SIR ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ? ಚಲುವರಾಯಸ್ವಾಮಿ ವಾಗ್ದಾಳಿ

ಮೈಸೂರು: ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೇ ಹೊರತು, ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ ಎಂದು ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‌ಐಆರ್‌ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ಅಕ್ರಮಗಳ ಸರಣಿಯೇ ನಡೆದಿದೆ ಎಂದು ಆರೋಪಿಸಿದರು. ಬಿಎಲ್‌ಒಗಳು 450ಕ್ಕೂ ಹೆಚ್ಚು ಫಾರಂ ನಂಬರ್‌ 7 ವಿತರಿಸಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದ ಅವರು, ದೇಶದ ಸಂವಿಧಾನದ ಪಾವಿತ್ರ್ಯ ಕಾಪಾಡಬೇಕಾದ ಚುನಾವಣಾ ಆಯೋಗವೇ ಎಸ್‌ಐಆರ್‌ ಮೂಲಕ ಅಕ್ರಮ ಎಸಗಿದೆ ಎಂದು ಆರೋಪಿಸಿದರು.

Chaluvarayaswamy Attacks Oppn Leaders Over Special Intensive Revision Hits Back at H D Kumaraswamy

ಎಸ್‌ಐಆರ್‌ನಿಂದ ಕರ್ನಾಟಕಕ್ಕೆ ಅನ್ಯಾಯ

ಎಸ್‌ಐಆರ್‌ನಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಹೀಗಾಗಿ ಕರ್ನಾಟಕದ ಪರವಾಗಿ ಮಾತನಾಡಬೇಕಿರುವ ವಿರೋಧ ಪಕ್ಷದ ನಾಯಕರು ಕೇಂದ್ರದ ಪರವಾಗಿ ಮಾತನಾಡುತ್ತಿದ್ದಾರೆ. ಇಂತಹವರಿಗೆ ಜನಪರ ಕಾಳಜಿ ಹಾಗೂ ಜವಾಬ್ದಾರಿ ಏನು ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು. ಬಿಜೆಪಿ ಮತ್ತು ಜೆಡಿಎಸ್‌ನ ಕೆಲವರು ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಟೀಕಿಸಿದರು.

ಮೂಲ ಕಾಂಗ್ರೆಸಿಗರು ಮಾತನಾಡುತ್ತಿಲ್ಲ, ವಲಸಿಗರೇ ಮಾತನಾಡುತ್ತಿದ್ದಾರೆ ಎಂಬ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೂ ಚಲುವರಾಯಸ್ವಾಮಿ ತಿರುಗೇಟು ನೀಡಿದರು. ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಡಿ.ಕೆ. ಶಿವಕುಮಾರ್‌ ಹಾಗೂ ತಮ್ಮನ್ನು ಕಂಡರೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು. ಸಚಿವ ಕೆ.ಎಂ. ಶಿವಲಿಂಗೇಗೌಡರ ಬಗ್ಗೆಯೂ ಇದೇ ರೀತಿಯ ಅಸಮಾಧಾನ ಅವರಿಗಿದೆ ಎಂದು ಹೇಳಿದರು.

ನಾನು ಈಗ ಕಾಂಗ್ರೆಸ್‌ನಲ್ಲಿದ್ದೇನೆ. ನಾನೂ ಕಾಂಗ್ರೆಸಿಗ. ಶಿವಲಿಂಗೇಗೌಡರು ಅವರ ಪಕ್ಷದಲ್ಲೇ ಉಳಿದುಕೊಂಡಿದ್ದರೆ ಬೋರ್ಡ್‌ ಅಧ್ಯಕ್ಷರನ್ನಾಗಿಯೂ ಮಾಡುತ್ತಿರಲಿಲ್ಲ" ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಮನಗರದ ಉಸ್ತುವಾರಿ ಸಚಿವ ಬಾಲಕೃಷ್ಣ ಅವರು ತಮ್ಮ ವ್ಯಾಪ್ತಿಯಲ್ಲಿರುವ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಇದರಲ್ಲಿ ಅವರಿಗೇನು ಸಮಸ್ಯೆ ಎಂದು ಪ್ರಶ್ನಿಸಿದ ಚಲುವರಾಯಸ್ವಾಮಿ, ಈ ವಿಚಾರದಲ್ಲಿ ಅನಗತ್ಯವಾಗಿ ಟೀಕೆ ಮಾಡಲಾಗುತ್ತಿದೆ ಎಂದರು.

