SWR: ಹುಬ್ಬಳ್ಳಿ-ಚಿಕ್ಕಜಾಜೂರು, ಬೆಂಗಳೂರು-ರಿಷಿಕೇಶ-ನರಸಾಪುರ ರೈಲು ಮಾರ್ಗದ ಪ್ರಯಾಣಿಕರಿಗೆ ಸಿಹಿ ಸುದ್ದಿ
Karnataka Rail: ಕರ್ನಾಟಕ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕದ ರೈಲುಗಳು ನಿರ್ದಿಷ್ಟ ಮಾರ್ಗದಲ್ಲಿನ ಸಂಚಾರ ರದ್ದನ್ನು ಮುಂದುವರಿಸಲಾಗುತ್ತದೆ. ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳ ಸಮಯ ಬದಲಾಯಿಸಲಾಗಿದೆ. ಇದರೊಂದಿಗೆ ಯಶವಂತಪುರ- ರಿಷಿಕೇಶ್ ರೈಲಿನ ಸೇವೆಯನ್ನು ಮುಂದಿನ ಆದೇಶವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೌದು, ಕಡಿಮೆ ಪ್ರಯಾಣಿಕರ ಸಂಖ್ಯೆಯಿಂದಾಗಿ, ಎಸ್‌ಎಸ್‌ಎಸ್ ಹುಬ್ಬಳ್ಳಿ -ಚಿತ್ರದುರ್ಗ - ಎಸ್‌ಎಸ್‌ಎಸ್ ಹುಬ್ಬಳ್ಳಿ ( 17347/17348) ದೈನಂದಿನ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲುಗಳ ಚಿಕ್ಕಜಾಜೂರು ಮತ್ತು ಚಿತ್ರದುರ್ಗ ನಡುವಿನ ಭಾಗಶಃ ರದ್ದತಿಯನ್ನು ವಿಸ್ತರಿಸಲಾಗಿದೆ.

ಈ ಮಾರ್ಗದಲ್ಲಿ ಇದೇ ರೈಲುಗಳ ರದ್ದತಿ ಜೂನ್ 30ರವರೆಗೆ ಇತ್ತು. ಅದನ್ನು ಇದೀಗ ಜುಲೈ 2 ರಿಂದ ಡಿಸೆಂಬರ್ 31, 2025 ರವರೆಗೆ ಜಾರಿಯಲ್ಲಿರುವಂತೆ ವಿಸ್ತರಣೆ ಮಾಡಿ ಆದೇಶಿಸಲಾಗಿದೆ. ಆದೇಶದಂತೆ ರೈಲು ಸಂಖ್ಯೆ 17347 ಎಸ್‌ಎಸ್‌ಎಸ್ ಹುಬ್ಬಳ್ಳಿ - ಚಿತ್ರದುರ್ಗ ದೈನಂದಿನ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು ಚಿತ್ರದುರ್ಗದ ಬದಲು ಚಿಕ್ಕಜಾಜೂರಿನಲ್ಲಿ ತನ್ನ ಸೇವೆಯನು ಕೊನೆಗೊಳಿಸಲಿದೆ. ಅದೇ ರೀತಿ, ಚಿತ್ರದುರ್ಗ ಎಸ್‌ಎಸ್‌ಎಸ್ ಹುಬ್ಬಳ್ಳಿ ದೈನಂದಿನ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17348) ಈಗ ಚಿತ್ರದುರ್ಗದ ಬದಲು ಚಿಕ್ಕಜಾಜೂರಿನಿಂದ ಹೊರಡಲಿದೆ. ಚಿತ್ರದುರ್ಗ ಮತ್ತು ಚಿಕ್ಕಜಾಜೂರು ನಡುವಿನ ರೈಲು ಸೇವೆಗಳು ಭಾಗಶಃ ರದ್ದಾಗಿವೆ.
ನರಸಾಪುರ-SMVT ಬೆಂಗಳೂರು ರೈಲು ಸಮಯ ಬದಲು
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ದಕ್ಷಿಣ ಮಧ್ಯ ರೈಲ್ವೆಯ ನರಸಾಪುರ - SMVT ಬೆಂಗಳೂರು-ನರಸಾಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (07153) ವಿಜಯವಾಡ ಮತ್ತು ಗುಡೂರು ನಿಲ್ದಾಣಗಳಲ್ಲಿ ಪರಿಷ್ಕೃತ ಸಮಯದೊಂದಿಗೆ ಸಂಚಾರ ಮುಂದುವರಿಸಲಿದೆ. ಈ ಮಾರ್ಗದ ರೈಲುಗಳು ಅಸ್ತಿತ್ವದಲ್ಲಿರುವ ನಿಲುಗಡೆ ನೀಡಲಲಿವೆ.
