ಚೆಕ್ ಬೌನ್ಸ್ ಪ್ರಕರಣ: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ 4 ವರ್ಷ ಜೈಲು ಶಿಕ್ಷೆ; ಕಾರಣವೇನು?
ಮೂಡಗಿರಿಯ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಹೂವಪ್ಪ ಗೌಡ ಎಂಬುವವರಿಂದ 1.35 ಕೋಟಿ ರೂ ಸಾಲ ಪಡೆದಿದ್ದರು. ಈ ಹಣವನ್ನ ಪಾವತಿ ಮಾಡುವ ಸಂಬಂಧ ಎಂ.ಪಿ ಕುಮಾರಸ್ವಾಮಿ ಅವರು 8 ಚೆಕ್ ಗಳನ್ನ ನೀಡಿದ್ದರು. ಆದರೆ ಈ ಚೆಕ್ ಗಳು ಬೌನ್ಸ್ ಆಗಿತ್ತು.
ಬೆಂಗಳೂರು,ಫೆಬ್ರವರಿ13: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆಯ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರಿಗೆ ಕೋರ್ಟ್ 4 ವರ್ಷ ಜೈಲು ಶಿಕ್ಷೆಯನ್ನ ವಿಧಿಸಿದೆ.
ಏನಿದು ಚೆಕ್ ಬೌನ್ಸ್ ಪ್ರಕರಣ.?
ಮೂಡಗಿರಿಯ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಹೂವಪ್ಪ ಗೌಡ ಎಂಬುವವರಿಂದ 1.35 ಕೋಟಿ ರೂ ಸಾಲ ಪಡೆದಿದ್ದರು. ಈ ಹಣವನ್ನ ಪಾವತಿ ಮಾಡುವ ಸಂಬಂಧ ಎಂ.ಪಿ ಕುಮಾರಸ್ವಾಮಿ ಅವರು 8 ಚೆಕ್ ಗಳನ್ನ ನೀಡಿದ್ದರು. ಆದರೆ ಈ ಚೆಕ್ ಗಳು ಬೌನ್ಸ್ ಆಗಿತ್ತು.
ಈ ಹಿಂದೆ ಕೊಡಬೇಕಾದ ಹಣವನ್ನ ಬಾಕಿ ಉಳಿಸಿಕೊಂಡು ಕಿರಿಕಿರಿ ಮಾಡುತ್ತಿದ್ದರು ಎನ್ನಲಾಗಿದ್ದು, ಇದರಿಂದ ಬೇಸತ್ತ ಹೂವಪ್ಪ ಗೌವಡ ಅವರು ಕೋರ್ಟ್ ಮೆಟ್ಟಿಲೇರಿದ್ದರು.

ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದ್ದು, ನ್ಯಾಯಧೀಶೆ ಜೆ. ಪ್ರೀತ್ ರಿಂದ ಶಿಕ್ಷೆ ಪ್ರಕಟವಾಗಿದೆ. ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರಿಗೆ 4 ವರ್ಷ ಜೈಲು ಶಿಕ್ಷೆಯನ್ನ ವಿಧಿಸಲಾಗಿದೆ.
ಇನ್ನೂ ಶಾಸಕ ಎಂ ಪಿ ಕುಮಾರಸ್ವಾಮಿ ಹೆಸರಿನಲ್ಲಿ 8 ಕೇಸ್ ಗಳಲ್ಲಿ ತಲಾ 6 ತಿಂಗಳು ಶಿಕ್ಷೆ ಪ್ರಟಕವಾಗಿದೆ. ಮೂಡಿಗೆರೆಯ ಬಿಜೆಪ ಶಾಸಕರಾದ ಎಂ ಪಿ ಕುಮಾರಸ್ವಾಮಿ ಅವರು ಸದ್ಯ ಸಾಲದ ಹಣವನ್ನು ತಕ್ಷಣವೇ ಪಾವತಿ ಮಾಡಬೇಕು. ಇಲ್ಲವಾದಲ್ಲಿ 8 ಕೇಸ್ ಗಳಲ್ಲಿ 4 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Click it and Unblock the Notifications