ಕನಸಾದ ಚನ್ನಪಟ್ಟಣದ ಹೈಟೆಕ್ ಖಾಸಗಿ ಬಸ್ ನಿಲ್ದಾಣ!

ರಾಮನಗರ, ಅಕ್ಟೋಬರ್ 04 : ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ ಜಂಟಿಯಾಗಿ ನಿರ್ಮಿಸಲು ಮುಂದಾಗಿದ್ದ ಚನ್ನಪಟ್ಟಣದ ಹೈಟೆಕ್ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. 5 ವರ್ಷ ಕಳೆದರೂ ಕಾಮಗಾರಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ.

ಹಿಂದಿನ ನಗರಸಭೆಯ ಜನಪ್ರತಿನಿಧಿಗಳ ಆಡಳಿತದ ಅವಧಿಯಲ್ಲಿ ಈ ಕಟ್ಟಡಕ್ಕೆ ಅನುಮೋದನೆ ದೊರೆತಿತ್ತು. ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಲು ಯೋಜನೆ ರೂಪಗೊಂಡಿದೆ. ಆದರೆ, ಕಾಮಗಾರಿ ಮಾತ್ರ ಕುಂಟುತ್ತಿದೆ.

bus

ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ಅವರು 2013ರ ಮೇ 30ರಂದು ಹಲವರ ವಿರೋಧದ ನಡುವೆಯೂ ಪೊಲೀಸರ ಭದ್ರತೆಯಲ್ಲಿ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರು. ಒಂದುವರೆ ವರ್ಷದೊಳಗೆ ಕಟ್ಟಡ ನಿರ್ಮಾಣವಾಗಲಿದೆ ಎಂದು ಆಶ್ವಾಸನೆಯನ್ನೂ ನೀಡಿದ್ದರು.

ಕಾಮಗಾರಿಗೆ ಶಂಕುಸ್ಥಾಪನೆ ಮಾಡುವ ಮೊದಲೇ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ಹಲವು ವಿರೋಧಗಳಿದ್ದವು. ಆದರೂ ಅವುಗಳನ್ನು ಬಗೆಹರಿಸಿಕೊಳ್ಳದೇ ಏಕಾಏಕಾ ಹಳೇ ಖಾಸಗಿ ಬಸ್ ನಿಲ್ದಾಣವನ್ನು ತೆರವುಗೊಳಿಸಲಾಗಿತ್ತು. ಇದರಿಂದ ಸಣ್ಣ-ಪುಟ್ಟ ವ್ಯಾಪಾರ ಮಾಡುತ್ತಿದ್ದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು.

chennapatna

ಪಾದಚಾರಿಗಳು ಓಡಾಡಲು ನಿರ್ಮಿಸಿರುವ ಪುಟ್‌ಪಾತ್ ಗಳನ್ನು ಖಾಸಗಿ ಬಸ್ಸುಗಳು ಅತಿಕ್ರಮಿಸಿಕೊಂಡಿದ್ದು, ಜನರಿಗೂ ನಿತ್ಯ ಸಂಕಷ್ಟ ಎದುರಾಗಿದೆ. ಸರ್ಕಾರಿ ಬಸ್ ನಿಲ್ದಾಣದಿಂದ ವೇಗವಾಗಿ ಬಸ್ಸುಗಳು ರಸ್ತೆಗೆ ಬಂದರೆ ಅಲ್ಲಿ ಅಪಘಾತ ನಡೆಯುತ್ತದೆ ಎಂಬುದು ಜನರ ದೂರು.

ಬಸ್ ನಿಲ್ದಾಣದಲ್ಲಿ ಹಿಂದೆ ಶೌಚಾಲಯ, ತಂಗುದಾಣ ಎಲ್ಲವೂ ಇತ್ತು. ಈಗ ಅದನ್ನು ತೆರವು ಮಾಡಿದ್ದರಿಂದ ವೃದ್ಧರು, ಮಹಿಳೆಯರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಫುಟ್‌ಪಾತ್ ಪುರುಷರ ಬಯಲು ಶೌಚಾಲಯವಾಗಿದ್ದು, ಮಹಿಳೆಯರಿಗೆ ಮುಜುಗರ ಉಂಟಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+