ತಮಿಳುನಾಡಿಗೆ ಕಾವೇರಿ ನೀರು, ಶುಕ್ರವಾರ ತೀರ್ಮಾನ?

Subscribe to Oneindia Kannada

ನವದೆಹಲಿ, ಆಗಸ್ಟ್, 26: ಕರ್ನಾಟಕದ ಕಾವೇರಿ ನದಿ ಕೊಳ್ಳದಿಂದ 50.52 ಟಿಎಂಸಿ ನೀರು ಬಿಡುವಂತೆ ತಮಿಳು ನಾಡು ಸರ್ಕಾರ ಸಲ್ಲಿಕೆ ಮಾಡಿರುವ ಮನವಿ ಮುಂದಿನ ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ.[65 ಟಿಎಂಸಿಯಲ್ಲಿ 50 ಟಿಎಂಸಿ ಕೊಟ್ಟರೆ ಉಳಿಯುವುದೆಷ್ಟು!?]

ಮಳೆ ಕೊರತೆಯಿಂದ ಈ ಬಾರಿ ಕಾವೇರಿ ಕೊಳ್ಳದ ಯಾವ ಜಲಾಶಯಗಳು ಭರ್ತಿಯಾಗಿಲ್ಲ. ನಮ್ಮ ಬಳಿಯೇ ನೀರಿನ ಸಂಗ್ರಹ ಇಲ್ಲದೇ ರೈತರ ಕೃಷಿ ಕಾರ್ಯಕ್ಕೆ ನೀರು ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಕೈಚೆಲ್ಲಿ ಕುಳಿತುಕೊಂಡಿರುವಾಗ ಮತ್ತೊಂದು ಆತಂಕ ಎದುರಾಗಿದೆ.[ನಮಗೇ ನೀರಿಲ್ಲ, ಇನ್ನು ತಮಿಳ್ನಾಡಿಗೆ ಎಲ್ಲಿಂದ ಬಿಡೋಣ?]

Cauvery Dispute: Supreme Court to hear TN's plea

ನ್ಯಾಯಾಧಿಕರಣದ ಹಿಂದಿನ ತೀರ್ಪುಗಳನ್ನು ಆಧರಿಸಿ ತಮಿಳುನಾಡು ಅರ್ಜಿ ಸಲ್ಲಿಕೆ ಮಾಡಿದೆ. ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಹೇಳಿತ್ತು. ಪತ್ರ ಬರೆದು ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲಿ ಒತ್ತಾಯ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Supreme court to hear TN's plea seeking direction to Karnataka to release 50 TMC of Cauvery Water on next Friday September 2.
Please Wait while comments are loading...