BY Vijayendra: ಬಿಜೆಪಿ ರಾಜ್ಯಾಧ್ಯಕ್ಷರ ತಿರಸ್ಕಾರ, ನಾಯಕತ್ವ ಬಗ್ಗೆ BY ವಿಜಯೇಂದ್ರ ಹೇಳಿದ್ದೇನು
ಬೆಳಗಾವಿ, ಅಕ್ಟೋಬರ್ 10: ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ನಾಯಕತ್ವಕ್ಕೆ ವಿರೋಧ ಕೇಳಿ ಬಂದಿವೆ. ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಎಂಬ ಕಾರಣಕ್ಕೆ ಈ ಹುದ್ದೆ ನೀಡಲಾಗಿದ್ದು, ಅವರನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಖುಲಾಂ ಖುಲ್ಲಾ ಆಗಿ ಕೇಸರಿ ಪಡೆ ನಾಯಕರೇ ಹೇಳಿದ್ದರು. ಇದೀಗ ಈ ಕುರಿತು ಮೌನ ಮುರಿದಿರುವ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ ಅವರು, ಪಕ್ಷ ನನ್ನು ಗುರುತಿಸಿ ಪ್ರಮುಖ ಜವಾಬ್ದಾರಿ ನೀಡಿದೆ. ಕೆಲವರಿಗೆ ಒಪ್ಪಿಕೊಳ್ಳಲು ಇನ್ನೂ ಸಮಯ ಬೇಕಾಗುತ್ತದೆ. ಈಗಾಗಲೇ ಸಾಕಷ್ಟು ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದೇನೆ. ನಮ್ಮ ನಾಯಕರ ಹೇಳಿಕೆ, ಅಭಿಪ್ರಾಯಗಳನ್ನು ನಾನು ಪಕ್ಷದ ಹಿತದೃಷ್ಟಿಯಿಂದ ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.

ರಮೇಶ್ ಜಾರಕಿಹೊಳಿ ಅವರು ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರ, ನನನ್ನು ಒಪ್ಪಿಕೊಳ್ಳಲು ಅವರಿಗೆ ಇನ್ನೂ ಸಮಯ ಹಿಡಿಯಬಹುದು. ಪಕ್ಷದ ಸಂಘಟನೆ, ಒಳಿತು ಮುಖ್ಯ ಎಂದರು. ಅಲ್ಲದೇ ನಾನು ವಿರೋಧ ಪಕ್ಷದಲ್ಲಿದ್ದೇನೆ. ಈ ಕೆಲಸ ಮಾತ್ರ ಮಾಡುತ್ತಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಯತ್ನಾಳ್ ಅವರ ಹೇಳಿಕೆಗೆ ಅವರು ತಿರುಗೇಟು ಕೊಟ್ಟಿದ್ದಾರೆ.
ರಾಜಕೀಯದಲ್ಲಿ ಸವಾಲುಗಳು ಬಂದಾಗ ಬೆನ್ನು ತೋರಿಸಿ ತಂದೆ ಬಿಎಸ್ ಯಡಿಯೂರಪ್ಪನವರು ಯಾವತ್ತೂ ಓಡಿ ಹೋದವರಲ್ಲ. ನಾನು ಅವರ ಮಗ ನಾನೂ ಸಹ ಸಮಸ್ಯೆಗಳಿಗೆ ಬೆನ್ನು ತೋರಿಸಲ್ಲ. ಗಟ್ಟಿಯಾಗಿ ನಿಂತು ಎಲ್ಲವನ್ನು ಎದುರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇನ್ನೂ ಮುಡಾ ಭಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಆರೋಪಿ ನಂಬರ್ 1 ಆಗಿದ್ದಾರೆ. ಅವರು ರಾಜೀನಾಮೆ ಕೊಡಬೇಕು ಎಂದ ಅವರು ಇತ್ತಿಚಿಗೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದಕ್ಕೆ ಅವರು ಸ್ಪಷ್ಟನೆ ಕೊಟ್ಟರು.
ನನ್ನನ್ನು ಒಪ್ಪುವುದಿಲ್ಲ ಎಂದು ರಮೇಶ್ ಜಾರಕಿಹೊಳಿಯವರು ಹೇಳಿದ್ದಾರೆ. ಹೀಗಾಗಿ ಅವರನ್ನು ಹುಡುಕಿಕೊಂಡು ಹೋಗಿದ್ದೆ. ಆದವರು ಸಿಗದ ಕಾರಣ ಸತೀಶ್ ಜಾರಕಿಹೊಳಿಯವರನ್ನು ಭೇಟಿ ಮಾಡಿದ್ದೇನೆ. ಅಲ್ಲದೇ ಕ್ಷೇತ್ರ ಕೆಲವು ಇದ್ದುದರಿಂದ ತೆರಳಬೇಕಾಯಿತು ಎಂದರು.
ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಆರಿಸಿ ತರಬೇಕು ಎನ್ನುವುದೊಂದೆ ನಮ್ಮ ಗುರಿಯಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಪಕ್ಷವನ್ನು ಕ್ಲೀನ್ ಮಾಡಲಾಗಿದೆ ಎಂದು ಪಕ್ಷವನ್ನು ಕ್ಲೀನ್ ಮಾಡಬೇಕಿದೆ ಎಂದು ರಮೇಶ್ ಮತ್ತು ಯತ್ನಾಳ್ ಅವರು ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು.
ಇನ್ನೂ ಎಚ್‌ಡಿ ಕುಮಾರಸ್ವಾಮಿ, ಮುರುಗೇಶ್ ನಿರಾಣಿ ಅವರ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ನೀಡದ ವಿಚಾರ, ಈ ಬಗ್ಗೆ ರಾಜ್ಯಪಾಲರೇ ನಿರ್ಧರಿಸುತ್ತಾರೆ. ಅವರ ಕಚೇರಿಯಲ್ಲಿ ಏನಾಗಲಿದೆ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ರಾಮನಗರ ಸ್ಪರ್ಧೆ ವಿಚಾರ: ಬಿವೈವಿ ಏನಂದ್ರು?
ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಿಂದ ಸಿಪಿ ಯೋಗೀಶ್ವರ ಸ್ಪರ್ಧೆ ವಿಚಾರ, ಯೋಗೇಶ್ವರ ಅವರ ಹಿಡಿತ ಕ್ಷೇತ್ರದಲ್ಲಿದೆ. ಹೀಗಾಗಿ ಅವರು ಪ್ರಯತ್ನ ಮಾಡುವುದು ತಪ್ಪಲ್ಲ. ಇನ್ನೂ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ಆಸಕ್ತಿ ತೋರಿಸಿದಂತೆ ವಾಲ್ಮೀಕಿ ಹಗರಣಕ್ಕೆ ತೋರಿಸಿಲ್ಲ ಎಂಬ ಮಾತು ಕೇಳಿ ಬಂದಿವೆ. ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.
ಮೂಡಾ ಮಾತ್ರವಲ್ಲದೇ ಮೂರು ವಿಚಾರಗಳನ್ನು ತಗೆದುಕೊಂಡೇ ನಾವು ಹೋರಾಟ ಮಾಡಿದ್ದೆವು. ಮುಖ್ಯಮಂತ್ರಿ ಅವರು ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ವಿರೋಧ ಪಕ್ಷದವರನ್ನು ಬೆದರಿಸಿ ತಾವು ಸೇಪ್ ಆಗುತ್ತೇವೆ ಎಂದುಕೊಂಡಿದ್ದಾರೆ. ಅದು ಅವರ ಭ್ರಮೆ ಎಂದ ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.












Click it and Unblock the Notifications