'ಕೇಂದ್ರ ಸಚಿವರಿಗೆ ಕೆಲಸವಿಲ್ಲವೇ?'

ಕಳೆದ ಮೂರು ತಿಂಗಳಿಂದ ಎಚ್‌.ಡಿ. ಕುಮಾರಸ್ವಾಮಿ ಮಾಡುತ್ತಿರುವ ರಾಜಕೀಯ ಸರಿಯೇ ಎಂದು ಪ್ರಶ್ನಿಸಿದ ಚಲುವರಾಯಸ್ವಾಮಿ, "ಪ್ರಧಾನಿಗಳು ಅವರಿಗೆ ಕೆಲಸವನ್ನೇ ನೀಡಿಲ್ಲ ಅನ್ನಿಸುತ್ತದೆ. ವಾರಪೂರ್ತಿ ಬೆಂಗಳೂರಿನ ಮಾಧ್ಯಮಗಳ ಮುಂದೆಯೇ ಇರುತ್ತಾರೆ"ಎಂದು ವ್ಯಂಗ್ಯವಾಡಿದರು.

ತಾವು ಸಚಿವರಾದ ದಿನದಿಂದ ಒಂದು ಗಂಟೆಯೂ ಪುರುಸೊತ್ತು ಸಿಗುತ್ತಿಲ್ಲ. ಕೇಂದ್ರ ಸಚಿವರಾಗಿರುವ ಅವರಿಗೆ ಯಾವ ಕೆಲಸವೂ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ಅವರು ಮಾಡುತ್ತಿರುವುದು ಸರಿಯೇ ಎಂಬುದನ್ನು ಮಾಧ್ಯಮಗಳೇ ಹೇಳಬೇಕು ಎಂದರು.

"ನೀವು ಸರಿಯಾಗಿದೆ ಎಂದರೆ ನಾನೇ ಅವರನ್ನು ಅಭಿನಂದಿಸುತ್ತೇನೆ. ಇನ್ನೊಬ್ಬರ ಬಗ್ಗೆ ದ್ವೇಷ ಸಾಧಿಸುತ್ತಿದ್ದರೆ ಕೆಲಸ ಮಾಡುವುದು ಹೇಗೆ? ನಾನು ಕುಮಾರಸ್ವಾಮಿ ಆಗುವುದಿಲ್ಲ, ಚಲುವರಾಯಸ್ವಾಮಿಯಾಗಿಯೇ ಇರುತ್ತೇನೆ. ಸಿಕ್ಕಿರುವ ಸಮಯದಲ್ಲಿ ಜನರಿಗಾಗಿ ಕೆಲಸ ಮಾಡಿದರೆ ಸಾಕು. ಅವರ ರೀತಿ ಬಾಯಿ ಚಪಲಕ್ಕೆ ಮಾತನಾಡುವವನು ನಾನಲ್ಲ" ಎಂದು ತಿರುಗೇಟು ನೀಡಿದರು.

ಬರ ಪರಿಹಾರದ ಬಗ್ಗೆ ಚಲುವರಾಯಸ್ವಾಮಿ ಅಸಮಾಧಾನ

ಇದೇ ವೇಳೆ ರಾಜ್ಯದ ಬರ ಪರಿಸ್ಥಿತಿ ಹಾಗೂ ಕೇಂದ್ರದ ನೆರವಿನ ಬಗ್ಗೆಯೂ ಚಲುವರಾಯಸ್ವಾಮಿ ಮಾತನಾಡಿದರು. ಬರ ಅಧ್ಯಯನಕ್ಕಾಗಿ ಕೇಂದ್ರದ ತಂಡ ಕರ್ನಾಟಕಕ್ಕೆ ಬಂದಿದೆ. ತಂಡ ಯಾವ ರೀತಿಯ ವರದಿ ನೀಡಲಿದೆ ಎಂಬುದನ್ನು ನೋಡಬೇಕು. ರೈತರ ಪರವಾಗಿಯೇ ವರದಿ ನೀಡುವ ವಿಶ್ವಾಸವಿದೆ ಎಂದರು.

ಆದರೆ ಕೇಂದ್ರ ಸರ್ಕಾರ ಈವರೆಗೂ ಕರ್ನಾಟಕದ ನಿರೀಕ್ಷೆಗೆ ತಕ್ಕಂತೆ ಬರ ಪರಿಹಾರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ರಾಜ್ಯಕ್ಕೆ ಸಂಪೂರ್ಣ ಪ್ರಮಾಣದ ಬರ ಪರಿಹಾರ ಬಿಡುಗಡೆಯಾಗಿರಲಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+