ಚಿತ್ರದುರ್ಗ: ಕಾಗೆಗಳ ಸಾಮೂಹಿಕ ಸಾವು, ಅಂತ್ಯಸಂಸ್ಕಾರ

ದೇವಸ್ಥಾನದ ಅರ್ಚಕರು ಬೆಳಗ್ಗೆ ಪೂಜಾ ಕಾರ್ಯದಲ್ಲಿ ತೊಡಗಿದ್ದರು. ಆ ವೇಳೆ ಕಾಗೆಗಳು ಒಟ್ಟೊಟ್ಟಿಗೆ ಕಿರುಚಿಕೊಳ್ಳಲಾರಂಭಿಸಿದವು. ಸುಮಾರು 9.30ರಲ್ಲಿ ಕಾಗೆಗಳು ಒಂದೊಂದಾಗಿ ಮರದ ಕೊಂಬೆಗಳಿಂದ ನೆಲಕ್ಕೆ ದೊಪ್ಪನೆ ಉದುರತೊಡಗಿದವು.
ತಕ್ಷಣವೇ ಅರ್ಚಕರು ಮತ್ತು ದೇವಸ್ಥಾನದ ಬಳಿಯಿದ್ದ ಆಟೋ ಚಾಲಕರು ಅವುಗಳ ಉಪಚಾರ ಮಾಡಿದರೂ ಪ್ರಯೋಜನವಾಗಲಿಲ್ಲ. ಬಳಿಕ ಪಶುವೈದ್ಯರು ಸ್ಥಳಕ್ಕೆ ಬಂದರಾದರೂ ಆ ವೇಳೆಗೆ ಅವುಗಳ ಅಂತ್ಯಸಂಸ್ಕಾರ ನಡೆದುಹೋಗಿತ್ತು.
ಮನುಷ್ಯ ಸತ್ತಾಗ ಮುಕ್ತಿಗಾಗಿ ಕಾಗೆಗೆ ಪಿಂಡ ಇಡಲಾಗುತ್ತದೆ. ಅದೇ ಕಾಗೆ ಸತ್ತರೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೇವಸ್ಥಾನದ ಅರ್ಚಕರು ಮೃತಪಟ್ಟ ಕಾಗೆಗಳಿಗೆ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಿದರು.
ಕಾಗೆಗಳನ್ನು ಕಪ್ಪು ಬಟ್ಟೆ ಹಾಸಿದ ಚಟ್ಟದ ಮೇಲೆ ಇಟ್ಟು ಕೊಂಡೊಯ್ಯಲಾಯಿತು. ದೇವಸ್ಥಾನದ ಆವರಣದಲ್ಲೇ ಇರುವ ನವಗ್ರಹ ಕಟ್ಟೆ ಬಳಿ ಮಣ್ಣು ಮಾಡಲಾಯಿತು.












Click it and Unblock the Notifications