ್ಕಳಿಗೆ ಅನುಕೂಲವಾಗಿದೆ. ಶಿಕ್ಷಣದಲ್ಲಿ ವ್ಯಾಪಾರೀಕರಣದ ಚರ್ಚೆಯಾಗುತ್ತಿದೆ. ಜನ ಸೇವಾ ಕೇಂದ್ರದಲ್ಲಿ ಶಿಕ್ಷಣ ಪಡೆದ ಸಾವಿರಾರು ಬಡಮಕ್ಕಳು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಹೊಸ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಟ್ಟ 35 ಬಗ್ಗೆ ಭೂಮಿ ಹಿಂಪಡೆಯುವ ನಿರ್ಧಾರ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ ರಂಗದಲ್ಲೂ ಸರ್ಕಾರದ ವಕ್ರದೃಷ್ಟಿ
ಗುಣಮಟ್ಟದ ಶಿಕ್ಷಣವನ್ನು ಕೊಡುವಂತಹ ಶಿಕ್ಷಣ ಕೇಂದ್ರಕ್ಕೆ ನೀಡಿದ್ದ ಭೂಮಿಯನ್ನು ಹಿಂಪಡೆಯುವ ನಿರ್ಧಾರ ಕೈಬಿಡಬೇಕು. ಕಳೆದ 30 ವರ್ಷಗಳಲ್ಲಿ ಭೂಮಿ ಹಂಚಿಕೆಯಾದ ಬಗ್ಗೆ, ಯಾರುಯಾರಿಗೆ ಭೂಮಿ ನೀಡಲಾಗಿದೆ ಎಂಬುದರ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕು. ಇದೆಲ್ಲ ನೋಡಿದರೆ ಶಿಕ್ಷಣದ ಕ್ಷೇತ್ರದ ಮೇಲೂ ಈ ಸರ್ಕಾರದ ವಕ್ರ ದೃಷ್ಟಿ ಬೀರಿದೆ. ಅದಲ್ಲದೆ ಭೂಮಿಯನ್ನು ಪಡೆದ ಶಿಕ್ಷಣ ಸಂಸ್ಥೆಗಳು ಯಾವ ರೀತಿ ಉಪಯೋಗಿಸುತ್ತಿದ್ದಾರೆ ಚರ್ಚೆಯಾಗಲಿ ಎಂದು ಅವರು ವಾಗ್ದಾಳಿ ನಡೆಸಿದರು.












Click it and Unblock the Notifications