ಬಿಜೆಪಿ ಮುಖಂಡನ ಹತ್ಯೆ:ಅವಾರ್ಡ್ ವಾಪ್ಸಿ, ಜಸ್ಟ್ ಆಸ್ಕಿಂಗ್ ಮೌನವೇಕೆ!?

ಚಿಕ್ಕಮಗಳೂರು, ಜೂನ್ 23: "ಅವಾರ್ಡ್ ವಾಪ್ಸಿ, ಜಸ್ಟ್ ಆಸ್ಕಿಂಗ್, ಪ್ರಗತಿಪರರೆಲ್ಲ ಎಲ್ಲಿದ್ದಾರೆ? ಚಿಕ್ಕಮಗಳೂರಿನಲ್ಲಿ ಬಿಜೆಪಿ ಮುಖಂಡನ ಹತ್ಯೆಯಾದರೆ ಯಾಕೆ ಯಾರೂ ಧ್ವನಿ ಎತ್ತುತ್ತಿಲ್ಲ? ಎಂದು ಟ್ವಿಟ್ಟರ್ ನಲ್ಲಿ ಹಲವರು ಪ್ರಶ್ನಿಸುತ್ತಿದ್ದಾರೆ.

ನಿನ್ನೆ(ಜೂನ್ 22) ರಾತ್ರಿ 9:30 ರ ಸುಮಾರಿಗೆ ಚಿಕ್ಕಮಗಳೂರಿನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅನ್ವರ್(44) ಎಂಬುವವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸದರಿ ಸರ್ಕಾರ ವಿಫಲವಾಗಿದೆ ಎಂದು ದೂರಲಾಗುತ್ತಿದೆ.

ಬಿಜೆಪಿ ಕಾರ್ಯಕರ್ತ, ಮುಖಂಡನ ಹತ್ಯೆಯಾದರೆ ಒಂದು ನ್ಯಾಯ, ಪ್ರಗತಿಪರರು ಎಂದು ಕರೆಸಿಕೊಂಡವರು ಹತ್ಯೆಯಾದರೆ ಇನ್ನೊಂದು ನ್ಯಾಯವೇ ಎಂದು ಸರ್ಕಾರವನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾಧ್ಯಮಗಳು ಕರ್ನಾಟಕ ಸರ್ಕಾರವನ್ನು ಪ್ರಶ್ನಿಸುತ್ತವೆಯೇ?

ಚಿಕ್ಕಮಗಳೂರಿನಲ್ಲಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳಿ ಬಿಜೆಪಿ ಮುಖಂಡ ಅನ್ವರ್ ಅವರನ್ನು ಕೊಂದಿದ್ದಾರೆ. ಯಾವುದೇ ಮಾಧ್ಯಮಗಳು ಈ ಕುರಿತು ಕರ್ನಾಟಕ ಸರ್ಕಾರವನ್ನು ಪ್ರಶ್ನಿಸುವ ಧೈರ್ಯ ಹೊಂದಿವೆಯೇ ಎಂದು ಅಮೃತಾ ಭಿಂದರ್ ಪ್ರಶ್ನಿಸಿದ್ದಾರೆ.

ಶೀಘ್ರ ಕ್ರಮ ಕೈಗೊಳ್ಳಿ

ಅನ್ವರ್ ಅವರ ಹತ್ಯೆಯ ಕುರಿತು ಕೇಳಿ ಆಘಾತವಾಯಿತು. ಈ ಬರ್ಬರ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಮತ್ತು ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚುವಂತೆ ಕೋರುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಟ್ವೀಟ್ ಮಾಡಿದ್ದಾರೆ.

ಹಿಂದು, ಬಿಜೆಪಿ ಕಾರ್ಯಕರ್ತರ ಹತ್ಯೆ ನಿಂತಿಲ್ಲ!

ಚಿಕ್ಕಮಗಳೂರಿನಲ್ಲಿ ಬಿಜೆಪಿ ಮುಖಂಡ ಅನ್ವರ್ ಅವರನ್ನು ಹತ್ಯೆಗೈಯ್ಯಲಾಗಿದೆ. ಬಿಜೆಪಿ ಮುಖಂಡರು, ಹಿಂದು ಕಾರ್ಯಕರ್ತರ ಹತ್ಯೆ ಈ ರಾಜ್ಯದಲ್ಲಿ ಮತ್ತೆ ಮುಂದುವರಿಯುತ್ತಿದೆ. ಈ ಘಟನೆಯನ್ನು ನಾನು ಕಟುಶಬ್ದಗಳಿಂದ ಖಂಡಿಸುತ್ತೇನೆ. ಕೂಡಲೆ ಆರೋಪಿಗಳನ್ನು ಬಂಧಿಸಿ ಎಂದು ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ್ ಲಿಂಬಾವಳಿ ಹೇಳಿದ್ದಾರೆ.

ಗೌರಿ ಹತ್ಯೆಯನ್ನು ಖಂಡಿಸಿದಂತೆ ಖಂಡಿಸಿ!

ಎಲ್ಲಾ ಅವಾರ್ಡ್ ವಾಪ್ಸಿ ತಂಡ, ಪ್ರಕಾಶ್ ರೈ, ಜಿಗ್ನೇಶ್ ಮೇವಾನಿ ಎಲ್ಲರೂ ಮೊಂಬತ್ತಿ ಹಚ್ಚಿ ಈ ಹತ್ಯೆಯನ್ನೂ ಖಂಡಿಸಲಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಗೌರಿ ಹತ್ಯೆಯನ್ನು ಹೇಗೆ ಖಂಡಿಸಿದ್ದರೋ ಹಾಗೇ ಖಂಡಿಸಿ ಎಂದು ಅರುಣ್ ಮಂಜುನಾಥ್ ಟ್ವೀಟ್ ಮಾಡಿದ್ದಾರೆ.

ಈಗ ಪ್ರಜಾಪ್ರಭುತ್ವ ಅಪಾಯದಲ್ಲಿಲ್ಲವೇ?

ಬಾಲಿವುಡ್ಡಿನ ಪೇಯ್ಡ್ ನಟರು, ಉದಾರವಾದಿಗಳು, ಪತ್ರಕರ್ತರು ಎಲ್ಲರೂ ಈಗ ಎಲ್ಲಿದ್ದೀರಿ? ಅನ್ವರ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಕೊಲ್ಲಲಾಗಿದೆ! ಈಗ ಯಾರೂ ಒಂದು ಶಬ್ದವನ್ನೂ ಮಾತನಾಡುತ್ತಿಲ್ಲ, ಏಕೆಂದರೆ ಆತ ಬಿಜೆಪಿಯವರು! ಎಲ್ಲಿದ್ದೀರಾ ಎಲ್ಲರೂ? ಈಗ ಪ್ರಜಾಪ್ರಭುತ್ವ ಅಪಾಯದಲ್ಲಿಲ್ಲವೇ? ಬಿಜೆಪಿ ಮುಸ್ಲಿಮರಿಗೆ ಬದುಕಲು ಬಿಡುತ್ತಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ ಕೇಶವ್ ಶಾರ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+