ಎಚ್‌ಡಿಕೆಯದ್ದು ಕೌರವ ಆಡಳಿತ, ಸಿದ್ದರಾಮಯ್ಯ ದುಶ್ಯಾಸನ: ಬಿಜೆಪಿ

ಬೆಂಗಳೂರು, ಜನವರಿ 28: ಸಿದ್ದರಾಮಯ್ಯ ಅವರು ಇಂದು ವರುಣಾ ಕ್ಷೇತ್ರದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯ ಮೇಲೆ ಸಿಟ್ಟಾಗಿ ಮೈಕ್ ಕಸಿದುಕೊಂಡಿರುವುದನ್ನು ಕರ್ನಾಟಕ ಬಿಜೆಪಿ ಖಾರವಾಗಿ ಟೀಕಿಸಿದೆ.

ಸಿದ್ದರಾಮಯ್ಯ ಅವರು ಮಹಿಳೆಯಿಂದ ಮೈಕ್ ಕಸಿದುಕೊಂಡಾಗ ಅದರ ಜೊತೆ ಆಕೆಯ ದುಪಟ್ಟಾ ಸಹ ಸಿದ್ದರಾಮಯ್ಯ ಅವರು ಕೈಗೆ ಸಿಕ್ಕಿಕೊಂಡು ಬಿಟ್ಟಿತ್ತು. ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿಯು 'ಕೌರವ ಆಡಳಿತದಲ್ಲಿ ದುಶ್ಯಾಸನ' ಎಂದು ಬರೆದು ಖಾರವಾಗಿಯೇ ಟೀಕಿಸಿದೆ.

ಇದೇ ಘಟನೆ ಸಂಬಂಧ ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ ಸಿಎಂ ಕುಮಾರಸ್ವಾಮಿ ಮಹಿಳೆಯನ್ನು 'ಎಲ್ಲಿ ಮಲಗಿದ್ದೆ' ಎಂದು ಕೇಳುತ್ತಾರೆ. ಜೆಡಿಎಸ್ ಮಂತ್ರಿ ಸಾ.ರಾ.ಮಹೇಶ್ ಮಹಿಳಾ ಪೊಲೀಸ್ ಅಧಿಕಾರಿಯನ್ನು 'ಬ್ಲಡಿ ರಾಸ್ಕಲ್' ಎನ್ನುತ್ತಾರೆ. ಈಗ ಸಿದ್ದರಾಮಯ್ಯ ಮಹಿಳೆಗೆ ಬಹಿರಂಗವಾಗಿ ಬೆದರಿಕೆ ಹಾಕಿ ಬೈದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

BJP Karnataka tweets about Siddaramaiah verbal spat with woman in Varuna

ಸಿದ್ದರಾಮಯ್ಯ ಅವರು ಮಹಿಳೆ ಕೈಯಿಂದ ಮೈಕ್ ಕಸಿದುಕೊಳ್ಳುತ್ತಿರುವ ವಿಡಿಯೋ ಹಾಕಿರುವ ಬಿಜೆಪಿ, 'ದುಶ್ಯಾಸನ ಮತ್ತೆ ಅವತಾರವೆತ್ತಿದ್ದಾನೆ, ಆತ ಕರ್ನಾಟಕ ಸರ್ಕಾರದಲ್ಲಿ ಅಧಿಕಾರ ಅನುಭವಿಸುತ್ತಿದ್ದಾನೆ ಎಂದು ಹೇಳಿರುವ ಬಿಜೆಪಿ. ಕಾಂಗ್ರೆಸ್ ಮತ್ತು ಜೆಡಿಎಸ್‌ ಮಹಿಳೆಗೆ ಗೌರವ ಕೊಡುವ ರೀತಿ ಇದು ಎಂದು ಟೀಕಿಸಿದೆ.

ಬಿಜೆಪಿಯ ಹಲವು ನಾಯಕರು ಸಿದ್ದರಾಮಯ್ಯ ಅವರ ವರ್ತನೆಯನ್ನು ಖಂಡಿಸಿದ್ದಾರೆ. ಸಿಟಿ.ರವಿ, ಅರವಿಂದ ಲಿಂಬಾವಳಿ, ಈಶ್ವರಪ್ಪ ಇನ್ನೂ ಹಲವರು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+