ಸುಮ್ಮನೆ ಕೂರುವವರಲ್ಲ ಬಿಎಸ್‌ವೈ, ಜೂನ್ 1ರಿಂದ ಮಾಡ್ತಾರೆ ರಾಜ್ಯ ಪ್ರವಾಸ
ಬೆಂಗಳೂರು, ಮೇ 21: ಮುಖ್ಯಮಂತ್ರಿಯಾಗಿ ಕೇವಲ 58 ಗಂಟೆ ಮಾತ್ರವೇ ಅಧಿಕಾರದಲ್ಲಿದ್ದ ಯಡಿಯೂರಪ್ಪ ಅವರು ಭಾವುಕ ಭಾಷಣ ಮಾಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಡೆದರು. ನಿರಾಶರಾಗಿದ್ದ ಅವರ ಮುಂದಿನ ನಡೆ ಏನು ಎಂಬುದು ಕುತೂಹಲ ಹುಟ್ಟಿಸಿತ್ತು. ಆದರೆ ಈಗ ಅದು ಸ್ಪಷ್ಟವಾಗಿದೆ.
ಸರ್ಕಾರ ರಚಿಸಲಾಗದೆ ಆದ ಹಿನ್ನಡೆಯಿಂದ ಯಡಿಯೂರಪ್ಪ ಅವರು ಕುಗ್ಗಿಲ್ಲ ಅವರು ಇನ್ನಷ್ಟು ಬಲಗೊಂಡಿದ್ದಾರೆ. ಹಾಗಾಗಿ ಅದೇ ಉತ್ಸಾಹದಿಂದ ಯಡಿಯೂರಪ್ಪ ಅವರು ಜೂನ್ 1ರಿಂದ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ.
ಶನಿವಾರ ಅಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ ಅವರೇ ಹೇಳಿದಂತೆ ಲೋಕಸಭೆಯಲ್ಲಿ 28 ಕ್ಷೇತ್ರವನ್ನೂ ಬಿಜೆಪಿಗೆ ಗೆದ್ದು ಕೊಡಬೇಕೆಂಬ ಛಲದಿಂದ ಈ ರಾಜ್ಯ ಪ್ರವಾಸ ಆರಂಭಿಸಿದ್ದು, ಯಡಿಯೂರಪ್ಪ ಅವರಿಗೆ ಶ್ರೀರಾಮುಲು ಜೊತೆ ನೀಡಲಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ರಾಜ್ಯಪ್ರವಾಸವನ್ನು ಯಡಿಯೂರಪ್ಪ ಅವರು ಕೈಗೊಂಡಿದ್ದು, ಆಯಾ ಕ್ಷೇತ್ರಗಳ ಸ್ಥಳೀಯ ನಾಯಕರುಗಳು ಪ್ರವಾಸಕ್ಕೆ ಸಾಥ್ ನೀಡಲಿದ್ದಾರೆ.
ಎರಡು ಆಯಾಮದಲ್ಲಿ ಈ ರಾಜ್ಯ ಪ್ರವಾಸ ನಡೆಯಲಿದ್ದು, ಶ್ರೀರಾಮುಲು ಒಂದು ಕಡೆ ಮತ್ತು ಯಡಿಯೂರಪ್ಪ ಅವರು ಒಂದು ಕಡೆ ಪ್ರವಾಸ ನಡೆಸಲಿದ್ದಾರೆ.












Click it and Unblock the Notifications