ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ ಹಿನ್ನಲೆ, ಮೂಡಿಗೆರೆಯಲ್ಲಿ ಬಿಗಿ ಭದ್ರತೆ
ಚಿಕ್ಕಮಗಳೂರು, ಆಗಸ್ಟ್ 31: ನಾಳೆ ಅಂದರೆ ಶುಕ್ರವಾರ ಮೂಡಿಗೆರೆಯ ಮಾಹಾಗಣಪತಿ ಉತ್ಸವದಲ್ಲಿ ಪಾಲ್ಗೊಳ್ಳಲು ದಕ್ಷಿಣ ಕನ್ನಡದ ಹಿರಿಯ ಆರ್.ಎಸ್.ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಮೂಡಿಗೆರೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇತ್ತೀಚೆಗೆ ದಕ್ಷಿಣ ಕನ್ನಡದ ಕಲ್ಲಡ್ಕ, ಬಂಟ್ವಾಳದಲ್ಲಿ ನಡೆದ ಕೋಮು ಗಲಭೆಗಳಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಈಗ ಅವರು ಮೂಡಿಗೆರೆಗೆ ಆಗಮಿಸುತ್ತಿರುವುದರಿಂದ ನಗರದಲ್ಲಿ ಮೂರು ಸುತ್ತಿನ ಭದ್ರತೆಗೆ ಏರ್ಪಾಟು ಮಾಡಲಾಗಿದೆ.

ಇನ್ನು ಜನರಲ್ಲಿ ವಿಶ್ವಾಸ ಮೂಡಿಸಲು ಹಾಗೂ ಸಮಾಜ ಘಾತುಕರಿಗೆ ಎಚ್ಚರಿಕೆ ಸಂದೇಶ ನೀಡಲು ಇಂದು ಮೂಡಿಗೆರೆ ಸುತ್ತ ಸಾವಿರಾರು ಪೋಲಿಸರು ಪೇರೆಡ್ ನಡೆಸಿದರು.













Click it and Unblock the Notifications