ಲೋಕಸಭೆ ಚುನಾವಣೆ ಗೆಲ್ಲಲು ವಾಟ್ಸ್‌ಆಪ್ ಮೊರೆ ಹೋಗಲಿದೆ ರಾಜ್ಯ ಬಿಜೆಪಿ

ಬೆಂಗಳೂರು, ಜುಲೈ 25: ಕೆಲವು ತಿಂಗಳುಗಳ ಹಿಂದಷ್ಟೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಪಡೆದು ಬೀಗಿರುವ ಬಿಜೆಪಿ ಈಗ ಲೋಕಸಭೆ ಚುನಾವಣೆಯಲ್ಲೂ ಇದೇ ಪ್ರದರ್ಶನವನ್ನು ಮುಂದುವರೆಸಲು ಸಜ್ಜಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲು ರಾಜ್ಯ ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದ್ದು, ವಿಶೇಷವಾಗಿ ಸಮೂಹ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ತಂತ್ರ ಹೆಣೆಯುತ್ತಿದೆ.

ಲೋಕಸಭೆ ಚುನಾವಣೆಗೂ ಮುಂಚೆ ಪ್ರಚಾರಕ್ಕೆಂದು 35000 ವಾಟ್ಸ್‌ಆಫ್ ಗ್ರೂಪ್‌ಗಳನ್ನು ಬಿಜೆಪಿ ರಚಿಸುತ್ತಿದ್ದು, ವಾಟ್ಸ್ಆಫ್ ಮೂಲಕ ಮೋದಿ ಸಾಧನೆಯನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ.

ಗ್ರೂಪ್‌ಗಳಿಗೆ ಮೋದಿ ಚಿತ್ರ

ಗ್ರೂಪ್‌ಗಳಿಗೆ ಮೋದಿ ಚಿತ್ರ

ಎಲ್ಲಾ ಗ್ರೂಫ್‌ಗಳಿಗೆ ಮೋದಿಯ ಭಾವಚಿತ್ರ ಕಡ್ಡಾಯಾಗಿ ಇರಬೇಕು, ಮೋದಿ ಅವರ 'ಹರ್ ಹರ್ ಮೋದಿ' ರಿಂಗ್‌ಟೋನ್ ಇಟ್ಟುಕೊಳ್ಳಬೇಕು ಎಂಬಿತ್ಯಾದಿ ಸೂಚನೆಗಳನ್ನು ಕಾರ್ಯಕರ್ತರಿಗೆ ನೀಡಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ 25000 ಗ್ರೂಪ್‌

ವಿಧಾನಸಭೆ ಚುನಾವಣೆಯಲ್ಲಿ 25000 ಗ್ರೂಪ್‌

ವಿಧಾನಸಭೆ ಚುನಾವಣೆ ಸಮಯದಲ್ಲಿ 25000 ವಾಟ್ಸ್‌ಆಫ್ ಗ್ರೂಫ್‌ಗಳನ್ನು ರಚಿಸಲಾಗಿತ್ತು. ಈಗ ಹತ್ತು ಸಾವಿರ ಹೆಚ್ಚಿನ ಗ್ರೂಫ್‌ಗಳನ್ನು ರಚಿಸುವಂತೆ ಬಿಜೆಪಿ ಪ್ರಚಾರ ಸಮಿತಿ ಸೂಚಿಸಿದೆ.

ಪ್ರತಿ ಗ್ರೂಪ್‌ನಲ್ಲಿ ಕನಿಷ್ಟ 200 ಸದಸ್ಯರು

ಪ್ರತಿ ಗ್ರೂಪ್‌ನಲ್ಲಿ ಕನಿಷ್ಟ 200 ಸದಸ್ಯರು

ಪ್ರತಿ ಗ್ರೂಫ್‌ನಲ್ಲಿ ಕನಿಷ್ಠ 200 ಜನರನ್ನು ಸೇರಿಸಲೇಬೇಕು ಎಂದು ಸೂಚನೆ ನೀಡಲಾಗಿದ್ದು, ಬೂತ್‌ ಕನಿಷ್ಟ ಒಂದಾದರೂ ಬಿಜೆಪಿಯ ವಾಟ್ಸ್‌ಆಫ್ ಗ್ರೂಫ್ ಇರಲೇಬೇಕು ಎಂಬುದು ಬಿಜೆಪಿ ಪ್ರಚಾರ ಸಮಿತಿ ಮುಖಂಡರ ಆದೇಶವಾಗಿದೆ.

