ತಾಕತ್ತಿದ್ದರೆ ಪರಮೇಶ್ವರ್ ಅವರನ್ನು ಸಿಎಂ ಮಾಡಿ: ಯಡಿಯೂರಪ್ಪ ಸವಾಲು

ಬೆಂಗಳೂರು, ಜೂನ್ 5: ತಾಕತ್ತಿದ್ದರೆ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ರಾಜ್ಯದ ಮೀಸಲು ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಆದರೆ, ಕೇಂದ್ರ ಸಚಿವ ಸಂಪುಟದಲ್ಲಿ ಒಬ್ಬ ದಲಿತ ಸಂಸದನಿಗೂ ಸ್ಥಾನ ದೊರಕಿಲ್ಲ. ಇದಕ್ಕಿಂತ ದೊಡ್ಡ ಅನ್ಯಾಯ ಮತ್ತು ದ್ರೋಹ ಯಾವುದಿದೆ ಎಂದು ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಸಿದ್ದರಾಮಯ್ಯ ಅವರ ಹೇಳಿಕೆಗೆ ಟಾಂಗ್ ನೀಡಿರುವ ಯಡಿಯೂರಪ್ಪ, ನಿಮಗೆ ತಾಕತ್ತಿದ್ದರೆ ದಲಿತ ನಾಯಕ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿಯ ದಲಿತ ಸಂಸದರಿಗೆ ಸಚಿವ ಸ್ಥಾನದ ಸಿಗುವುದರ ಕುರಿತು ನಿಮಗೆ ಚಿಂತೆ ಬೇಡ. ಮೊದಲು ನಿಮ್ಮ ಪಕ್ಷದವರಿಗೆ ಸೂಕ್ತ ಸ್ಥಾನ ನೀಡಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ನೀವು ಚಿಂತೆ ಮಾಡೋದು ಬೇಡ

ನೀವು ಚಿಂತೆ ಮಾಡೋದು ಬೇಡ

ರಾಜ್ಯದ ದಲಿತ ಸಂಸದರಿಗೆ ಸಚಿವ ಸ್ಥಾನ ಕೊಡುವುದು ನಮ್ಮ ಜವಾಬ್ದಾರಿ. ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ಯಡಿಯೂರಪ್ಪ, ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು.

ದಲಿತ ಸಂಸದನಿಗೆ ಅವಕಾಶ ಸಿಕ್ಕಿಲ್ಲ

ಬಾಯಿ ಬಡಾಯಿ ಮೂಲಕ ದಲಿತರ ಉದ್ಧಾರ ಆಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಮೀಸಲು ಕ್ಷೇತ್ರಗಳಲ್ಲಿ ಕೂಡಾ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಅವರಿಗೆ ಅಭಿನಂದನೆಗಳು. ಆದರೂ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಯಾವ ದಲಿತ ಸಂಸದನಿಗೂ ಅವಕಾಶ ಸಿಕ್ಕಿಲ್ಲ. ಇದಕ್ಕಿಂತ ದೊಡ್ಡ ಅನ್ಯಾಯ, ದ್ರೋಹ ಬೇರೇನಿದೆ? ಎಂದು ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಬಿಜೆಪಿಯನ್ನು ಟೀಕಿಸಿದ್ದರು.

ಕಪಟ ದಲಿತ ಪ್ರೇಮ

ಸಿದ್ದರಾಮಯ್ಯನವರೇ ಬಿಜೆಪಿ ಎಂದಿಗೂ ಕಾಂಗ್ರೆಸ್ ರೀತಿ ಜಾತಿ ರಾಜಕಾರಣ ಮಾಡುವುದಿಲ್ಲ. ನಿಮ್ಮ ಕಪಟ ದಲಿತ ಪ್ರೇಮವನ್ನು ನಿಲ್ಲಿಸಿ. ದಲಿತರಿಗೆ ಅತ್ಯಂತ ಹೆಚ್ಚಿನ ಸ್ಥಾನಮಾನ ಮತ್ತು ಗೌರವ ಕೊಟ್ಟಿರುವುದು ಬಿಜೆಪಿ ಎನ್ನುವುದು ಎಲ್ಲರಿಗೂ ತಿಳಿದಿದೆ. ದಲಿತ ನಾಯಕರಾದ ಡಾ. ಪರಮೇಶ್ವರ್ ಮತ್ತು ಖರ್ಗೆ ಅವರನ್ನು ನೀವು ಸೋಲಿಸಿದ್ದು ಜನತೆಗೆ ತಿಳಿದಿದೆ ಎಂದು ಬಿಜೆಪಿ ನಾಯಕ ಸಿಟಿ ರವಿ ಟೀಕಿಸಿದ್ದಾರೆ.

ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಯ ನೆಹರು

ಡಾ. ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿ ಅವರನ್ನು ಅವಮಾನಿಸಿದ್ದು ಪ್ರಧಾನಿ ನೆಹರು. ನಿಮ್ಮ ನೀಚ ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬ್ ರವರಿಗೆ ಭಾರತ ರತ್ನ ಕೊಡುವ ಕನಿಷ್ಠ ಕಾಳಜಿಯನ್ನು ತೋರಿಸಲಿಲ್ಲ. ಅಂಬೇಡ್ಕರ್ ರವರ ಆದರ್ಶವನ್ನು ಎತ್ತಿ ಹಿಡಿಯುತ್ತಿರುವುದು ಬಿಜೆಪಿ ಮಾತ್ರ ಎಂದು ನಿಮಗೆ ತಿಳಿದಿರಲಿ ಎಂದು ಸಿ.ಟಿ. ರವಿ ಮತ್ತೊಂದು ಟ್ವೀಟ್ ಮಾಡಿದ್ದರು.

ನೀಚ ರಾಜಕಾರಣ ಮಾಡಿ ಸೋಲಿಸಿದವರು

ಮುಖ್ಯಮಂತ್ರಿಯಾಗಲು ಎಲ್ಲ ರೀತಿಯಲ್ಲೂ ಅರ್ಹತೆ ಹೊಂದಿದ್ದ ಡಾ ಪರಮೇಶ್ವರ್ ಅವರನ್ನು 2013ರಲ್ಲಿ ನೀಚ ರಾಜಕಾರಣ ಮಾಡಿ ಸೋಲಿಸಿದ ಮಹಾನ್ ದಲಿತ ಪ್ರೇಮಿ ನೀವು. ಅವರು ಕಾಡಿ ಬೇಡಿ ನಿಮ್ಮ ಮಂತ್ರಿಮಂಡಲದಲ್ಲಿ ಸಚಿವರಾದರು. ದಲಿತರು ಎಂಬ ಕಾರಣಕ್ಕಾಗಿ ಅಂದು ಕೆಟ್ಟದಾಗಿ ನಡೆಸಿಕೊಂಡ ನೀವು ಇಂದು ದಲಿತರ ಬಗ್ಗೆ ಯಾವ ಮುಖ ಇಟ್ಟುಕೊಂಡು ಮಾತನಾಡುತ್ತೀರ? ಎಂದು ಸಿದ್ದರಾಮಯ್ಯ ಅವರ ವಿರುದ್ಧ ಸಿಟಿ ರವಿ ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+