ರೈಲು ಸಂಖ್ಯೆ 07153 ನರಸಾಪುರ SMVT ಬೆಂಗಳೂರು ವಿಶೇಷ ರೈಲು ಜುಲೈ 4 ರಿಂದ ಸೆಪ್ಟೆಂಬರ್ 26, 2025 ರವರೆಗೆ ಪ್ರತಿ ಶುಕ್ರವಾರವೂ ಕಾರ್ಯನಿರ್ವಣೆ ಮಾಡಲಿವೆ. ಅದೇ ರೀತಿ SMVT ಬೆಂಗಳೂರು-ನರಸಾಪುರ ವಿಶೇಷ ರೈಲು (ಸಂಖ್ಯೆ 07154) ಜುಲೈ 5 ರಿಂದ ಸೆಪ್ಟೆಂಬರ್ 27 ರವರೆಗೆ ಪ್ರತಿ ಶನಿವಾರವೂ ಕಾರ್ಯ ನಿರ್ವಹಿಸುತ್ತದೆ. ಈ ವಿಸ್ತೃತ ಅವಧಿಯಲ್ಲಿ ಪ್ರತಿ ದಿಕ್ಕಿನಲ್ಲಿ ಒಟ್ಟು 13 ಟ್ರಿಪ್‌ಗಳನ್ನು ನಿರ್ವಹಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ರೈಲು 23 ಐಸಿಎಫ್ ಕೋಚ್ ಹೊಂದಿವೆ. ಇದರಲ್ಲಿ 01 ಎಸಿ ಟು ಟೈರ್, 02 ಎಸಿ ತ್ರೀ ಟೈರ್, 14 ಸ್ಲೀಪರ್ ಕ್ಲಾಸ್, 04 ಜನರಲ್ ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಮತ್ತು 02 ಎಸ್‌ಎಲ್‌ಆರ್ ಕೋಚ್‌ಗಳು ಇರಲಿವೆ.
ಈ ಸಂಖ್ಯೆ 07153 ರೈಲು ಸಮಯ ಬದಲಾಗಿದ್ದು, ವಿಜಯವಾಡದಲ್ಲಿ ಸದ್ಯ 19:10 ಗಂಟೆಗೆ ಆಗಮಿಸಿ 19:20 ಗಂಟೆಗೆ ಹೊರಡುತ್ತದೆ. ಇಂದಿನಿಂದ ಈ ರೈಲು ಹಳೆಯ ಸಮಯಕ್ಕೆ ಬದಲಾಗಿ 19:15 ಗಂಟೆಗೆ ವಿಜಯವಾಡ ನಿಲ್ದಾಣಕ್ಕೆ ಆಗಮಿಸಿ 19:25 ಗಂಟೆಗೆ ಹೊರಡುತ್ತದೆ. ಗುಡೂರಿನಲ್ಲಿ ಸಹ ಪರಿಷ್ಕೃತ ಸಮಯ 01:23ಕ್ಕೆ ಆಗಮಿಸಿ, 01:25 ಗಂಟೆಗೆ ನಿರ್ಗಮಿಸುತ್ತದೆ. ಇತರ ನಿಲ್ದಾಣಗಳಲ್ಲಿ ಯಾವುದೇ ಬದಲಾಣೆ ಇಲ್ಲ.
ಯಶವಂತಪುರ -ಋಷಿಕೇಶ ರೈಲು ಅಪ್ಡೇಟ್ಸ್
ನೈಋತ್ಯ ರೈಲ್ವೆಯು ಯಶವಂತಪುರ - ಋಷಿಕೇಶ - ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲಿನ (06597/06598) ಆವರ್ತಕ ಅವಧಿ ವಿಸ್ತರಣೆ ಮಾಡಲಾಗಿದೆ. ಜುಲೈ 03ರವರೆಗೆ ಮಾತ್ರವೇ ಸಂಚರಿಸಬೇಕಿದ್ದ ಈ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06597) ಜುಲೈ 10 ರಿಂದ ಆಗಸ್ಟ್ 28ರವರೆಗೆ ವಿಸ್ತರಣೆ ಮಾಡಲಾಗಿದೆ. ಜುಲೈ 05ರವರೆಗೆ ಸಂಚರಿಸಬೇಕಿದ್ದ ರೈಲು (ಸಂಖ್ಯೆ 06598) ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಇದೀಗ ಆಗಸ್ಟ್ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಎರಡು ರೈಲುಗಳು ಯಶವಂತಪುರ-ರಿಷಿಕೇಶ್‌ಗೆ ಪ್ರತಿ ದಿಕ್ಕಿನಲ್ಲೂ 8 ಟ್ರಿಪ್ ಸಂಚಾರ ಮಾಡಲಿದೆ. ಈ ಹಿಂದೆ ತಿಳಿಸಿದ ದಿನಗಳಲ್ಲಿಯೇ ಕಾರ್ಯಾಚರಣೆ ಮಾಡಲಿವೆ.












Click it and Unblock the Notifications