BJP 2nd List : ಬಿಜೆಪಿಯ ಹಾಲಿ 8 ಸದಸ್ಯರಿಗೆ ಟಿಕೆಟ್ ಮಿಸ್; ಹೊಸ ಮುಖಗಳಿಗೆ ಹೈಕಮಾಂಡ್ ಮಣೆ- ಇಲ್ಲಿದೆ ಪಟ್ಟಿ
ಬೆಂಗಳೂರು, ಮಾರ್ಚ್ 13 : ಲೋಕಸಭಾ ಚುನಾವಣೆ ಹಿನ್ನೆಲೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಇಂದು ಎರಡನೇ ಪಟ್ಟಿ ಪ್ರಕಟವಾಗಿದೆ. ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳನ್ನ ಘೋಷಿಸಿದ್ದ ಬಿಜೆಪಿ ಎರಡನೇ ಪಟ್ಟಿಯಲ್ಲಿ 72 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ.
ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಹಲವು ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದ್ದು, ಹೊಸ ಮುಖಗಳಿಗೆ ಮಣೆ ಹಾಕಿದೆ. ಹಾಲಿ ಘಟಾನುಘಟಿ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿಸುವ ಮೂಲಕ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದೆ.

ಬಿಜೆಪಿ ಎರಡನೇ ಪಟ್ಟಿಯಲ್ಲಿ ಯಾರಿಗೆ ಟಿಕೆಟ್!
ಚಿಕ್ಕೋಡಿ -ಅಣ್ಣಾ ಸಾಹೇಬ್ ಜೊಲ್ಲೆ
ಬಾಗಲಕೋಟೆ -ಪಿ.ಸಿ.ಗದ್ದಿಗೌಡರ್
ಉಡುಪಿ-ಚಿಕ್ಕಮಗಳೂರು -ಕೋಟ ಶ್ರೀನಿವಾಸ ಪೂಜಾರಿ
ಹಾವೇರಿ -ಬಸವರಾಜ ಬೊಮ್ಮಾಯಿ
ಮೈಸೂರು -ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ಬೆಂಗಳೂರು ಗ್ರಾಮಾಂತರ -ಡಾ.ಸಿ.ಎನ್.ಮಂಜುನಾಥ
ಬೆಂಗಳೂರು ಉತ್ತರ -ಶೋಭಾ ಕರಂದ್ಲಾಜೆ
ಬೆಂಗಳೂರು ದಕ್ಷಿಣ -ತೇಜಸ್ವಿ ಸೂರ್ಯ
ಬೆಂಗಳೂರು ಕೇಂದ್ರ -ಪಿ.ಸಿ.ಮೋಹನ್
ತುಮಕೂರು -ವಿ.ಸೋಮಣ್ಣ
ದಕ್ಷಿಣ ಕನ್ನಡ -ಕ್ಯಾಪ್ಟನ್ ಬ್ರಿಜೇಶ್ ಚೌಟಾ
ಚಾಮರಾಜನಗರ -ಎಸ್.ಬಾಲರಾಜು
ಧಾರವಾಡ -ಪ್ರಹ್ಲಾದ್ ಜೋಶಿ
ಕೊಪ್ಪಳ -ಡಾ.ಬಸವರಾಜ ತ್ಯಾವಟೂರು
ದಾವಣಗೆರೆ -ಗಾಯತ್ರಿ ಸಿದ್ದೇಶ್ವರ್
ಬಳ್ಳಾರಿ -ಬಿ.ಶ್ರೀರಾಮುಲು
ಕಲಬುರಗಿ -ಡಾ.ಉಮೇಶ್ ಜಾಧವ್
ಬೀದರ್ -ಭಗವಂತ ಖೂಬಾ
ವಿಜಯಪುರ -ರಮೇಶ್ ಜಿಗಜಿಣಗಿ
ಶಿವಮೊಗ್ಗ -ಬಿ.ವೈ.ರಾಘವೇಂದ್ರ

ಯಾರ ಬದಲಿಗೆ ಯಾರಿಗೆ ಟಿಕೆಟ್?
ದಕ್ಷಿಣ ಕನ್ನಡ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲು ಬದಲಿಗೆ ಬ್ರಿಜೇಶ್ ಚೌಟಾಗೆ ಟಿಕೆಟ್
ಮೈಸೂರು- ಪ್ರತಾಪ್ ಸಿಂಹ ಬದಲು ಯದುವೀರ ಒಡೆಯರ್ಗೆ ಟಿಕೆಟ್
ಬಳ್ಳಾರಿಯಲ್ಲಿ ದೇವೇಂದ್ರಪ್ಪ ಬದಲು ಶ್ರೀರಾಮುಲುಗೆ ಟಿಕೆಟ್
ಹಾವೇರಿಯಲ್ಲಿ ಶಿವಕುಮಾರ್ ಬದಲು ಬೊಮ್ಮಾಯಿಗೆ ಟಿಕೆಟ್
ತುಮಕೂರಿನಲ್ಲಿ G.S.ಬಸವರಾಜು ಬದಲು ಸೋಮಣ್ಣ ಗೆ ಟಿಕೆಟ್
ಕೊಪ್ಪಳದಲ್ಲಿ ಸಂಗಣ್ಣ ಕರಡಿ ಬದಲು ಡಾ.ಬಸವರಾಜ ಕ್ಯಾವಟರ್
ಹಾಲಿ ಸಂಸದ ಸದಾನಂದಗೌಡರಿಗೆ ಕೈತಪ್ಪಿದ ಬಿಜೆಪಿ ಟಿಕೆಟ್
ಬೆಂಗಳೂರು ಉತ್ತರ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಟಿಕೆಟ್
ಚಾಮರಾಜನಗರದಿಂದ ವಿ.ಶ್ರೀನಿವಾಸ ಪ್ರಸಾದ್ ಬದಲಿಗೆ ಎಸ್.ಬಾಲರಾಜುಗೆ ಟಿಕೆಟ್
ಹೊಸ ಮುಖಗಳು ಮಣೆ ಹಾಕಿದ ಬಿಜೆಪಿ ಹೈಕಮಾಂಡ್
ಡಾ. ಸಿ.ಎನ್. ಮಂಜುನಾಥ್-ಬೆಂಗಳೂರು ಗ್ರಾಮಾಂತರ
ಯದುವೀರ ಕೃಷ್ಣದತ್ತ ಒಡೆಯರ್-ಮೈಸೂರು-ಕೊಡಗು
ಕ್ಯಾ. ಬ್ರಿಜೇಶ್ ಚೌಟ-ದಕ್ಷಿಣ ಕನ್ನಡ
ಕೋಟ ಶ್ರೀನಿವಾಸ ಪೂಜಾರಿ-ಉಡುಪಿ-ಚಿಕ್ಕಮಗಳೂರು
ಗಾಯತ್ರಿ ಸಿದ್ದೇಶ್ವರ-ದಾವಣಗೆರೆ
ಡಾ. ಬಸವರಾಜ ಕ್ಯಾವತ್ತೂರ್-ಕೊಪ್ಪಳ











Click it and Unblock the Notifications