ನಾಯಿ ಹೇಳಿಕೆಗೆ ಬಿಜೆಪಿ ಕಿಡಿ: ಸಂಸ್ಕೃತಿ ಹೀನ ಕಾಂಗ್ರೆಸ್ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ಬೆಂಗಳೂರು, ಜ. 04: ರಾಜ್ಯ ರಾಜಕೀಯದಲ್ಲಿ ಈಗ ಬರೀ ನಾಯಿಯದ್ದೇ ಮಾತು, ನಾಯಿಯ ನಿಯತ್ತಿನ ಬಗ್ಗೆ ಕಾಂಗ್ರೆಸ್, ಬಿಜೆಪಿ ನಾಯಕರು ಉಪದೇಶ ಕೊಡುತ್ತಿದ್ದಾರೆ. ಕೊನೆಗೆ ನಾಯಿಯನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನಾಯಿ ಕಿತ್ತಾಟ ಮತ್ತೆ ಮುಂದುವರೆಯುತ್ತಿದೆ. ಸಿದ್ದರಾಮಯ್ಯ ಮತ್ತು ಕಾಮಗ್ರೆಸ್ ವಿರುದ್ಧ ಕಿಡಿಕಾರಿರುವ ಕರ್ನಾಟಕ ಬಿಜೆಪಿ ಸಂಸ್ಕೃತಿ ಹೀನ ಕಾಂಗ್ರೆಸ್ ಎಂದು ಟೀಕಿಸಿದೆ.
ಈ ಹಿಂದೆ ನೀವು ಇಷ್ಟೇ ಪ್ರಮಾಣದಲ್ಲಿ ಧೃತಿಗೆಟ್ಟದ್ದು ದೇವೇಗೌಡರನ್ನು ಬಿಟ್ಟು ಪಕ್ಷ ತೊರೆದು ಬಂದಿದ್ದಾಗ. ಈಗ ತಮಗಿನ್ನೂ ಒಂದೂ ಕ್ಷೇತ್ರ ಸಿಗದ ಕಾರಣ ಮತ್ತೆ ಅಷ್ಟೇ ಪ್ರಮಾಣದಲ್ಲಿ ಗಲಿಬಿಲಿಗೊಂಡಿದ್ದೀರಿ ಎಂಬುದನ್ನು ನಿಮ್ಮ ಹೇಳಿಕೆಗಳೇ ಸಾಬೀತುಪಡಿಸುತ್ತಿವೆ @siddaramaiahನವರೆ.
— BJP Karnataka (@BJP4Karnataka) January 4, 2023
4/5
"ನಿಯತ್ತಿನ ಪ್ರಾಣಿ ನಾಯಿಯನ್ನು ನಮಗೆ ಹೋಲಿಸಿದ್ದೀರಿ ಸಿದ್ದರಾಮಯ್ಯನವರೇ. ನಿಜ, ಈ ದೇಶದ ಪರ, ನಮ್ಮ ಜನತೆಯ ಪರ ಹಾಗೂ ಈ ನಾಡಿನ ಅಸ್ಮಿತೆಯ ಪರ ನಮ್ಮ ನಿಯತ್ತು ಸದಾ ಇದ್ದದ್ದೇ. ಆದರೆ ಕಾಂಗ್ರೆಸ್ಸಿಗರ ನಿಯತ್ತು ಸದಾ ಕಾಲ ಇಟಾಲಿಯನ್ ಗಾಂಧಿಗಳು, ಪಿಎಫ್‌ಐನಂಥ ಸಂಘಟನೆಗಳು ಮತ್ತು ಜಿಹಾದಿಗಳ ಪರ ಇರುವುದು ದುರಂತ" ಎಂದಿದೆ.

"ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಹಿರಿಯ ಕಾಂಗ್ರೆಸ್ ನಾಯಕರನ್ನೂ ಹೆಸರು ಹಿಡಿದೇ ಕರೆಯುವುದು. ಅವರು ಹೇಗೇ ಕರೆದರೂ 'ಪಿಡಿ'ನಿಷ್ಠೆ ತೋರುವ ಕಾಂಗ್ರೆಸ್ ನಾಯಕರಿಗೆ ಯಾವುದೇ ರೀತಿಯ ಮುಜುಗರ ಆಗುವುದಿಲ್ಲ. ರಾಜಕೀಯಕ್ಕಾಗಿ ಸ್ವಾಭಿಮಾನವನ್ನೇ ಬಿಟ್ಟು ನಿಲ್ಲುವವರು ಅಧಿಕಾರಕ್ಕಾಗಿ ದೇಶವನ್ನೇ ಬಲಿ ಕೊಡದಿರುತ್ತಾರೆಯೇ..?" ಎಂದು ಪ್ರಶ್ನಿಸಿದೆ.
"ರಾಜ್ಯದ ಮುಖ್ಯಮಂತ್ರಿಗಳನ್ನು ನಾಯಿ ಎಂಬ ಮೂಲಕ ಒಂದು ಕಾಲದಲ್ಲಿ ತಾವೇ ಕೂತಿದ್ದ ಸ್ಥಾನಕ್ಕೆ ಅವಮಾನ ಮಾಡುವ ನೀಚ ಮಟ್ಟಕ್ಕೆ ಇಳಿದಿದ್ದೀರಿ ಸಿದ್ದರಾಮಯ್ಯ ಅವರೇ. ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೇ ಹೊರತು ಬಿಜೆಪಿಗಷ್ಟೇ ಅಲ್ಲ. ಚುನಾವಣಾ ಹೊತ್ತಲ್ಲಿ ನೀಚ ಮಟ್ಟದ ಹೇಳಿಕೆ ನೀಡುವಲ್ಲಿ ನೀವು ನಿಸ್ಸೀಮರು" ಎಂದು ಕಿಡಿ ಕಾರಿದೆ.
"ಈ ಹಿಂದೆ ನೀವು ಇಷ್ಟೇ ಪ್ರಮಾಣದಲ್ಲಿ ಧೃತಿಗೆಟ್ಟದ್ದು ದೇವೇಗೌಡರನ್ನು ಬಿಟ್ಟು ಪಕ್ಷ ತೊರೆದು ಬಂದಿದ್ದಾಗ. ಈಗ ತಮಗಿನ್ನೂ ಒಂದೂ ಕ್ಷೇತ್ರ ಸಿಗದ ಕಾರಣ ಮತ್ತೆ ಅಷ್ಟೇ ಪ್ರಮಾಣದಲ್ಲಿ ಗಲಿಬಿಲಿಗೊಂಡಿದ್ದೀರಿ ಎಂಬುದನ್ನು ನಿಮ್ಮ ಹೇಳಿಕೆಗಳೇ ಸಾಬೀತುಪಡಿಸುತ್ತಿವೆ ಸಿದ್ದರಾಮಯ್ಯ ಅವರೇ" ಎಂದಿದೆ.

"ದೇಶದ ಪ್ರಧಾನ ಮಂತ್ರಿಗಳನ್ನೂ ತಮ್ಮ ನಿರ್ದೇಶನದ ಅನುಸಾರ ಕುಣಿಸುತ್ತಿದ್ದ ಅಧ್ಯಕ್ಷರ ಪರಂಪರೆ ಇರುವ ಪಕ್ಷದಲ್ಲಿ ತಾವಿದ್ದೀರಿ. ಹಾಗಾಗಿ ಇತರರು ನಿಮಗೆ ಸೇವಕ ಮತ್ತು ನಾಯಿಯಂತೆಲ್ಲ ಕಾಣುವುದು ಸಹಜ ಸಿದ್ದರಾಮಯ್ಯ ಅವರೇ. ವಂಶ ಪಾರಂಪರ್ಯ ಆಡಳಿತವಿಲ್ಲದ ಕಾರ್ಯಕರ್ತರ ಪಕ್ಷವಾದ ನಮಗೆ ನಿಮ್ಮ ಮಾತಿನ ಧಾಟಿ ಅಷ್ಟು ಬೇಗ ಅರ್ಥವಾಗುವುದಿಲ್ಲ, ಇರಲಿ" ಎಂದು ವ್ಯಂಗ್ಯವಾಡಿದೆ.
ಸಿಎಂ ವಿರುದ್ಧದ ಹೇಳಿಕೆಗೆ ಬಿಜೆಪಿ ನಾಯಕರೆಲ್ಲರೂ ಪ್ರತಿಕ್ರಿಯೇ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಕೂಡ ಪ್ರತಿಕ್ರಿಯಿಸಿದ್ದು, "ಪ್ರತಿಯೊಂದು ಪ್ರಾಣಿಗಳಿಗೂ ಒಂದೊಂದು ರೀತಿಯ ಗುಣಧರ್ಮಗಳಿವೆ. ಅದರಲ್ಲಿಯೂ ನಾಯಿ ಎಂದರೇ ನಿಷ್ಠೆ ಹಾಗೂ ಪ್ರಾಮಾಣಿಕತೆಯ ಸಂಕೇತ. ನಾನು ಕನ್ನಡ ನಾಡಿನ ಜನರಿಗೆ ಪ್ರಾಮಾಣಿಕ ಸೇವೆಗೈಯಲು ಇರುವಂತಹ ನಾಯಿ" ಎಂದಿದ್ದಾರೆ.











Click it and Unblock the Notifications