ಬಿಜೆಪಿ ಐಟಿ ಸೆಲ್‌ನಿಂದ ಪ್ರಚಾರ ಸಾಮಗ್ರಿ ಸರಬರಾಜು

ಬಿಜೆಪಿ ಐಟಿ ಸೆಲ್‌ನಿಂದ ಪ್ರಚಾರ ಸಾಮಗ್ರಿ ಸರಬರಾಜು

ಮೋದಿ ಪರ ಪ್ರಚಾರ ಸಾಮಗ್ರಿ, ಲೇಖನ, ಚಿತ್ರಗಳು ಮುಂತಾದವುಗಳನ್ನು ಬಿಜೆಪಿಯ ಐಟಿ ಸೆಲ್ ಎಲ್ಲಾ ಗ್ರೂಪ್‌ಗಳಿಗೆ ಹಂಚಿಕೆ ಮಾಡುತ್ತದೆ. ಇದೇ ಲೇಖನಗಳನ್ನು, ಚಿತ್ರಗಳನ್ನು ಕಾರ್ಯಕರ್ತರು ಗ್ರೂಪ್‌ಗಳಲ್ಲಿ ಹರಿಬಿಟ್ಟು ಮೋದಿ ಪರ ಪ್ರಚಾರ ಮಾಡಲಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ

ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಸಾಮಾಜಿಕ ಜಾಲತಾಣ ಅತ್ಯಂತ ಮಹತ್ವದ ಪಾತ್ರ ವಹಿಸಿತ್ತು. ಆದರೆ ಆಗ ಪ್ರತಿಪಕ್ಷಗಳು ಸಾಮಾಜಿಕ ಜಾಲತಾಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈ ಬಾರಿ ಎಲ್ಲಾ ಪಕ್ಷಗಳು ಸಾಮಾಜಿಕ ಜಾಲತಾಣದಲ್ಲಿ ಶಕ್ತವೇ ಆಗಿದ್ದು ಅಲ್ಲಿಯೂ ಪ್ರಬಲ ಪೈಪೋಟಿ ಇದೆ.

ವಾಟ್ಸ್‌ಆಪ್‌ ಮೇಲೆ ನಿಯಂತ್ರಣ

ವಾಟ್ಸ್‌ಆಪ್‌ ಮೇಲೆ ನಿಯಂತ್ರಣ

ಜನ ಸಮೂಹದಿಂದ ಹತ್ಯೆ ಪ್ರಕರಣಗಳಿಗೆ ವಾಟ್ಸ್‌ಆಫ್ ಫಾರ್ವರ್ಡ್‌ಗಳು ಕಾರಣವಾಗಿರುವ ಕಾರಣ ವಾಟ್ಸ್ಆಪ್ ತನ್ನ ಸಂದೇಶಗಳ ಮೇಲೆ ನಿಯಂತ್ರಣ ಹೇರಿದ್ದು, ಒಂದು ಬಾರಿಗೆ 5 ಗ್ರೂಪ್‌ಗಳಿಗೆ ಮಾತ್ರವೇ ಸಂದೇಶ ಕಳುಹಿಸಬಹುದಾಗಿದೆ. ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವಲ್ಲಿಯೂ ವಾಟ್ಸ್‌ಆಫ್ ಕಾರ್ಯೋನ್ಮುಖವಾಗಿದ್ದು, ಚುನಾವಣೆ ಹೊತ್ತಿಗೆ ಇನ್ನಷ್ಟು ಬದಲಾವಣೆಗಳಾಗುವ ಸಂಭವವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+