ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಂದೆ ಇನ್ನಿಲ್ಲ
ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ತಂದೆ ಬೆಂಗಳೂರಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ತಡರಾತ್ರಿ ಈ ಘಟನೆ ನಡೆದಿದ್ದು, ಅವರಿಗೆ 90 ವರ್ಷ ವಯಸ್ಸಾಗಿತ್ತು. ಹೀಗಾಗಿ ಸಿ.ಪಿ.ಯೋಗೇಶ್ವರ್ ತಂದೆ ಪುಟ್ಟಮಾದೇಗೌಡ ಅವರಿಗೆ ವಯೋಸಹಜ ಕಾಯಿಲೆಗಳು ಕಾಡುತ್ತಿದ್ದವು. ಅನಾರೋಗ್ಯದ ಕಾರಣಕ್ಕೆ ಅವರು ಚಿಕಿತ್ಸೆಯನ್ನ ಕೂಡ ಪಡೆಯುತ್ತಿದ್ದರು.
90 ವರ್ಷದ ಪುಟ್ಟಮಾದೇಗೌಡ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆ ನೀಡಲಾಗುತ್ತಿತ್ತು. ರಾಮನಗರ ಜಿಲ್ಲೆಯ ಚನ್ನಪಟ್ಟಣದ ಶಿಕ್ಷಕರ ಗ್ರಾಮ ಎಂದೇ ಹೆಸರು ಗಳಿಸಿರುವ ಚಕ್ಕರೆ ಗ್ರಾಮದ ಮೂಲದವರು ಪುಟ್ಟಮಾದೇಗೌಡ ಅವರು. ಮೃತರು ಪತ್ನಿ ಸೇರಿ ಮೂರು ಗಂಡು ಮಕ್ಕಳು & ಇಬ್ಬರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ. ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೀಶ್ವರ್, ಸಿ.ಪಿ. ಗಂಗಾಧರ್, ಸಿ.ಪಿ. ರಾಜೇಶ್ ಮತ್ತು ಸಿ.ಪಿ. ಪುಷ್ಪ, ಸಿ.ಪಿ. ಭಾಗ್ಯ ಅವರನ್ನ ಅಗಲಿದ್ದಾರೆ ಪುಟ್ಟಮಾದೇಗೌಡ ಅವರು. ಪುಟ್ಟಮಾದೇಗೌಡರ ಪುತ್ರರ ಪೈಕಿ ಸಿಪಿ ಯೋಗೇಶ್ವರ್ ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು.

ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು
ಮೃತ ಪುಟ್ಟಮಾದೇಗೌಡ ಅವರು ಚನ್ನಪಟ್ಟಣ & ರಾಮನಗರ ತಾಲೂಕಿನ ಹಲವಾರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಆಗಿದ್ದರು. ಅಲ್ಲದೇ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಗೌರವ ಅಧ್ಯಕ್ಷರಾಗಿದ್ರು. ಪುಟ್ಟಮಾದೇಗೌಡ ಅವರ ಸಾವಿನಿಂದ ಚಕ್ಕೆರೆ ಗ್ರಾಮದಲ್ಲಿ ಮೌನ ಈಗ ಅವರಿಸಿದೆ. ಪಾರ್ಥಿವ ಶರೀರವು ಭಾನುವಾರ ರಾತ್ರಿ ಸ್ವಗ್ರಾಮ ಚಕ್ಕೆರೆಗೆ ಆಗಮಿಸಿದ್ದು, ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೃತರ ಸ್ವಗ್ರಾಮ ಚಕ್ಕರೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ.
ರಾಜಕಾರಣಿಗಳು & ಗಣ್ಯರಿಂದ ಸಾಂತ್ವನ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾದ ಡಾ. ಮಂಜುನಾಥ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಆ. ದೇವೇಗೌಡ ಮತ್ತು ಶಾಸಕ ಕದಲೂರು ಉದಯ್ ಸೇರಿ ರಾಜಕೀಯ ಗಣ್ಯರು ಹಾಗೂ ಮುಖಂಡರು ಮೃತರ ಅಂತಿಮ ದರ್ಶನ ಪಡೆದಿದ್ದು, ಸಿಪಿ ಯೋಗೇಶ್ವರ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.












Click it and Unblock the Notifications