• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ದಿನಾಚರಣೆ : ನೆಹರೂರನ್ನು ನೆನಪಿಸಿಕೊಂಡ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ನವೆಂಬರ್ 14 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಶುಭಾಶಯ ಕೋರಿದ್ದಾರೆ. ದೇಶದ ಮೊದಲ ಪ್ರಧಾನಿ ಜವಹಾರಲಾಲ್ ನೆಹರೂ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರು ಬುಧವಾರ ಟ್ವಟರ್‌ನಲ್ಲಿ ಸಾಲು-ಸಾಲು ಸಂದೇಶಗಳನ್ನು ಹಾಕಿದ್ದಾರೆ. ನೆಹರೂ ಅವರು ದೂರದೃಷ್ಟಿಯಿಂದ ಜಾರಿಗೆ ತಂದ ಯೋಜನೆಗಳು ದೇಶದ ಅಭಿವೃದ್ಧಿಗೆ ಹೇಗೆ ಸಹಾಯಕವಾದವು ಎಂದು ತಮ್ಮ ಟ್ವಟರ್‌ನಲ್ಲಿ ಹೇಳಿದ್ದಾರೆ.

ಮಕ್ಕಳ ದಿನಾಚರಣೆಯಂದೇ ಬಸ್ರಿಕಟ್ಟೆ ಶಾಲೆಗೆ ಬಂದ ಅಪರೂಪದ ಅತಿಥಿಮಕ್ಕಳ ದಿನಾಚರಣೆಯಂದೇ ಬಸ್ರಿಕಟ್ಟೆ ಶಾಲೆಗೆ ಬಂದ ಅಪರೂಪದ ಅತಿಥಿ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಶಾಲಾ ಮಕ್ಕಳಿಗೆ ಸಹಾಯಕವಾಗಲು ಜಾರಿಗೆ ತಂದ ಯೋಜನೆಗಳನ್ನು ಅವರು ತಮ್ಮ ಟ್ವೀಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಮಕ್ಕಳಿಗೆಲ್ಲಾ ಶುಭಾಶಯಗಳನ್ನು ಕೋರಿದ್ದಾರೆ. ಅವರು ಸಮಾಜದ ಭವಿಷ್ಯ ಎಂದು ತಿಳಿಸಿದ್ದಾರೆ.

ಮಕ್ಕಳ ದಿನಾಚರಣೆಯಂದು ಕೈದಿಗಳಿಗೆ ವಿಶೇಷ ಉಡುಗೊರೆ ಕೊಟ್ಟ ಜೈಲು ಸಿಬ್ಬಂದಿಮಕ್ಕಳ ದಿನಾಚರಣೆಯಂದು ಕೈದಿಗಳಿಗೆ ವಿಶೇಷ ಉಡುಗೊರೆ ಕೊಟ್ಟ ಜೈಲು ಸಿಬ್ಬಂದಿ

1947ಕ್ಕಿಂತ ಮೊದಲು ಸ್ವಾತಂತ್ರ ಸಿಗದಿರಲು ಒಡೆದು ಆಳುವ ನೀತಿಯೇ ಕಾರಣವಾಗಿತ್ತು. ದೇಶ ಮತ್ತೊಮ್ಮೆ ಒಡೆಯಬಾರದು ಎಂಬುದು ನೆಹರೂ ಅವರ ಆಶಯವಾಗಿತ್ತು. ಆದ್ದರಿಂದ, ಜಾತ್ಯಾತೀತ ತತ್ವವನ್ನು ಅವರು ಪ್ರತಿಪಾದಿಸಿದರು ಎಂದು ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ವಿಶ್ವ ಮಕ್ಕಳ ದಿನದಂದು ಪಾಲಕರಿಗೆ ಒಂದು ಕಿವಿಮಾತು...ವಿಶ್ವ ಮಕ್ಕಳ ದಿನದಂದು ಪಾಲಕರಿಗೆ ಒಂದು ಕಿವಿಮಾತು...

ಸರ್ಕಾರಿ ಉದ್ಯಮ ಬೆಳೆಯಬೇಕು

ಸರ್ಕಾರಿ ಸ್ವಾಮ್ಯದ ಉದ್ಯಮಗಳು ಬೆಳೆಯಬೇಕು ಎಂದು ನೆಹರು ಬಯಸಿದ್ದರು.

ಸಾಮಾಜಿಕ ಬದಲಾವಣೆ

ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆ ಜೊತೆಯಲ್ಲಿಯೇ ಸಾಗಬೇಕು ಎಂದು ನೆಹರು ಬಯಸಿದ್ದರು.

ಸವಾಲಿನ ಸಮಯಗಳು

ದೇಶ ವಿಭಜನೆ, ಗಾಂಧಿ ಹತ್ಯೆಯ ಸಂದರ್ಭಗಳು ಭಾರತದ ಜಾತ್ಯಾತೀತತೆ ಮತ್ತು ಕೋಮು ಸೌಹಾರ್ದಕ್ಕೆ ಸವಾಲಿನ ಸಮಯ

ಯೋಜನೆಗಳ ನೆನಪು

ಶಾಲಾ ಮಕ್ಕಳಿಗಾಗಿ ಜಾರಿಗೆ ತಂದ ಯೋಜನೆಗಳನ್ನು ಸಿದ್ದರಾಮಯ್ಯ ಅವರು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ

ಮಕ್ಕಳು ಸಮಾಜದ ಭವಿಷ್ಯ

ಮಕ್ಕಳು ಸಮಾಜದ ಭವಿಷ್ಯ ನಾವು ಅವರಿಗೆ ಏನು ನೀಡುತ್ತೆವೆಯೋ ಅದನ್ನು ದೇಶಕ್ಕೆ ವಾಪಸ್ ನೀಡುತ್ತಾರೆ

English summary
In a series of tweet Former Karnataka Chief Minister Siddaramaiah remembered Jawaharlal Nehru. In a tweet he said that Nehru-A man who introduced & respected democracy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X