ದೇವಸ್ಥಾನಗಳ ತೆರವಾದಾಗ ಸುಮ್ಮನಿದ್ದ ಸಿದ್ದರಾಮಯ್ಯ ದರ್ಗಾ ತೆರವಿನ ಬಗ್ಗೆ ಸಿಡಿದಿದ್ದೇಕೆ? ಬಿಜೆಪಿ ಪ್ರಶ್ನೆ
ಬೆಂಗಳೂರು, ಡಿಸೆಂಬರ್ 24: ಹುಬ್ಬಳ್ಳಿ - ಧಾರವಾಡ ದೇವಸ್ಥಾನಗಳ ತೆರವಾದಾಗ ಸುಮ್ಮನಿದ್ದ ಸಿದ್ದರಾಮಯ್ಯ ದರ್ಗಾ ತೆರವಿನ ಬಗ್ಗೆ ಸಿಡಿದಿದ್ದೇಕೆ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಈ ಕುರಿತಾಗಿ ಸರಣಿ ಟ್ವೀಟ್ ಮಾಡಿದ ಬಿಜೆಪಿ, ಹುಬ್ಬಳ್ಳಿ-ಧಾರವಾಡ ದೇವಸ್ಥಾನಗಳ ತೆರವಾದಾಗ ಸುಮ್ಮನಿದ್ದ ಸಿದ್ದರಾಮಯ್ಯ ದರ್ಗಾ ತೆರವಿನ ಬಗ್ಗೆ ಸಿಡಿದಿದ್ದೇಕೆ? ಜನರಿಗೆ ಇದೆಲ್ಲ ಸ್ಪಷ್ಟವಾಗಿ ಗೋಚರವಾಗಿದ್ದಕ್ಕೇ ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ ಎಂದು ಕಿಡಿಕಾಅರಿದೆ.
ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ವೀರಶೈವ ಮತ್ತು ಲಿಂಗಾಯತರ ಪ್ರತ್ಯೇಕ ಧರ್ಮ ಸ್ಥಾಪಿಸಲು ಸಿದ್ದರಾಮಯ್ಯ ಮುಂದಾಗಿದ್ದರು. ಹೀಗೆ ಹಿಂದೂಗಳ ನಡುವೆ ಕಂದಕ ಸೃಷ್ಟಿಸಿ, ಒಡೆದು ಆಳುವ ನೀತಿ ಪ್ರಯೋಗಿಸಿದ್ದಕ್ಕೇ ಅಲ್ಲವೇ ಇವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು? ಎಂದು ಪ್ರಶ್ನಿಸಿದೆ.

ಜಯಂತಿಯ ಕಲ್ಪನೆಯೇ ಇಲ್ಲದ ಸಮುದಾಯದಲ್ಲಿ ಜಯಂತಿ ಆಚರಿಸಿದವರು ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗಾಗಿ ಟಿಪ್ಪು ಜಯಂತಿ ಆಚರಿಸಿ, ಹಿಂದೂಗಳ ಭಾವನೆ ಕೆರಳಿಸಿದರೆ ಎಷ್ಟು ದಿನ ಜನರು ಕಾಂಗ್ರೆಸ್ಸನ್ನು ಸಹಿಸುತ್ತಾರೆ? ಎಂದು ಕಿಡಿಕಾರಿದೆ.
ಹಿಂದೂ ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣ ಸಾಧಿಸುವ, ದತ್ತಿ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಹೊರಟವರು ಸಿದ್ದರಾಮಯ್ಯ. ಹಿಂದೂಗಳನ್ನು ದಮನಿಸಲು ಹವಣಿಸಿದ್ದಕ್ಕೇ ಅಲ್ಲವೇ ನಿಮಗಿನ್ನೂ ಭದ್ರ ನೆಲೆ ಸಿಗದಿರುವುದು? ಎಂದು ತಿವಿದಿದೆ.
ಹಿಂದೂ ಧರ್ಮದಲ್ಲಿ ಗೋವಿಗೆ ತಾಯಿಯ ಸ್ಥಾನವಿದೆ. ಮುಖ್ಯಮಂತ್ರಿಯಾಗಿದ್ದಾಗ ಗೋಮಾಂಸ ತಿನ್ನುತ್ತೇನೆ ಎಂದು ಹೇಳಿಕೆ ನೀಡಿದವರು. ಹಿಂದೂ ರಾಷ್ಟ್ರದಲ್ಲಿ ಹಿಂದೂವಾಗಿ ಹಿಂದೂಗಳನ್ನೇ ಅವಮಾನಿಸುವುದು ಎಂಥ ವಿಕೃತ ಮನಸ್ಥಿತಿ?

ಹಿಂದೂ ಕಾರ್ಯಕರ್ತರ ವಿರುದ್ಧ ಹೋರಾಡಿ ಎಂದವರು ಸಿದ್ದರಾಮಯ್ಯ. ಇವರ ಬೆಂಬಲದಿಂದ ದೇಶದ್ರೋಹಿ ಪಿಎಫ್ಐ ಸದಸ್ಯರು, ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದರು. ಪಿಎಫ್‌ಐ ಕಾರ್ಯಕರ್ತರ ಬಗ್ಗೆ ಮೃದು ಧೋರಣೆ ತಳೆದು ಪ್ರಕರಣಗಳನ್ನು ಕೈ ಬಿಟ್ಟಿದ್ದಕ್ಕೇ ಅಲ್ಲವೇ ಇನ್ನೂ ಕುಕ್ಕರ್ ಬ್ಲಾಸ್ಟ್ ಆಗಿದ್ದು? ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.












Click it and Unblock the Notifications