ಫಿಟ್ನೆಸ್ ಕಳೆದುಕೊಂಡ ಮಾಸ್ಟರ್‌ಗೆ ನೆರವು ಬೇಕಿದೆ
ಬೆಂಗಳೂರು, ಜುಲೈ, 26: ಬಾಡಿ ಬಿಲ್ಡರ್ ಆಗಿ, ಫಿಟ್ನೆಸ್ ಕೋಚ್ ಆಗಿ ಜನಮನ್ನಣೆ ಗಳಿಸಿದ್ದ ವ್ಯಕ್ತಿಯನ್ನು ಕ್ಯಾನ್ಸರ್ ಮಹಾಮಾರಿ ಹಿಡಿದುಕೊಂಡಿದೆ. ಬೆಂಗಳೂರಿನ ಇಂದಿರಾ ನಗರದಲ್ಲಿ ನೂರಾರು ಜನರಿಗೆ ತರಬೇತಿ ನೀಡಿದ ವ್ಯಕ್ತಿ ರವಿ ಇಂದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.
ಇದಕ್ಕಿದ್ದಂತೆ ರವಿ ಅವರ ಆರೋಗ್ಯದಲ್ಲಿ ಏರು ಪೇರು ಕಂಡುಬಂದಿದೆ. ಹತ್ತಿರವಿದ್ದ ಎಲ್ಲ ಆಸ್ಪತ್ರೆಗಳನ್ನು ಸುತ್ತಿದ ನಂತರ ರವಿ ಬದುಕಲ್ಲಿ ಕ್ಯಾನ್ಸರ್ ಎಂಬ ಕರಾಳ ಮುಖ ಕಂಡಿತ್ತು.[ಕ್ಯಾನ್ಸರ್ ಪೀಡಿತರಿಗೆ ರಾಮಬಾಣ ಹನುಮಫಲ!]

ನಾಲ್ಕು ವರ್ಷಗಳ ಆಸ್ಪತ್ರೆಯ ಸುತ್ತಾಟದ ಬದುಕು ರವಿ ಅವರನ್ನು ಹೈರಾಣ ಮಾಡಿತ್ತು. ಅಂತಿಮವಾಗಿ ಜರ್ಜರಿತರಾಗುವ ಕ್ಷಣವೂ ಬಂದು ಬಿಟ್ಟಿತು. ರವಿ ಅವರಿಗೆ ಬೆನ್ನು ಹುರಿಯ ಕ್ಯಾನ್ಸರ್ ಅಮರಿಕೊಂಡಿತ್ತು.[ಕ್ಯಾನ್ಸರ್ ಪೀಡಿತ ಬಾಲಕನಿಗೆ ನೆರವಿನ ಹಸ್ತ ಬೇಕಿದೆ]
ತಿಂಗಳಿಗೆ ದುಡಿಯುತ್ತಿದ್ದ 15 ಸಾವಿರ ರು. ಹಣದಲ್ಲಿ ರವಿಯವರೇ ಕುಟುಂಬವನ್ನು ನಡೆಸಬೇಕು. ಆರೋಗ್ಯವೂ ಕೈ ಕೊಟ್ಟಿದ್ದರಿಂದ ದುಡಿಮೆಯೂ ಅಸಾಧ್ಯ ಎಂಬ ಸ್ಥಿತಿ. ಬದುಕು ಮೂರಾಬಟ್ಟೆಯಾಗಿತ್ತು. ಈ ಸಮಯ ರವಿಯವರ ನೆರವಿಗೆ ನಿಂತಿದ್ದು ಎಚ್ ಸಿಜಿ ಫೌಂಡೇಶನ್.

2006 ರಲ್ಲಿ ಬೆಂಗಳೂರಲ್ಲಿ ಆರಂಭವಾದ ಎಚ್ ಸಿಜಿ ಫೌಂಡೇಶನ್ ಮಾರಕ ರೋಗಕ್ಕೆ ತುತ್ತಾದವರ ನರವಿಗೆ ನಿಂತುಕೊಂಡೆ ಬಂದಿದೆ. ಸುಮಾರು 3000 ಕ್ಯಾನ್ಸರ್ ರೋಗಿಗಳಿಗೆ ನೆರವು ನೀಡುತ್ತಿದೆ.[ಬೀದರ್‌ನ ಈ ಬಾಲಕನ ಜೀವ ದಾನಿಗಳ ಕೈಯಲ್ಲಿದೆ]
ಒಂದು ಕಾಲದ ಫಿಟ್ನೆಸ್ ಮಾಸ್ಟರ್ ಇದೀಗ ಫಿಟ್ನೆಸ್ ಕಳೆದುಕೊಂಡಿದ್ದಾರೆ. ಅವರ ಜೀವನ ಮೊದಲಿನ ಹಂತಕ್ಕೆ ಬರಲು ನಿಮ್ಮ ನೆರವು ಅತ್ಯಗತ್ಯ. ರವಿ ಸಹಾಯಕ್ಕೆ ಆನ್ ಲೈನ್ ಕ್ಯಾಂಪೇನ್ ಆರಂಭವಾಗಿದ್ದು ನೀವು ಸಹಾಯ ಮಾಡಬಹುದು.
ಸಹಾಯ ಮಾಡಲು ಮತ್ತು ಹೆಚ್ಚಿನ ಮಾಹಿತಿಗೆ












Click it and Unblock the Notifications