Get Updates
Get notified of breaking news, exclusive insights, and must-see stories!

ವಿಶ್ವಾಸಮತ ಗೆದ್ದ ಯಡಿಯೂರಪ್ಪ, 6 ತಿಂಗಳು ಸರ್ಕಾರ ಸೇಫ್

Recommended Video

      ವಿಶ್ವಾಸಮತ ಗೆದ್ದ ಬಿ ಎಸ್ ಯಡಿಯೂರಪ್ಪ | ಇನ್ನು 6 ತಿಂಗಳು ಸರಕಾರ ಬಚಾವ್ | Oneindia Kannada

      ಬೆಂಗಳೂರು, ಜುಲೈ 29: ಬಿ.ಎಸ್ ಯಡಿಯೂರಪ್ಪ ನೇತೃತ್ವ ಬಿಜೆಪಿ ಸರ್ಕಾರ ವಿಧಾನಸಭೆಯ ಅಗ್ನಿ ಪರೀಕ್ಷೆಯಲ್ಲಿ ಪಾಸಾಗಿದೆ. ಮೂರು ಮುಖ್ಯಮಂತ್ರಿಗಳು, ಎರಡು ಬಾರಿ ವಿಶ್ವಾಸಮತ ಯಾಚನೆ ಕಂಡಿರುವ 15ನೇ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿಂದು ಯಡಿಯೂರಪ್ಪ ಅವರು ವಿಶ್ವಾಸಮತ ಯಾಚಿಸಿ ಬಹುಮತ ಸಾಬೀತು ಪಡಿಸಿದ್ದಾರೆ.

      "ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿದ ಬಳಿಕ ಮೊದಲು ಧನ ವಿನಿಯೋಗ ವಿಧೇಯಕದ ಬಗ್ಗೆ ಚರ್ಚೆ ನಡೆಸದೆ ಅಂಗೀಕಾರವಾಗಿದೆ. ಆದರೆ, ಪೂರಕ ವಿಧೇಯಕದ ಬಗ್ಗೆ ಚರ್ಚೆಯ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟು ಹಿಡಿದರು. ಸದ್ಯಕ್ಕೆ ಮುಂದಿನ 3 ತಿಂಗಳ ಕಾಲಕ್ಕೆ ಲೇಖಾನುದಾನಕ್ಕೆ ಅಂಗೀಕಾರ ಸಿಕ್ಕಿದೆ.

      ಇದಕ್ಕೂ ಮುನ್ನ ವಿಶ್ವಾಸಮತ ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ವಿಶ್ವಾಸಮತದ ಬಗ್ಗೆ ಚರ್ಚೆಯಿಲ್ಲದೆ ಮತಕ್ಕೆ ಹಾಕಲು ವಿಪಕ್ಷ ನಾಯಕರು ಒಪ್ಪಿಗೆ ಸೂಚಿಸಿದರು.

      ಎಚ್. ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚಿಸಿದಾಗ ಸುದೀರ್ಘ ಕಾಲ ಚರ್ಚೆಯಾಗಿತ್ತು. ನಂತರ ಧ್ವನಿಮತದ ಬದಲಿಗೆ ಡಿವಿಷನ್ ಗೆ ಹಾಕಲಾಗಿತ್ತು. ಆದರೆ, ಈ ಬಾರಿ ಧ್ವನಿಮತಕ್ಕೆ ಹಾಕಲು ಸ್ಪೀಕರ್ ರಮೇಶ್ ಕುಮಾರ್ ಸೂಚಿಸಿದರು.

      BS Yeddyurappa wins trust vote, Confidence motion 15 Assembly

      ಅದರಂತೆ, ವಿಶ್ವಾಸಮತದ ಪರ 106 ಮತಗಳು, ವಿಶ್ವಾಸಮತದ ವಿರುದ್ಧ 99 ಮತಗಳು ಬಂದು ಬಿಜೆಪಿ ಸರ್ಕಾರ ಬಹುಮತ ಸಾಬೀತು ಪಡಿಸಿದೆ. ಹೀಗಾಗಿ, ಸದನದ ನಡಾವಳಿ ನಿಮಯಗಳ ಪ್ರಕಾರ ಮುಂದಿನ ಆರು ತಿಂಗಳುಗಳ ಕಾಲ ವಿಶ್ವಾಸಮತ ಪ್ರಕ್ರಿಯೆಗೆ ಚಾಲನೆ ನೀಡುವಂತಿಲ್ಲ. ಬಿಜೆಪಿ ಸರ್ಕಾರ 6 ತಿಂಗಳು ಸೇಫಾಗಿದೆ.

      "ಧ್ವನಿಮತದ ಮೂಲಕ ನಡೆದು ವಿಶ್ವಾಸಮತದ ಪರವಾಗಿರುವವರು 'ಹೌದು' ಅಥವಾ 'ಇಲ್ಲ' ಎನ್ನುವ ಮೂಲಕ ಮತ ಚಲಾಯಿಸಿದ್ದಾರೆ. ಬಿಜೆಪಿ ಬಹುಮತ ಗಳಿಸಿದೆ" ಎಂದು ಸ್ಪೀಕರ್ ರಮೇಶ್ ಕುಮಾರ್ ಘೋಷಿಸಿದರು.

      15ನೇ ವಿಧಾನಸಭೆಯಿಂದ ಒಟ್ಟು 17 ಶಾಸಕರು ಅನರ್ಹ ಎಂದು ಸ್ಪೀಕರ್ ರಮೇಶ್ ಕುಮಾರ್ ಜುಲೈ 28ರಂದು ಘೋಷಿಸಿದ್ದಾರೆ. ಭಾನುವಾರದಿಂದಲೇ ಆದೇಶ ಜಾರಿಯಲ್ಲಿರುತ್ತದೆ. ಸದನಕ್ಕೆ ಇಂದು ನಾಗೇಂದ್ರ, ಜಿ ಪರಮೇಶ್ವರ ವೈಯಕ್ತಿಕ ಕಾರಣದಿಂದ ಗೈರಾಗಿದ್ದರು.

      ವಿಧಾನಸಭೆ ಬಲಾಬಲ: 224-17=207
      ಮ್ಯಾಜಿಕ್ ನಂಬರ್: 104
      ಬಿಜೆಪಿ: 105+1 (ಎಚ್ ನಾಗೇಶ್ ಬೆಂಬಲ)
      ಬಿಎಸ್ಪಿ: 1 ತಟಸ್ಥ
      ಕಾಂಗ್ರೆಸ್: 76-11=65
      ಜೆಡಿಎಸ್: 37-3=34
      ಮೈತ್ರಿ: 99
      ಅನರ್ಹ: 3+14=17

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+